ಚಿನ್ನ ಗೆದ್ದರೂ ಕರ್ನಾಟಕದ ಪೂವಮ್ಮ ವಿಶ್ವ ಚಾಂಪಿಯನ್ ಷಿಪ್ ಗೆ ಇಲ್ಲ

Posted By:
Subscribe to Oneindia Kannada

ನವದೆಹಲಿ, ಮೇ 12 : ಇಲ್ಲಿ ಗುರುವಾರ ಆರಂಭಗೊಂಡ ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್ ಅಥ್ಲೆಟಿಕ್ಸ್ ಕೂಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಕರ್ನಾಟಕದ ಎಂ ಆರ್‌ ಪೂವಮ್ಮ ಚಿನ್ನ ಗೆದ್ದರು.

ಆದರೆ, ನಿಗದಿತ ಸಮಯಕ್ಕಿಂತ ಗುರಿಮುಟ್ಟದೆ ವಿಶ್ವ ಚಾಂಪಿಯನ್ ಷಿಪ್ ಗೆ ಅರ್ಹತೆ ಪಡೆಯಲು ವಿಫಲರಾಗಿ ನಿರಾಸೆಗೊಳಗಾದರು.

ಪೂವಮ್ಮ ಚಿನ್ನ ಗೆದ್ದರೂ ನಿಗದಿತ ಸಮಯಕ್ಕಿಂತ ಗುರಿಮುಟ್ಟದೆ ವಿಶ್ವ ಚಾಂಪಿಯನ್ ಷಿಪ್ ಗೆ ಅರ್ಹತೆ ಪಡೆಯಲು ವಿಫಲರಾದರು. ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 52.66 ಸೆಕೆಂಡಿನಲ್ಲಿ ಗುರಿ ತಲುಪಿದ ಪೂವಮ್ಮ ಕೂದಲೆಳೆ ಅಂತರದಲ್ಲಿ ಕೇರಳದ ಜಿಸ್ನಾ ಮ್ಯಾಥ್ಯೂ (52.67ಸೆ) ಅವರನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಕ್ಕಿದರು.

MR Poovamma win gold at Indian Athletics Grand Prix

ಕೇವಲ 16 ಸೆಕೆಂಡ್ ಅಂತರದಲ್ಲಿ ಪೂವಮ್ಮ ವಿಶ್ವ ಚಾಂಪಿಯನ್ ಷಿಪ್ ಗೆ ಅರ್ಹತೆ ಪಡೆಯಲು ವಿಫಲರಾದರು. ಪಶ್ಚಿಮ ಬಂಗಾಳದ ದೇಬಶ್ರೀ ಮಜುಂದಾರ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಪುರುಷರ 400 ಮೀ ಓಟದಲ್ಲಿ ತಮಿಳುನಾಡಿನ ರಾಜೀವ ಆರೋಕ (46.94ಸೆ) ಚಿನ್ನ ಗೆದ್ದರು. ಬೆಳ್ಳಿ ಮತ್ತು ಕಂಚಿನ ಪದಕ ಕ್ರಮವಾಗಿ ದೆಹಲಿಯ ಅಮೋಜ್ ಜೇಕಬ್ ಮತ್ತು ಸಚಿನ್‌ ರಾಬಿ ಗಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Top athletes M R Poovamma clinched gold in their respective events at the second leg of the Indian Grand Prix Athletics Meet on Thursday. Poovamma missed the World Championships qualifying standard of 52.10sec by more than half a second.
Please Wait while comments are loading...