ಯುರೋಪ್ ಪ್ರವಾಸಕ್ಕೆ ಸಜ್ಜಾದ ಹಾಕಿ ವೀರರಿಗೆ ಮನ್ ಪ್ರೀತ್ ಕ್ಯಾಪ್ಟನ್

Posted By:
Subscribe to Oneindia Kannada

ನವದೆಹಲಿ, ಜುಲೈ 28: ಯುರೋಪ್ ಪ್ರವಾಸ ಕೈಗೊಳ್ಳಲಿರುವ ಭಾರತದ ಹಾಕಿ ತಂಡಕ್ಕೆ ಮಿಡ್ ಫೀಲ್ಡರ್ ಮನ್ ಪ್ರೀತ್ ಸಿಂಗ್ ಅವರನ್ನು ನಾಯಕರಾಗಿ ನೇಮಿಸಿ ಹಾಕಿ ಇಂಡಿಯಾ ಶುಕ್ರವಾರ(ಜುಲೈ 28) ಪ್ರಕಟಣೆ ಹೊರಡಿಸಿದೆ.

ಆರು ಮಂದಿ ಹೊಸ ಮುಖಗಳೊಂದಿಗೆ 18 ಮಂದಿ ಸದಸ್ಯರುಳ್ಳ ಹಾಕಿ ತಂಡವು ನೆದರ್ಲೆಂಡ್ ಹಾಗೂ ಬೆಲ್ಜಿಯಂ ಪ್ರವಾಸ ಕೈಗೊಳ್ಳಲಿದೆ. ಚಿಂಗ್ಲೆಸಾನಾ ಸಿಂಗ್ ಅವರು ತಂಡಕ್ಕೆ ಉಪ ನಾಯಕರಾಗಿದ್ದಾರೆ.

Manpreet Singh to lead Indian hockey team on European tour

ಬೆಲ್ಜಿಯಂನಲ್ಲಿ ಆಗಸ್ಟ್ 09ರಂದು ಪ್ರವಾಸದ ಮೊದಲ ಪಂದ್ಯವನ್ನಾಡಲಿದೆ.ನಂತರ ಆಗಸ್ಟ್ 13 ಹಾಗೂ 14ರಂದು ವಾಲ್ ವಿಜ್ ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಆಗಸ್ಟ್ 16ರಂದು ಪ್ರವಾಸ ಕೊನೆ ಲೀಗ್ ನಲ್ಲಿ ಆಮ್ ಸ್ಟೆಲ್ವೀನ್ ನಲ್ಲಿ ಆಸ್ಟ್ರೀಯಾ ವಿರುದ್ಧ ಸೆಣೆಸಲಿದೆ.

ತಂಡ ಇಂತಿದೆ:
ಗೋಲ್ ಕೀಪರ್ಸ್ : ಆಕಾಶ್ ಅನಿಲ್ ಚಿಕ್ಟೆ, ಸೂರಜ್ ಕರ್ಕೆರಾ
ಡಿಫೆಂಡರ್ಸ್: ದಿಪ್ಸನ್ ಟಿರ್ಕಿ, ಕೊಥಾಜಿತ್ ಸಿಂಗ್, ಗುರಿಂದರ್ ಸಿಂಗ್, ಅಮಿತ್ ರೋಹಿದಾಸ್, ವರುಣ್ ಕುಮಾರ್
ಮಿಡ್ ಫೀಲ್ಡರ್ಸ್: ಎಸ್ ಕೆ ಉತ್ತಪ್ಪ, ಹರ್ಜೀತ್ ಸಿಂಗ್, ಮನ್ ಪ್ರೀತ್ ಸಿಂಗ್( ನಾಯಕ), ಚಿಂಗ್ಲೆಸಾನಾ ಸಿಂಗ್ (ಉಪ ನಾಯಕ), ಸುಮಿತ್, ನಿಲಕಂಠ್ ಶರ್ಮ.
ಮುಂಪಡೆ: ಮಂದೀಪ್ ಸಿಂಗ್, ರಮಣದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ್, ಗುರ್ಜಂತ್ ಸಿಂಗ್, ಅರ್ಮಾನ್ ಖುರೇಶಿ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Six fresh faces in team
English summary
Hockey India on Friday (July 28) announced an 18-member squad for the tour of Belgium and the Netherlands. Midfielder Manpreet Singh will lead the side and Chinglensana Singh is the vice-captain.
Please Wait while comments are loading...