ಫುಟ್ಬಾಲ್: ರೊನಾಲ್ಡೊ ಹಿಂದಿಕ್ಕಿ ಬ್ಯಾಲನ್ ಡಿ'ಓರ್ ಗೆದ್ದ ಮೆಸ್ಸಿ

Posted By:
Subscribe to Oneindia Kannada

ಜ್ಯೂರಿಚ್, ಜ. 11: ಅರ್ಜೆಂಟೀನಾ ಹಾಗೂ ಬಾರ್ಸಿಲೋನಾ ಕ್ಲಬ್ ನ ಸ್ಟಾರ್‌ ಫುಟ್ಬಾಲ್‌ ಆಟಗಾರ ಲಿಯೊನೆಲ್ ಮೆಸ್ಸಿ ಅವರು ದಾಖಲೆ ಬರೆದಿದ್ದಾರೆ. ಫುಟ್ಬಾಲ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಐದನೇ ಬಾರಿಗೆ ಗೆದ್ದುಕೊಂಡಿದ್ದಾರೆ.

ಫೀಫಾ ನೀಡುವ ಬ್ಯಾಲನ್ ಡಿ' ಓರ್ ಪ್ರಶಸ್ತಿ ವರ್ಷದ ಅತ್ಯುತ್ತಮ ಫುಟ್ಬಾಲರ್ ಯಾರು ಎಂಬುದನ್ನು ತಿಳಿಸುತ್ತದೆ. ಪೋರ್ಚುಗಲ್‌ ಹಾಗೂ ರಿಯಲ್ ಮ್ಯಾಡ್ರಿಡ್ ತಂಡದ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಬ್ರೆಜಿಲ್ ಮತ್ತು ಬಾರ್ಸಿಲೋನಾ ಪರ ಆಡುವ ನೇಮಾರ್ ಅವರನ್ನು ಹಿಂದಿಕ್ಕಿ ಮೆಸ್ಸಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

2007ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದ ಎಸಿ ಮಿಲಾನ್, ರಿಯಲ್ ಮ್ಯಾಡ್ರಿಡ್ ಸ್ಟಾರ್ ಕಾಕಾ ಅವರು ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಮೆಸ್ಸಿಗೆ ಪ್ರಶಸ್ತಿ ನೀಡಿದರು. [ಲೆಜೆಂಡ್ ಮೆಸ್ಸಿ ಈಗ ಟಾಟಾ ಮೋಟರ್ಸ್ ರಾಯಭಾರಿ]

Messi

ಮೆಸ್ಸಿ 2009 ರಿಂದ 2012ರ ತನಕ ನಾಲ್ಕು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಬಳಿಕ ಎರಡು ವರ್ಷ ಈ ಪ್ರಶಸ್ತಿ ಕ್ರಿಸ್ತಿಯಾನೊ ರೊನಾಲ್ಡೊ ಪಾಲಾಗಿತ್ತು. ಸತತ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ ರೊನಾಲ್ಡೋ ಅವರ ಕೈಯಿಂದ ಜಾರಿದೆ.

ಪ್ರಶಸ್ತಿಯ ಆಯ್ಕೆಗೆ ನಡೆದ ಮತದಾನದಲ್ಲಿ ಮೆಸ್ಸಿ ಶೇ 41.33 ವೋಟಿಂಗ್‌ ಪಾಯಿಂಟ್‌ ದಾಖಲಿಸಿದರು. ಎದುರಾಳಿ ರೊನಾಲ್ಡೊ (ಶೇ 27.76 ) ಎರಡನೆ ಮತ್ತು ಬ್ರೆಝಿಲ್‌ನ ನೇಮಾರ್‌ (ಶೇ 7.86 ) ಮೂರನೆ ಸ್ಥಾನ ಪಡೆದರು. ಫಿಫಾದ ಸದಸ್ಯ ರಾಷ್ಟ್ರಗಳ ತಂಡದ ನಾಯಕರು,ಮತ್ತು ಕೋಚ್‌, ಆಹ್ವಾನಿತ ಪತ್ರಕರ್ತರು ಮತ ಚಲಾಯಿಸಿದ್ದರು. [ಮೆಸ್ಸಿ ಧೂಳಿಪಟ ಮಾಡಿದ ದಾಖಲೆಗಳು]

ಅಮೆರಿಕನ್‌ ಆಟಗಾರ್ತಿ 33 ವರ್ಷದ ಕಾರ್ಲಿಲಾಯ್ಡ ಮಹಿಳಾ ವರ್ಷದ ಫುಟ್‌ಬಾಲರ್‌ ಪ್ರಶಸ್ತಿ ಗೆದ್ದಿದ್ದಾರೆ. ಸ್ಪೇನ್‌ನ ಲೂಯಿಸ್‌ ಎನ್ರಿಕ್‌ ವರ್ಷದ ಕೋಚ್‌ ಪ್ರಶಸ್ತಿಗೆದ್ದಿದ್ದಾರೆ.

ಫೀಫಾ ವರ್ಷದ ವಿಶ್ವ XI:
ಗೋಲ್ ಕೀಪರ್ : ಮ್ಯಾನ್ಯುಯಲ್ ನ್ಯೂಯರ್,
ಡಿಫೆಂಡರ್: ಡ್ಯಾನಿ ಆಲ್ವೆಸ್, ಸರ್ಗಿಯೋ ರಮೋಸ್, ಥಿಯಾಗೋ ಸಿಲ್ವಾ, ಮಾರ್ಸೆಲೊ
ಮಿಡ್ ಫೀಲ್ಡರ್ಸ್: ಆಂಡ್ರೆಸ್ ಇನಿಯಸ್ಟಾ, ಪಾಲ್ ಪೊಗ್ಬಾ, ಲೂಕಾ ಮೊಡ್ರಿಕ್
ಫಾರ್ವಡ್ಸ್: ನೇಮಾರ್, ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಶ್ಚಿಯಾನೋ ರೊನಾಲ್ಡೊ
(ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Messi wins fifth FIFA award
English summary
Lionel Messi won an unprecedented fifth FIFA Ballon d'Or award, given to the footballer of the year, at a gala ceremony here on Monday, ending his great rival Cristiano Ronaldo's two-year hold on football's top individual prize.
Please Wait while comments are loading...