ಚೆನ್ನೈ: ಕ್ರೀಡಾ ಚಾಂಪಿಯನ್ ಪಟ್ಟ ಗೆದ್ದ ಮಂಗಳೂರು ವಿವಿ ಮಹಿಳೆಯರು

Posted By:
Subscribe to Oneindia Kannada

ಚೆನ್ನೈ, ಜ.28: ಇಲ್ಲಿನ ಎಸ್.ಆರ್.ಎಂ. ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿ.ವಿ. ಮಹಿಳಾ ಬಾಲ್ ಬಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರು ವಿ.ವಿ. ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ರಾಷ್ಟ್ರದ 68 ವಿಶ್ವ ವಿದ್ಯಾಲಯಗಳು ಪಾಲ್ಗೊಂಡಿದ್ದ ಈ ಚಾಂಪಿಯನ್ ಶಿಪ್ ನ ಅಂತಿಮ ಪಂದ್ಯದಲ್ಲಿ ಮಂಗಳೂರು ವಿ.ವಿ ತಂಡ, ಮದ್ರಾಸ್ ವಿ.ವಿ. ತಂಡವನ್ನು 29-8 ಹಾಗೂ 29-17 ನೇರ ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನ ಕೈಯಲ್ಲಿ ಉಳಿಸಿಕೊಂಡಿದೆ.[ಬಾಲ್ ಬ್ಯಾಡ್ಮಿಂಟನ್: ಕರ್ನಾಟಕ ವನಿತೆಯರಿಗೆ ಫೆಡರೇಷನ್ ಕಪ್]

Mangalore University wins all-India inter-university ball badminton championship

ಕ್ವಾಟರ್ ಫೈನಲ್ ನಲ್ಲಿ ಪೆರಿಯಾರ್ ವಿ.ವಿ. ಹಾಗೂ ಲೀಗ್ ಪಂದ್ಯಾಟಗಳಲ್ಲಿ ಕೊಯಮತ್ತೂರಿನ ಭಾರತೀಯಾರ್ ವಿ.ವಿ. ಹಾಗೂ ಅತಿಥೇಯ ಎಸ್.ಆರ್.ಎಂ. ವಿ.ವಿ. ವಿರುದ್ಧ ಮೊದಲ ಪಂದ್ಯಗಳಲ್ಲಿ ಮಂಗಳೂರು ವಿ.ವಿ. ನೇರ ಸೆಟ್ ಗಳಿಂದ ಜಯ ದಾಖಲಿಸಿತು.

ಕಳೆದ ಬಾರಿಯು ಅಖಿಲ ಭಾರತ ವಿ.ವಿ.ಯಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು ವಿ.ವಿ. ಕಳೆದ 12 ವರ್ಷಗಳಿಂದ ಸತತವಾಗಿ ಲೀಗ್ ಹಂತಕ್ಕೆ ಅರ್ಹತೆಗಳಿಸಿದ ವಿಶೇಷ ಸಾಧನೆಗೆ ಪಾತ್ರವಾಗಿದೆ.[ಸೀನಿಯರ್ ಬಾಲ್ ಬಾಡ್ಮಿಂಟನ್ ಲೀಗ್ ಗೆದ್ದ ಆಳ್ವಾಸ್]

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನವನ್ನು ನೀಡಿದ ರಂಜಿತ ಎಂ.ಪಿ. ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ತಂಡದ ವಿಶೇಷ ಸಾಧನೆಗೆ ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಕಿಶೋರ್ ಕುಮಾರ್ ಸಿ.ಕೆ. ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವರವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangalore University wins all-India inter-university ball badminton championship for Women held at SRM University in Chennai. The final Mangalore varsity beat Madras varsity by 29-8, 29-17 straight sets. Overall 68 Universities participated in the event.
Please Wait while comments are loading...