ಎಕ್ಸಾಂನಲ್ಲಿ ಫೇಲಾದೆ, ಬಾಡ್ಮಿಂಟನ್ ನಲ್ಲಿ ಪಾಸಾದೆ: ಗೋಪಿಚಂದ್

Posted By:
Subscribe to Oneindia Kannada

ಹೈದರಾಬಾದ್, ಸೆಪ್ಟೆಂಬರ್ 01: ನಾನು ಐಐಟಿ ಪರೀಕ್ಷೆಯಲ್ಲಿ ಪಾಸಾಗಿದ್ದರೆ ಇಂದು ಬಾಡ್ಮಿಂಟನ್ ಕ್ಷೇತ್ರದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ನಾನು ಫೇಲಾಗಿದ್ದರಿಂದ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಸಾಧ್ಯವಾಗಿದೆ ಎಂದು ಬಾಡ್ಮಿಂಟನ್ ಪಟು, ಗುರು ಪುಲ್ಲೆಲ ಗೋಪಿಚಂದ್ ಹೇಳಿದ್ದಾರೆ.

ಕೋಚ್ ಆಗಿ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಅವರಂಥ ಒಲಿಂಪಿಕ್ಸ್ ಪದಕ ವಿಜೇತರಿಗೆ ಮಾರ್ಗದರ್ಶನ ನೀಡಿರುವ ಪುಲ್ಲೇಲಾ ಗೋಪಿಚಂದ್ ಅವರು ತಮ್ಮ ವಿದ್ಯಾಭ್ಯಾಸ ಬಗ್ಗೆ ಹೇಳಿಕೊಂಡಿದ್ದಾರೆ. [ಪಿವಿ ಸಿಂಧು ಬೆಳ್ಳಿ ಹೆಜ್ಜೆಯ ಹಿಂದೆ ಗುರು ಗೋಪಿಚಂದ್]

Lucky I failed in IIT entrance exam, says Pullela Gopichand

2001ರ ಆಲ್ ಇಂಗ್ಲೆಂಡ್ ಪ್ರಶಸ್ತಿ ವಿಜೇತ ಗೋಪಿಚಂದ್(42) ಅವರು ತಮ್ಮ ಶಿಕ್ಷಣದ ಬಗ್ಗೆ ಹೇಳುತ್ತಾ, ನಾನು ರಾಜ್ಯಮಟ್ಟದ ಚಾಂಪಿಯನ್ ಆಗಿರುವಾಗಲೇ ಐಐಟಿ ಪರೀಕ್ಷೆ ಬರೆದೆ ಪಾಸಾದೆ. ನಂತರ ಇಂಜಿನಿಯರಿಂಗ್ ಪರೀಕ್ಷೆ ಬರೆದು ಫೇಲಾದೆ. ಇದರಿಂದಾಗಿ ನಾನು ಕ್ರೀಡಾ ಕ್ಷೇತ್ರದಲ್ಲೇ ಮುಂದುವರೆಯಲು ಸಾಧ್ಯವಾಯಿತು. ಫೇಲಾಗುವುದು ಅದೃಷ್ಟ ತರುತ್ತದೆ ಎಂದು ನಗೆಯಾಡಿದರು.

2004ರಲ್ಲಿ 25 ಮಕ್ಕಳೊಂದಿಗೆ ನಾನು ಅಕಾಡೆಮಿಯನ್ನು ಆರಂಭಿಸಿದೆ. ಅವರ ಪೈಕಿ ಸಿಂಧು ಅತ್ಯಂತ ಕಿರಿಯ ವಿದ್ಯಾರ್ಥಿನಿಯಾಗಿದ್ದರು. ಪಿ ಕಶ್ಯಪ್ ಗಿನ್ನು 15 ವರ್ಷ ವಯಸ್ಸು. ಕೋಚಿಂಗ್ ಮಾಡುವ ಸಮಯದಲ್ಲೇ ಸಹಜವಾಗಿ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಹುಟ್ಟಿಕೊಂಡಿತು. ನನ್ನ ಕನಸು 2012ರಲ್ಲಿ ಸೈನಾ ರಿಂದ ಹಾಗೂ 2016ರಲ್ಲಿ ಸಿಂಧುರಿಂದ ಸಾಕಾರಗೊಂಡಿದೆ ಎಂದು ಗೋಪಿಚಂದ್ ಹೇಳಿದ್ದಾರೆ.

ಅಕಾಡೆಮಿ ಸ್ಥಾಪನೆಗೆ ಮೊತ್ತ ಸಾಲದಿದ್ದಾಗ ಮನೆಯನ್ನು ಅಡ ಇಟ್ಟು ದುಡ್ಡು ತರಬೇಕಾಯಿತು. ಉದ್ಯಮಿ ನಿಮ್ಮಗಡ್ಡ ಪ್ರಸಾದ್ ರಂಥವರು ನೆರವಿಗೆ ಬಂದರು. ಅನೇಕ ಯುವ ಪ್ರತಿಭೆಗಳ ಭವಿಷ್ಯ ಅಡಗಿದ್ದರಿಂದ ಇಂಥ ರಿಸ್ಕ್ ತೆಗೆದುಕೊಳ್ಳಲು ನಾನು ನಿರ್ಧರಿಸಿದೆ ಎಂದು ಕಷ್ಟದ ದಿನಗಳನ್ನು ಗೋಪಿಸ್ಮರಿಸಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief badminton coach Pullela Gopichand, who guided Saina Nehwal and PV Sindhu to Olympic medals in the successive Games, says he was lucky that he wasn't good in studies and it was a flunked IIT exam that paved his way to be a successful sportsperson.
Please Wait while comments are loading...