ಕುಸ್ತಿಪಟು ದತ್ ಗೆ ಸಿಕ್ಕ ಕಂಚು -ಬೆಳ್ಳಿ ಪದಕವಾಗಲಿದೆ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 30: ಭಾರತದ ಹೆಮ್ಮೆಯ ಕುಸ್ತಿಪಟು ಯೋಗೇಶ್ವರ್ ದತ್ ಅವರಿಗೆ ಲಂಡನ್ ಒಲಿಂಪಿಕ್ಸ್ ನಲ್ಲಿ ಲಭಿಸಿದ ಕಂಚಿನ ಪದಕ ಈಗ ಬೆಳ್ಳಿ ಪದಕವಾಗಲಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲಿಲ್ಲ ಎಂಬ ಕೊರಗು ಈಗ ಈ ರೀತಿ ಸಂಭ್ರಮಕ್ಕೆ ದಾರಿ ಮಾಡಿಕೊಟ್ಟಿದೆ.

2012ರ ಲಂಡನ್ ಒಲಿಂಪಿಕ್ಸ್ ನ 60ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದಿದ್ದ ರಷ್ಯಾದ ಬೆಸಿಕ್ ಕುಡುಖಾವ್ ಅವರು ಡೋಪಿಂಗ್
ಟೆಸ್ಟ್ ನಲ್ಲಿ ಫೇಲ್ ಆಗಿದ್ದಾರೆ. ಅವರ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದಾಗ ಉದ್ದೀಪನ ಮದ್ದು ಸೇವನೆ ಮಾಡಿರುವುದು ದೃಢಪಟ್ಟಿದೆ, ಈ ಹಿನ್ನೆಲೆಯಲ್ಲಿ ಬೆಳ್ಳಿ ಪದಕ ಯೋಗೇಶ್ವರ್ ದತ್ ಅವರ ಪಾಲಾಗಲಿದೆ.

ನಾಲ್ಕು ಬಾರಿ ವಿಶ್ವ ಚಾಂಪಿಯನ್ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಕುಡುಖಾವ್ ಅವರು 2013ರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು, 2012ರ ಕ್ರೀಡಾಕೂಟದ ಬಳಿಕ ಸ್ಯಾಂಪಲ್ ಪಡೆದುಕೊಳ್ಳಲಾಗಿತ್ತು.

My London Olympics bronze medal has been upgraded to silver: Yogeshwar Dutt

ಬೆಳ್ಳಿ ಪದಕ ಸಿಗುವುದು ಖಚಿತವಾದ ಬಳಿಕ ಯೋಗೇಶ್ವರ್ ದತ್ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ದಿನ ಬೆಳಗ್ಗೆ ನನ್ನ ಕಂಚಿನ ಪದಕವನ್ನು ಬೆಳ್ಳಿ ಪದಕಕ್ಕೆ ಉನ್ನತೀಕರಿಸಿದ ಸುದ್ದಿ ಸಿಕ್ಕಿದೆ. ಈ ಪದಕವನ್ನು ನಾನು ಎಲ್ಲಾ ಭಾರತೀಯರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.


ಬ್ರೆಜಿಲ್ಲಿನ ರಿಯೋ ಒಲಿಂಪಿಕ್ಸ್ ನಲ್ಲಿ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಯೋಗೇಶ್ವರ್ ದತ್ ಅವರು ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian wrestler Yogeshwar Dutt today (August 30) confirmed that his London Olympics 2012 bronze medal has been upgraded to silver after Russain Besik Kudukhov tested positive for a banned substance.
Please Wait while comments are loading...