ಕುಸ್ತಿ ಪಟು ಯೋಗೇಶ್ವರ್ ದತ್ ಗೆ ಬಂಗಾರ ಇಲ್ಲ, ಬೆಳ್ಳಿಗೆ ತೃಪ್ತಿ

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 07 : ಲಂಡನ್‌ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಕುಸ್ತಿ ಪಟು ಯೋಗೇಶ್ವರ್ ದತ್‌ ಅವರಿಗೆ ಚಿನ್ನದ ಪದಕ ಲಭಿಸುವುದಿಲ್ಲ ಎಂದು ವಿಶ್ವ ಯುನೈಟೆಡ್‌ ಕುಸ್ತಿ (UWW) ಸ್ಪಷ್ಟಪಡಿಸಿದೆ. ಇದರಿಂದ ದತ್ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದ ಅಜರ್ ಬೈಜಾನ್ ನ ಪೈಲ್ವಾನ್ ತೊಗರುಲ್ ಅಸ್ಗರೊವ್ ಅವರು ಉದ್ದೀಪನ ಮದ್ದು ಸೇವಿಸಿರುವ ಕುರಿತು ಶಂಕೆ ವ್ಯಕ್ತವಾಗಿತ್ತು.

London Olympics: No gold for Yogeshwar Dutt, confirms UWW

ಹೀಗಾಗಿ ಯೋಗೀಶ್ವರ್ ದತ್ ಬೆಳ್ಳಿ ಪದಕ ನಂತರ ಚಿನ್ನದ ಆಸೆ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಚಿಗುರೊಡೆದಿತ್ತು. ಆದರೆ, UWW ಈ ಸುದ್ದಿಯನ್ನು ತಳ್ಳಿ ಹಾಕಿದೆ.

ಅಜರ್ ಬೈಜಾನ್ ನಪೈಲ್ವಾನ್ ರಕ್ತದ ಮಾದರಿಯಲ್ಲಿ ಯಾವುದೇ ರೀತಿಯ ಉದ್ದೀಪನ ಮದ್ದಿನ ಅಂಶ ಕಂಡುಬಂದಿಲ್ಲ ಎಂದು ವೈದ್ಯಕೀಯ ವರದಿಗಳು ಸ್ಪಷ್ಟಪಡಿಸಿವೆ. 'ರೊಗರುಲ್ ಮದ್ದು ಸೇವಿಸಿಲ್ಲ. ಅದು ಪರೀಕ್ಷೆಯಿಂದ ಸಾಬೀ ತಾಗಿದೆ' ಎಂದು ಸ್ಪಷ್ಟನೆ ನೀಡಿದೆ. ಲಂಡನ್‌ ಕೂಟದಲ್ಲಿ ಬೆಳ್ಳಿ ಜಯಿಸಿದ್ದ ರಷ್ಯಾದ ಜಟ್ಟಿ ಬೆಸಿಕ್ ಕುದುಕೊವ್ ಕೂಡ ಉದ್ದೀಪನಾ ಮದ್ದು ಸೇವಿಸಿದ್ದು ಕೆಲ ದಿನಗಳ ಹಿಂದೆ ಸಾಬೀತಾಗಿತ್ತು. ಹೀಗಾಗಿ ಭಾರತದ ಕುಸ್ತಿಪಟುಗೆ ಬೆಳ್ಳಿಯ ಅದೃಷ್ಟ ಒಲಿದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yogeshwar Dutt's London Olympics bronze medal will not be upgraded to gold after the United World Wrestling (UWW) today (September 6) made it clear that the top-place finisher in men's 60kg freestyle - Togrul Asgarov - never tested positive for a banned substance
Please Wait while comments are loading...