ಈ ಬಾರಿಯ ಫ್ರೆಂಚ್ ಓಪನ್ ನಿಂದ ಶರಪೋವಾ ವಿಮುಖ

Posted By:
Subscribe to Oneindia Kannada

ಲಂಡನ್, ಮೇ 16: ಟೆನಿಸ್ ಲೋಕದ ಸುಂದರಿಯಲ್ಲೊಬ್ಬರಾದ, ರಷ್ಯಾದ ಮರಿಯಾ ಶರಪೋವಾ ಅವರು, ಈ ವರ್ಷದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಸಾಮಾನ್ಯವಾಗಿ ಹಿರಿಯ ಆಟಗಾರ್ತಿಯರಿಗೆ ಅವರ ಆಯಾ ವರ್ಷದ ಶ್ರೇಯಾಂಕ ಸಾಧನೆಯ ಆಧಾರದಲ್ಲಿ ಟೂರ್ನಿಯಲ್ಲಿ ಆಡಲು ನೇರ ಪ್ರವೇಶ (ವೈಲ್ಡ್ ಕಾರ್ಡ್) ನೀಡಲಾಗುತ್ತದೆ. ಅಂದರೆ, ಅವರು ಉಳಿದ ಉದಯೋನ್ಮುಖ ಆಟಗಾರರಂತೆ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿ, ಆನಂತರ ಮುಖ್ಯ ಟೂರ್ನಿಗೆ ಅವಕಾಶ ಪಡೆಯುವ ಸರ್ಕಸ್ ಮಾಡಬೇಕಿರುವುದಿಲ್ಲ.

Maria Sharapova denied French Open wildcard by tournament officials

ಇಂಥ ಅನುಕೂಲ ಕಲ್ಪಿಸುವ ವೈಲ್ಡ್ ಕಾರ್ಡ್ ಮರಿಯಾ ಶರಪೋವಾ ಅವರಿಗೆ ಈ ಬಾರಿ ಸಿಕ್ಕಿಲ್ಲ. ಇದಕ್ಕೆ ಕಾರಣ, ಅವರು, ನಿಷೇಧಿತ ಮೆಲ್ಡೋನಿಯಂ ಸೇವಿಸಿದ್ದಕ್ಕೆ 15 ತಿಂಗಳ ಕಾಲ ನಿಷೇಧಕ್ಕೊಳಗಾಗಿದ್ದರು. ಆ ನಿಷೇಧದ ಶಿಕ್ಷೆಯನ್ನು ಮುಗಿಸಿಕೊಂಡು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟೆನಿಸ್ ಗೆ ಮರಳಿದ್ದಾರೆ.

ಹಾಗಾಗಿ, ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅವರ ಶ್ರೇಯಾಂಕ ಕುಸಿದಿದೆ. ಹಾಗಾಗಿ, ಅವರಿಗೆ ವೈಲ್ಡ್ ಕಾರ್ಡ್ ನೀಡಲಾಗಿಲ್ಲ. ಅಂತೆಯೇ, ಅವರು ಟೂರ್ನಿಯ ಅರ್ಹತಾ ಸುತ್ತಿಗೂ ಅರ್ಹರಾಗುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಹೀಗಾಗಿ, ಎರಡು ಬಾರಿ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದ ಶರಪೋವಾ, ಈ ಬಾರಿ ಟೂರ್ನಿಯಿಂದ ದೂರ ಉಳಿಯಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former world No 1 Maria Sharapova has been denied a wildcard invitation to this month's French Open, the French Tennis Federation (FFT) has announced.
Please Wait while comments are loading...