ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಾವನ್ನು ಗೆದ್ದ ಎಫ್ 1 ವೀರ ಮೈಕಲ್ ಶೂಮಾಕರ್

By Mahesh

ಬೆಂಗಳೂರು, ಜೂ.16: ಜರ್ಮನಿ ಫಾರ್ಮುಲಾ ಒನ್ ಕಾರು ಚಾಲಕ ಮೈಕಲ್ ಶೂಮಾಕರ್ ಅವರು ಕೋಮಾದಿಂದ ಪ್ರಜ್ಞಾವಸ್ಥೆಗೆ ಮರಳಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅವರ ವಕ್ತಾರರು ಸೋಮವಾರ ತಿಳಿಸಿದ್ದಾರೆ. ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಎಫ್ 1 ಮಾಜಿ ಚಾಂಪಿಯನ್ ಶೂಮಿ ಆರೋಗ್ಯ ವಿಸ್ಮಯಕರ ರೀತಿಯಲ್ಲಿ ಸುಧಾರಣೆಯಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಸ್ಕೀಯಿಂಗ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಫಾರ್ಮುಲ್ 1 ಚಾಲಕ ಮೈಕಲ್ ಶೂಮಾಕರ್ ಅವರು ಪ್ರಜ್ಞಾವಸ್ಥೆಗೆ ಮರಳಿದ್ದಾರೆ ಅವರನ್ನು CHU ಗ್ರೆನೊಬ್ಲ್ (ಆಸ್ಪತ್ರೆ) ನಿಂದ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ, ಅವರು ಕೋಮಾದಿಂದ ಹೊರ ಬಂದಿರುವುದು ನಮೆಗೆಲ್ಲ ದೊಡ್ಡ ರಿಲೀಫ್ ಎಂದು ಅವರ ವಕ್ತಾರರಾದ ಸಬೀನೆ ಕೆಹ್ಮ್ ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿ ಐಸ್ ಸ್ಕೀಯಿಂಗ್ ಮಾಡುತ್ತಿದ್ದ ವೇಳೆ ಅಪಘಾತಕ್ಕೊಳಗಾಗಿ ಹಲವು ತಿಂಗಳುಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಶೂಮಾಕರ್‌ಗೆ ಇದೀಗ ಪ್ರಜ್ಞೆ ಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Schumacher out of coma, leaves French hospital: Spokeswoman

ಕಳೆದ ಡಿಸೆಂಬರ್ 29ರಂದು ಫ್ರಾನ್ಸ್ ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಮೈಕೆಲ್ ಶೂಮಾಕರ್ ಅವರು ಆಯತಪ್ಪಿ ಕಲ್ಲು ಬಂಡೆಗೆ ಡಿಕ್ಕಿ ಹೊಡೆದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಬಂಡೆಗೆ ಅವರ ತಲೆ ಬಡಿದ ಕಾರಣ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಅವರು ಕೋಮಾ ಸ್ಥಿತಿ ತಲುಪಿದ್ದರು. ಸತತ ಐದು ವಾರಗಳ ಚಿಕಿತ್ಸೆ ಪಡೆದಿದ್ದ ಶೂಮಾಕರ್ ಅವರಿಗೆ ಎರಡು ಪ್ರಮುಖ ಶಸ್ತ್ರ ಚಿಕಿತ್ಸೆ ನಡೆಸಿ ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ತಗೆಯಲಾಗಿತ್ತು.

45 ವರ್ಷದ ಶೂಮಾಕರ್ ಫಾರ್ಮುಲಾ 1 ರೇಸ್‌ನ ಚಾಲಕರಾಗಿದ್ದು, ಅತಿ ಹೆಚ್ಚು ರೇಸ್‌ಗಳನ್ನು ಗೆದ್ದ ದಾಖಲೆಯನ್ನು ಇವರು ಹೊಂದಿದ್ದಾರೆ. ಶೂಮಾಕರ್ ಅವರು ಗುಣಮುಖರಾಗಿ ಬರಲೆಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಅವರ ಅಭಿಮಾನಿಗಳು ಹಾರೈಸಿದ್ದರು.

1991 ರಿಂದ 2012ರ ಬ್ರೆಜಿಲ್ಲಿನ್ ಗ್ರಾಂಡ್ ಪ್ರೀ ತನಕ ಎಫ್ 1 ನಲ್ಲಿ ಜೋರ್ಡನ್, ಬೆನೆಟ್ಟನ್, ಫೆರಾರಿ ಹಾಗೂ ಮರ್ಸಿಡೀಸ್ ತಂಡದ ಪರ ಕಾರು ಚಲಿಸಿರುವ ಶೂಮಾಕರ್ ಅವರು 308 ರೇಸ್ ಗಳ ಪೈಕಿ 91 ರೇಸ್ ಗೆಲುವು ಸಾಧಿಸಿದ್ದು ದಾಖಲೆಯ ಏಳು ಬಾರಿ (1994,1995,2000,2001,2002,2003,2004) 155 ಬಾರಿ ಪೋಡಿಯಂ ಏರಿರುವ ಶೂಮಾಕರ್ 68 ಬಾರಿ ಪೋಲ್ ಸ್ಥಾನ, 77 ಬಾರಿ ಫಾಸ್ಟ್ ಲ್ಯಾಪ್ ದಾಖಲಿಸಿದ್ದಾರೆ. ಯುವ ಎಫ್ 1 ಚಾಲಕರಿಗೆ ಮಾದರಿಯಾಗಿರುವ ಶೂಮಾಕರ್ ಅವರಿಗೆ ಕುದುರೆ ಸವಾರಿ, ಫುಟ್ಬಾಲ್ ಎಂದರೆ ತುಂಬಾ ಇಷ್ಟ. ಅನೇಕ ಚಾರಿಟಿ ಪಂದ್ಯಗಳನ್ನು ಆಯೋಜಿಸಿದ್ದಾರೆ. ಯುನೆಸ್ಕೋ ವಿಶೇಷ ರಾಯಭಾರಿ ಕೂಡಾ ಅಗಿದ್ದಾರೆ. ಶೂಮಾಕರ್ ಮನೆಗೆ ಮರಳಿರುವುದನ್ನು ಅಭಿಮಾನಿಗಳು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X