ಸಿಂಗಪುರ ಎಫ್ 1: ಮರ್ಸಿಡೀಸ್ ಗೆ 'ಜಯ', ಫೋರ್ಸ್ ಇಂಡಿಯಾ 'ಗಯಾ'!

Posted By:
Subscribe to Oneindia Kannada

ಸಿಂಗಪುರ, ಸೆ. 19: ಮರ್ಸಿಡೀಸ್ ನ ಜರ್ಮನಿಯ ಚಾಲಕ ನಿಕೊ ರೋಸ್‌ಬರ್ಗ್‌ ಅವರು 2016ರ ಸಿಂಗಪುರ ಗ್ರಾನ್ ಪ್ರೀಯನ್ನು ಗೆಲ್ಲುವ ಮೂಲಕ ಫಾರ್ಮ್ಯೂಲಾ ಒನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ತಮ್ಮದೇ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಎರಡನೇ ಸ್ಥಾನಕ್ಕೆ ದೂಡಿದ್ದಾರೆ.

ಕೊನೆ ಕ್ಷಣದವರೆಗೂ ರೋಚಕವಾಗಿ ನಡೆದ ರೇಸ್ ನಲ್ಲಿ ರೆಡ್ ಬುಲ್ ನ ಆಸ್ಟ್ರೇಲಿಯಾದ ಚಾಲಕ ಡೇನಿಯಲ್ ರಿಕಿಯಾರ್ಡೊ ಅವರನ್ನು ಹಿಂದಿಕ್ಕಿ ನಿಕೊ ರೋಸ್ ಬರ್ಗ್ ಮೊದಲಿಗರಾಗಿ ಬಂದರು. ಕೇವಲ 0.488 ಸೆಕೆಂಡುಗಳ ಅಂತರದಲ್ಲಿ ಡೇನಿಯಲ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು.[ಭೀಕರ ಅಪಘಾತ: ಅದೃಷ್ಟವಶಾತ್ ಅಲಾನ್ಸೋ ಬಚಾವ್]

ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮರ್ಸಿಡಿಸ್ ನ ಹ್ಯಾಮಿಲ್ಟನ್ ಅವರು 8.038 ಸೆಕೆಂಡುಗಳು ತಡವಾಗಿ ಮೂರನೇ ಸ್ಥಾನದಲ್ಲಿ ರೇಸ್ ಮುಗಿಸಿದರು. ಇನ್ನೂ 6 ರೇಸಿಂಗ್ ಇವೆಂಟ್ ಗಳಿದ್ದು ಯಾರು ವಿಶ್ವ ಚಾಂಪಿಯನ್ ಆಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. [ರುಹಾನ್ ಆಳ್ವಾ ಭವಿಷ್ಯದ ಎಫ್ 1 ಚಾಲಕ]

ಫೋರ್ಸ್ ಇಂಡಿಯಾ ಕಾರು ಅಪಘಾತ

ಫೋರ್ಸ್ ಇಂಡಿಯಾ ಕಾರು ಅಪಘಾತ

ಫೋರ್ಸ್ ಇಂಡಿಯಾ ಕಾರು ಅಪಘಾತ: ರೇಸ್ ವೇಳೆ ಫೋರ್ಸ್ ಇಂಡಿಯಾದ ಚಾಲಕ ಜರ್ಮನಿಯ ನಿಕೊ ಹುಕೆನ್‌ಬರ್ಗ್ ಅವರ ಕಾರು ಅಪಘಾತಕ್ಕೊಳಗಾಯಿತು. ಸಿಂಗಪುರದ ಮರೀನಾ ಬೇ ಸಿಟಿ ಸರ್ಕಿಟ್ ನಲ್ಲಿ ನಡೆದ ಎಫ್ 1 ರೇಸ್ ನಲ್ಲಿ ನಿಕೊ ಬಚಾವ್

ಮರ್ಸಿಡೀಸ್ ಚಾಲಕ ರೋಸ್ ಬರ್ಗ್ ಸಂಭ್ರಮ

ಮರ್ಸಿಡೀಸ್ ಚಾಲಕ ರೋಸ್ ಬರ್ಗ್ ಸಂಭ್ರಮ

ಸಿಂಗಪುರದ ಮರೀನಾ ಬೇ ಸಿಟಿ ಸರ್ಕಿಟ್ ನಲ್ಲಿ ನಡೆದ ಎಫ್ 1 ಗ್ರ್ಯಾನ್ ಪ್ರೀ ಗೆದ್ದ ಮರ್ಸಿಡೀಸ್ ಚಾಲಕ ರೋಸ್ ಬರ್ಗ್(ಮಧ್ಯದಲ್ಲಿ) ಸಂಭ್ರಮ, ರೆಡ್ ಬುಲ್ ನ ಚಾಲಕ ಡೇನಿಯಲ್ (ಎಡಬದಿ) ಹಾಗೂ ಮರ್ಸಿಡೀಸ್ ನ ಸಹ ಚಾಲಕ ಹ್ಯಾಮಿಲ್ಟನ್ (ಬಲಗಡೆ)

