ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಗೆ ಭಾರತೀಯ ಅಧ್ಯಕ್ಷ

Posted By:
Subscribe to Oneindia Kannada

ದುಬೈ, ನವೆಂಬರ್ 13: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ ಸ್ಥಾನ ಮೊಟ್ಟ ಮೊದಲ ಬಾರಿಗೆ ಭಾರತೀಯರೊಬ್ಬರಿಗೆ ದಕ್ಕಿದೆ. ತೀವ್ರ ಪೈಪೋಟಿಯ ನಡುವೆ ಎಫ್ ಐಎಚ್ ನ ನೂತನ ಅಧ್ಯಕ್ಷರಾಗಿ ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರ ಆಯ್ಕೆಯಾಗಿದ್ದಾರೆ.

ದುಬೈನಲ್ಲಿ ಶನಿವಾರ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ಆಸ್ಟ್ರೀಯಾದ ಕೆನ್ ರೀಡ್ ಮತ್ತು ಐರ್ಲೆಂಡಿನ ಡೇವಿಡ್ ಬಾಲಬಿರ್ನೀ ಅವರನ್ನು ಬಾತ್ರಾ ಸೋಲಿಸಿದರು. ಬಾತ್ರಾ ಅವರು 68 ಮತಗಳನ್ನು ಪಡೆದು ಎಫ್ ಐಎಚ್ ನ 13ನೇ ಅದ್ಯಕ್ಷರಾಗಿ ಆಯ್ಕೆಯಾದರೆ ಬಾಲಬಿರ್ನಿ 29 ಹಾಗೂ ರೀಡ್ 13 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾದರು.

Narinder Batra becomes first Indian President of FIH

ಬಾತ್ರಾ ಅವರ ಆಯ್ಕೆ ಮೂಲಕ ಕಳೆದ ಹಲವಾರು ದಶಕಗಳಿಂದ ಐರೋಪ್ಯರ ಸ್ವಾಮ್ಯದಲ್ಲಿದ್ದ ಎಫ್ ಐಎಚ್ ಇದೇ ಮೊದಲ ಬಾರಿಗೆ ಏಷನ್ನರ ಪಾಲಾಗಿದೆ. 2008 ರಿಂದ ಸ್ಪೇನಿನ ಲಿಂನ್ಡ್ರೋ ನೆಗ್ರೆ ಅವರು ಅಧ್ಯಕ್ಷ ಸ್ಥಾನದಲ್ಲಿದ್ದರು.
59ರ ಹರೆಯದ ನರೀಂದರ್ ಬಾತ್ರ ಅವರು 2014ರ ಅಕ್ಟೋಬರ್ ನಲ್ಲಿ ಹಾಕಿ ಇಂಡಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಅವರು ಹಾಕಿ ಇಂಡಿಯಾದ ಕಾರ್ಯದರ್ಶಿಯಾಗಿದ್ದರು. ಕಳೆದ ಕೆಲವು ವಾರಗಳಿಂದ ವಿಶ್ವಾದ್ಯಂತ ಸಂಚರಿಸಿ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಚಾರ ನಡೆಸಿದ್ದರು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Narinder Batra defeated David Balbirnie of Ireland and Australia's Ken Read to become the 12th FIH President the first Asian to grab the post.
Please Wait while comments are loading...