ರಿಯೋದಲ್ಲಿ ಪ್ರೇಮ ನಿವೇದನೆ: ಈಜುಕೊಳದ ಬಳಿ ಚೀನಿ ಲವ್ ಸ್ಟೋರಿ

Posted By:
Subscribe to Oneindia Kannada

ರಿಯೋ ಡಿ ಜನೈರೋ,ಆಗಸ್ಟ್.15: ರಿಯೋದಲ್ಲಿ ರಗ್ಬಿ ಸ್ಪರ್ಧಿಯ ಪ್ರೇಮ ನಿವೇದನೆ ಪ್ರಸಂಗದ ನಂತರ ಚೀನಿ ಈಜುಪಟುಗಳ ಪ್ರೇಮ ಕಥೆಗೆ ಒಲಿಂಪಿಕ್ಸ್ ವೇದಿಕೆ ಒದಗಿಸಿದೆ. ಡೈವಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಚೀನಿ ಹೀ ಝೀಗೆ ಪೋಡಿಯಂನಲ್ಲೇ ವಜ್ರದ ಉಂಗುರದ ಗಿಫ್ಟ್ ಸಿಕ್ಕಿದೆ. ಕಂಚಿನ ಪದಕ ಗೆದ್ದ ಕ್ವಿನ್ ಕಾಯ್ ಅವರು ಮದುವೆ ಪ್ರಪೋಸ್ ಮಾಡಿದ್ದಾರೆ.

ಒಲಿಂಪಿಕ್ಸ್ ನ ಮರಿಯಾ ಲೆಂಕ್ ಅಕ್ವಾಟಿಕ್ಸ್ ಸೆಂಟರ್ ನಲ್ಲಿ ಭಾನುವಾರದಂದು ಮಹಿಳೆಯರ 3 ಮೀಟರ್ ಸ್ಪ್ರಿಂಗ್ ಬೋರ್ಡ್ ಸ್ಪರ್ಧೆಯಲ್ಲಿ ಚೀನಾದ ಹೀ ಝೀ ಬೆಳ್ಳಿ ಪದಕ ಪಡೆದರು. ನಂತರ ಪದಕ ಪ್ರದಾನ ಸಮಾಂಭದಲ್ಲಿ ಇಂಥದ್ದೊಂದು ನೆನಪಿನ ಕಾಣಿಕೆ ಸಿಕ್ಕಿದೆ.[ರಗ್ಬಿ ಆಟಗಾರ್ತಿ ಮದ್ವೆಗೆ ಗೆಳತಿಯ ಚುಂಬನ ಮುದ್ರೆ]

Love at Rio Olympics: Silver, diamond and Chinese divers get engaged

ಬೆಳ್ಳಿ ಪದಕ ಕೊರಳಿಗೇರಿಸಿಕೊಳ್ಳುತ್ತಿದ್ದಂತೆ ಅಲ್ಲಿಗೆ ಓಡಿ ಬಂದ ಆಕೆ ಗೆಳೆಯ ಈಜಪಟು ಕ್ವಿನ್ ಕಾಯ್ ಅವರು
ವಜ್ರದುಂಗುರವಿದ್ದ ಕೆಂಪು ಬಣ್ಣದ ಬಾಕ್ಸ್ ತೆರೆದು, ಗುಲಾಬಿ ಹೂವೊಂದನ್ನು ಮುಂದೆ ಮಾಡಿ, ಮೊಣಕಾಲೂರಿ ಆಕೆಯತ್ತ ಇರಿಸಿ ಪ್ರೇಮ ನಿವೇದನೆ ಮಾಡಿದ. [ಈಕೆಗೆ 41 ವಯಸ್ಸಾದ್ರು ಆಟ ಮಾತ್ರ ಕುಗ್ಗಿಲ್ಲ]

ಆ ಕ್ಷಣ ಏನು ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೆ ನಾಚಿಕೆಯಿಂದ ಕಣ್ಣುಮುಚ್ಚಿಕೊಂದ ಹೀ ಝೀ ನಂತರ ಕ್ವಿನ್ ಅವರ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಾರೆ. [ರಿಯೋ ದಲ್ಲಿ ಮತ್ತೊಂದು ಸಲಿಂಗಿಗಳ ನಿಶ್ಚಿತಾರ್ಥ]

30 ವರ್ಷ ವಯಸ್ಸಿನ ಕ್ವಿನ್ ಕಾಯ್ ಅವರು 6 ವರ್ಷಗಳ ತಮ್ಮ ಗೆಳೆತನವನ್ನು ಪ್ರೇಮವಾಗಿ ಪರಿವರ್ತಿಸಲು ರಿಯೋ ಒಲಿಂಪಿಕ್ಸ್ ಸೂಕ್ತ ವೇದಿಕೆ ಎಂದು ನಿರ್ಧರಿಸಿ ಈ ರೀತಿ ಪ್ರಪೋಸ್ ಮಾಡಿದ್ದಾರೆ.

ಬ್ರೆಜಿಲ್ ​ನ ಆಟಗಾರ್ತಿ ಇಸಾದೊರ ಸೆರೆಲ್ಲೊ (25) ಮುಂದೆ ಆಕೆಯ ಗೆಳತಿ ಮಾರ್ಜೊರಿ ಎನ್ಯಾ( 28) ಅವರು ಮದುವೆ ಪ್ರಸ್ತಾಪ ಇಟ್ಟಿದ್ದು ಇಲ್ಲಿ ತನಕ ರಿಯೋದಲ್ಲಿ ಸುದ್ದಿಯಾಗಿತ್ತು. ರಗ್ಬಿ ಫೈನಲ್ಸ್ ನಡೆದ ದಿಯೊದೊರಾ ಕ್ರೀಡಾಂಗಣದ ಇಂಥದ್ದೊಂದು ಪ್ರಸಂಗ ನಡೆದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Chinese diver had to be satisfied with a silver medal in diving at the Rio Olympics 2016 but soon she was stunned to receive a diamond on the podium!
Please Wait while comments are loading...