ಸಿಂಧುವಿಗೆ ಸೋಲುಣಿಸಿದ ಶಟ್ಲರ್ ಕರೊಲಿನಾ ಮರಿನ್

Posted By:
Subscribe to Oneindia Kannada

ಸಿಂಗಾಪುರ, ಏಪ್ರಿಲ್ 14: ಸ್ಪೇನ್ ನ ಬ್ಯಾಡ್ಮಿಂಟನ್ ಆಟಗಾರ್ತಿ ಕರೊಲಿನಾ ಮರಿನ್ ಅವರು, ಭಾರತದ ಪಿ.ವಿ. ಸಿಂಧು ವಿರುದ್ಧ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಾಭವಗೊಳಿಸಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಸಿಂಧು ವಿರುದ್ಧ 21-11, 21-15 ಗೇಮ್ ಗಳ ಅಂತರದಲ್ಲಿ ಗೆಲವು ಸಾಧಿಸಿ, ಈ ವಿಭಾಗದ ಸೆಮಿಫೈನಲ್ ಗೆ ಕಾಲಿಟ್ಟರು. ಈ ಸೋಲಿನಿಂದಾಗಿ, ಸಿಂಧು ಅವರು, ಟೂರ್ನಿಯಿಂದ ಹೊರಬಿದ್ದಿದ್ದಾರೆ.

Marin ousts Sindhu in Singapore Superseries quarterfinals

ವಿಶ್ವದ ದ್ವಿತೀಯ ಶ್ರೇಯಾಂಕಿತೆ ಪಿ.ವಿ. ಸಿಂಧು ಅವರು ಇತ್ತೀಚೆಗೆ ಭಾರತದಲ್ಲಿ ನಡೆದಿದ್ದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕರೊಲಿನಾ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಆಗ, ಕಳೆದ ವರ್ಷ ನಡೆದಿದ್ದ ರಿಯೊ ಒಲಿಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ ನಲ್ಲಿ ತಮ್ಮನ್ನು ಪರಾಭವಗೊಳಿಸಿದ್ದ ಕರೊಲಿನಾ ಮರಿನ್ ವಿರುದ್ಧ ಸಿಂಧು ಸೇಡು ತೀರಿಸಿಕೊಂಡರು ಎಂದು ಮಾಧ್ಯಮಗಳು ಬಿಂಬಿಸಿದ್ದವು. ಆದರೆ, ಈಗ ಸಿಂಧು ವಿರುದ್ಧ ಕರೋಲಿನಾ ಮುಯ್ಯಿ ತೀರಿಸಿಕೊಂಡಿದ್ದಾರೆಂದು ಕೆಲ ಅಂತರ್ಜಾಲ ಮಾಧ್ಯಮಗಳು ವರದಿ ಮಾಡಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Ace shuttler P.V. Sindhu suffered a crushing defeat against World No. 3 Carolina Marin in the quarterfinals of the of the Singapore Open Superseries tournament on April 14th, 2017. Marin beat World No. 5 Sindhu 11-21, 15-21 to book a seat in the semi-finals.
Please Wait while comments are loading...