ಚಿನ್ನದ ಮೀನು ಮೈಕಲ್ ಕೊರಳಿಗೆ 21ನೇ ಪದಕ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 10 : 'ಚಿನ್ನದ ಮೀನು' ಮೈಕಲ್ ಫೆಲ್ಪ್ಸ್ ಅವರು ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಒಂದೇ ರಾತ್ರಿ ಎರಡು ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್ ಪದಕಗಳ ಪಟ್ತಿಯನ್ನು 21ಕ್ಕೇರಿಸಿಕೊಂಡಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಎದುರಾಳಿ ಚಾದ್ ಲೆ ಕ್ಲೊಸ್ ಅವರನ್ನು ಹಿಂದಿಕ್ಕಿ ಬಟರ್ ಫ್ಲೈ 200 ಮೀಟರ್ ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ, 4X200 ಫ್ರೀಸ್ಟೈಲ್ ರಿಲೇನಲ್ಲಿ ಚಿನ್ನ ಸೂರೆಗೊಂಡರು. ಕಾನರ್ ಡೈಯರ್, ಟೊನ್ಲಿ ಹಾಸ್ ಹಾಗು ಲೊಚೆ ರಿಲೇಯಲ್ಲಿದ್ದ ಇತರೆ ಈಜುಪಟುಗಳು.

Rio Olympics 2016: After 20th, Michael Phelps bags 21st gold medal before ending an epic night

ಬಟರ್ ಫ್ಲೈ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ಚಾದ್ ಲೆ ತೀವ್ರ ಪೈಪೋಟಿ ನಡುವೆ ಮೈಕಲ್ ಅವರು 1 ನಿಮಿಷ 53.56 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆದರೆ, ಜಪಾನ್ ನ ಮಾಸಾಟೋ ಸಕಾಯಿ ಅವರು ಅಚ್ಚರಿಯ ಪ್ರದರ್ಶನ ನೀಡಿ ಎರಡನೇ ಸ್ಥಾನಕ್ಕೇರಿದರೆ, ಕೆಂದರೆಸಿ ಅವರು ಮೂರನೇ ಸ್ಥಾನ ಪಡೆದರು. ಲೆ ಕ್ಲೋಸ್ ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Michael Phelps captured his 20th Olympic gold medal in devastating fashion, sealing victory with a kiss, before adding a staggering 21st before the night was over.
Please Wait while comments are loading...