ಫೋರ್ಸ್ ಇಂಡಿಯಾ ಕಾರು ನಿಯಂತ್ರಣ ತಪ್ಪಿದ ಕ್ಷಣ

ಫೋರ್ಸ್ ಇಂಡಿಯಾ ಕಾರು ನಿಯಂತ್ರಣ ತಪ್ಪಿದ ಕ್ಷಣ

ಫೋರ್ಸ್ ಇಂಡಿಯಾ ಕಾರು ನಿಯಂತ್ರಣ ತಪ್ಪಿದ ಕ್ಷಣ ಹೀಗಿತ್ತು. ರೇಸ್ ವೇಳೆ ಫೋರ್ಸ್ ಇಂಡಿಯಾದ ಚಾಲಕ ಜರ್ಮನಿಯ ನಿಕೊ ಹುಕೆನ್‌ಬರ್ಗ್ ಅವರ ಕಾರು ಅಪಘಾತಕ್ಕೊಳಗಾಯಿತು. ಆದರೆ, ಹೆಚ್ಚಿನ ತೊಂದರೆ ಇಲ್ಲದೆ ಬಚಾವಾದರು.

ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ನಿಕೋ

ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ನಿಕೋ

ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮರ್ಸಿಡಿಸ್ ನ ಹ್ಯಾಮಿಲ್ಟನ್ ಅವರು 8.038 ಸೆಕೆಂಡುಗಳು ತಡವಾಗಿ ಮೂರನೇ ಸ್ಥಾನದಲ್ಲಿ ರೇಸ್ ಮುಗಿಸಿದರು. ಇನ್ನೂ 6 ರೇಸಿಂಗ್ ಇವೆಂಟ್ ಗಳಿದ್ದು ಯಾರು ವಿಶ್ವ ಚಾಂಪಿಯನ್ ಆಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಮರ್ಸಿಡೀಸ್ ನ ಜರ್ಮನಿಯ ಚಾಲಕ ನಿಕೊ ರೋಸ್‌ಬರ್ಗ್‌

ಮರ್ಸಿಡೀಸ್ ನ ಜರ್ಮನಿಯ ಚಾಲಕ ನಿಕೊ ರೋಸ್‌ಬರ್ಗ್‌

ಮರ್ಸಿಡೀಸ್ ನ ಜರ್ಮನಿಯ ಚಾಲಕ ನಿಕೊ ರೋಸ್‌ಬರ್ಗ್‌ ಅವರು 2016ರ ಸಿಂಗಪುರ ಗ್ರಾನ್ ಪ್ರೀಯನ್ನು ಗೆಲ್ಲುವ ಮೂಲಕ ಫಾರ್ಮ್ಯೂಲಾ ಒನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನಕ್ಕೇರಿದ ಸಂಭ್ರಮ ತಮ್ಮ ತಂಡದೊಡನೆ ಆಚರಿಸಿದ್ದು ಹೀಗೆ

ಚಾಲಕ ನಿಕೊ ರೋಸ್‌ಬರ್ಗ್‌

ಚಾಲಕ ನಿಕೊ ರೋಸ್‌ಬರ್ಗ್‌

ಮರ್ಸಿಡೀಸ್ ನ ಚಾಲಕ ನಿಕೊ ರೋಸ್‌ಬರ್ಗ್‌ ಅವರು ವಿಶ್ವ ಚಾಂಪಿಯನ್ ಆಗಲು ಇನ್ನೂ 6 ರೇಸಿಂಗ್ ಇವೆಂಟ್ ಗಳಿದ್ದು, ಮರ್ಸಿಡೀಸ್ ನ ಚಾಲಕರೇ ಆಗ ಹ್ಯಾಮಿಲ್ಟನ್ ಅವರು ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Rosberg wins Singapore GP
English summary
Nico Rosberg led from beginning to end to win the 2016 Singapore Grand Prix on Sunday (Sep 18) and re-take the lead of the Formula One Drivers' World Championship from his teammate Lewis Hamilton.
Please Wait while comments are loading...