ಒಲಿಂಪಿಕ್ಸ್ ನಲ್ಲಿ ಆಡುವ ಮೇರಿ ಅವರ ಕನಸು ಭಗ್ನ

Posted By:
Subscribe to Oneindia Kannada

ನವದೆಹಲಿ, ಜೂನ್ 23: ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರ ಒಲಿಂಪಿಕ್ಸ್ ಕನಸು ಭಗ್ನಗೊಂಡಿದೆ. ರಿಯೋ ಗೇಮ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾದ ಕೋಮ್ ಗೆ ವೈಲ್ಡ್ ಕಾರ್ಡ್ ಪ್ರವೇಶ ಕೂಡಾ ನಿರಾಕರಿಸಲಾಗಿದೆ.

ಎಐಬಿಎ ಹಂಗಾಮಿ ಸಮಿತಿಯ ಅಧ್ಯಕ್ಷ ಕಿಶನ್ ನಾರ್ಸಿ ಬುಧವಾರ ಈ ಬಗ್ಗೆ ವಿವರಣೆ ನೀಡಿ, 'ಭಾರತ ಈ ಹಿಂದಿನ ಎರಡು ಆವೃತ್ತಿಯ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ 8 ಹಾಗೂ ಅದಕ್ಕಿಂತ ಹೆಚ್ಚು ಬಾಕ್ಸರ್‌ಗಳನ್ನು ಸ್ಪರ್ಧೆಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಮೇರಿಕೋಮ್‌ಗೆ ಒಲಿಂಪಿಕ್ಸ್ ಟಿಕೆಟ್ ಲಭಿಸಿಲ್ಲ' ಎಂದಿದ್ದಾರೆ.

ಕಳೆದ ಎರಡು ಆವೃತ್ತಿಯಲ್ಲಿ 8 ಕ್ಕಿಂತ ಹೆಚ್ಚು ಬಾಕ್ಸರ್‌ಗಳನ್ನು ಒಲಿಂಪಿಕ್ಸ್‌ಗೆ ಕಳುಹಿಸಿಕೊಡದೇ ಇರುವ ದೇಶಗಳಿಗೆ ವೈರ್ಲ್ಡ್ ಕಾರ್ಡ್ ನೀಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಎ) ನಿರ್ಧರಿಸಿದೆ. ಈ ಕಾರಣದಿಂದ ಮೇರಿ ಕೋಮ್ ಗೆ ಅವಕಾಶ ಕೈತಪ್ಪಿದೆ.

Mary Kom denied wild card entry into Rio Olympics

ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ 8 ಬಾಕ್ಸರ್‌ಗಳು ಭಾಗವಹಿಸಿದ್ದರು. ಏಳು ಪುರುಷರು ಹಾಗೂ ಓರ್ವ ಮಹಿಳೆ (ಮೇರಿಕೋಮ್) ಭಾಗವಹಿಸಿದ್ದರು.

ಒಲಿಂಪಿಕ್ಸ್ ಅರ್ಹತೆಗಾಗಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸುತ್ತಿನ ನಂತರ ನಿರ್ಗಮಿಸಿದ್ದ ಮೇರಿ ಕೋಮ್ ಅವರು, ಐಒಎ ನಿರ್ಣಯವನ್ನು ಸ್ವಾಗತಿಸಿ, ನಾನು ಇನ್ನೂ ಫಿಟ್ ಆಗಿದ್ದೇನೆ, ಕ್ರೀಡೆಯನ್ನು ತೊರೆಯುವುದಿಲ್ಲ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chairman of AIBA and the ad-hoc committee, Kishen Narsi, on Thursday confirmed that veteran pugilist M.C. Mary Kom has been denied a wild card entry into Rio Olympics.
Please Wait while comments are loading...