ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸಾಕ್ಷಿ ತನಕ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 18: ವಿಶ್ವದ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವ ಭಾರತ, ಅನೇಕ ಕ್ರೀಡಾ ಸಾಧಕರನ್ನು ಪರಿಚಯಿಸಿದೆ. ಆದರೆ, ವಿಶ್ವದ ಅತಿದೊಡ್ಡ ಕ್ರೀಡಾಕೂಟ ಒಲಿಂಪಿಕ್ಸ್ ನಲ್ಲಿ ಭಾರತ, ಚಿನ್ನ ಗೆಲ್ಲುವಲ್ಲಿ ಸದಾ ಹಿಂದೆ ಬಿದ್ದಿದೆ. ಆದರೂ ಉತ್ತಮ ಸಾಧನೆ ತೋರಿ ವೈಯಕ್ತಿಕ ಪದಕ ಕೊರಳಿಗೇರಿಸಿಕೊಂಡ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ.

ಸ್ವತಂತ್ರ ಬಂದು 69 ವರ್ಷಗಳು ಕಳೆದರೂ ಒಲಿಂಪಿಕ್ಸ್ ನಲ್ಲಿ ಭಾರತ ಎರಡು ಚಿನ್ನದ ಪದಕ ಒಂದೇ ಕ್ರೀಡಾಕೂಟದಲ್ಲಿ ಕೈ ಸೇರಿಲ್ಲ. ಆದರೆ, ಫೀಲ್ಡ್ ಇವೆಂಟ್ ಗಳಲ್ಲಿ ಭಾರತದ ಗತ ವೈಭವ ಚೆನ್ನಾಗೇ ಇದೆ. 1980 ಮಾಸ್ಕೋ ಒಲಿಂಪಿಕ್ಸ್ ಮರೆಯುವಂತಿಲ್ಲ . ಹಾಕಿಯಲ್ಲಿ 8 ಬಾರಿ ಚಿನ್ನದ ಪದಕ ಗೆದ್ದ ಹಿರಿಮೆಯಿದ್ದರೂ ನಂತರ ಉತ್ತಮ ಸಾಧನೆ ಕಂಡು ಬಂದಿಲ್ಲ.[ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ]

ವೈಯಕ್ತಿಕ ಸಾಧನೆಯ ವಿಷಯಕ್ಕೆ ಬಂದರೆ ನಾರ್ಮನ್ ಪ್ರೀತ್ ಚಂದ್ ಅವರು 1900 ರ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ 200 ಮೀಟರ್ಸ್ ಹಾಗೂ 200 ಮೀಟರ್ಸ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು, ವೈಯಕ್ತಿಕ ಸಾಧಕರ ಪಟ್ಟಿಯ ಖಾತೆ ಓಪನ್ ಮಾಡಿದರು.[ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

1952ರಲ್ಲಿ ಖಾಶಾಬ ದಾದಾಸಾಹೇಬ್ ಜಾಧವ್ ಅವರು ಬಾಟಂ ವೇಯ್ಟ್ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು, ಸ್ವಾತಂತ್ರ್ಯ ನಂತರ ಮೊದಲ ಪದಕ ಗೆದ್ದ ಸಾಧಕ ಎನಿಸಿದರು.

ನಂತರ 44 ವರ್ಷಗಳ ಕಾಯುವಿಕೆಗೆ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅಂತ್ಯ ಹಾಡಿದರು. 1996ರ ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡರು. 1996ರ ನಂತರ ಪದಕ ವಿಜೇತ ವಿವರ ಮುಂದೆ ಓದಿ ನೋಡಿ...

ಲಿಯಾಂಡರ್ ಪೇಸ್ (ಟೆನ್ನಿಸ್)

ಲಿಯಾಂಡರ್ ಪೇಸ್ (ಟೆನ್ನಿಸ್)

1996ರ ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ

ಕರಣಂ ಮಲ್ಲೇಶ್ವರಿ (ವೇಯ್ಟ್ ಲಿಫ್ಟಿಂಗ್)

ಕರಣಂ ಮಲ್ಲೇಶ್ವರಿ (ವೇಯ್ಟ್ ಲಿಫ್ಟಿಂಗ್)

2000 ಸಿಡ್ನಿ ಒಲಿಂಪಿಕ್ಸ್ 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ. ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ.

ರಾಜ್ಯವರ್ಧನ್ ಸಿಂಗ್ (ಶೂಟಿಂಗ್)

ರಾಜ್ಯವರ್ಧನ್ ಸಿಂಗ್ (ಶೂಟಿಂಗ್)

2008 ರ ಅಥೆನ್ಸ್ ಒಲಿಂಪಿಕ್ಸ್ ಶೂಟಿಂಗ್ (ಡಬ್ಬಲ್ ಟ್ರಾಪ್) ನಲ್ಲಿ ಬೆಳ್ಳಿ ಪದಕ . ಶೂಟಿಂಗ್ ಇವೆಂಟ್ ನಲ್ಲಿ ಭಾರತದ ಮೊದಲ ವೈಯಕ್ತಿಕ ಪದಕ.

ಅಭಿನವ್ ಬಿಂದ್ರಾ (ಶೂಟಿಂಗ್)

ಅಭಿನವ್ ಬಿಂದ್ರಾ (ಶೂಟಿಂಗ್)

2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅಭಿನವ್ ಬಿಂದ್ರಾ ಹೊಸ ಇತಿಹಾಸ ಬರೆದರು. ಶೂಟಿಂಗ್ (10 ಮೀಟರ್ ಏರ್ ರೈಫಲ್) ಇವೆಂಟ್ ನಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಈ ಸಾಧನೆ ಮಾಡಿದ ಮೊಟ್ಟ ಮೊದಲ ಕ್ರೀಡಾಪಟು.

ವಿಜೆಂದರ್ ಸಿಂಗ್ (ಬಾಕ್ಸಿಂಗ್)

ವಿಜೆಂದರ್ ಸಿಂಗ್ (ಬಾಕ್ಸಿಂಗ್)

2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದರು.

ಸುಶೀಲ್ ಕುಮಾರ್ (ಕುಸ್ತಿ)

ಸುಶೀಲ್ ಕುಮಾರ್ (ಕುಸ್ತಿ)

ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿರುವ ಏಕೈಕ ಕ್ರೀಡಾಪಟು. 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಹಾಗೂ 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ಗಗನ್ ನಾರಂಗ್ (ಶೂಟಿಂಗ್)

ಗಗನ್ ನಾರಂಗ್ (ಶೂಟಿಂಗ್)

2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ.

ವಿಜಯ್ ಕುಮಾರ್ (ಶೂಟಿಂಗ್)

ವಿಜಯ್ ಕುಮಾರ್ (ಶೂಟಿಂಗ್)

2012ರ ಲಂಡನ್ ಒಲಿಂಪಿಕ್ಸ್ ನಲ್ಲಿ 25 Rapid ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.

ಯೋಗೇಶ್ವರ್ ದತ್ (ಕುಸ್ತಿ)

ಯೋಗೇಶ್ವರ್ ದತ್ (ಕುಸ್ತಿ)

ಪುರುಷರ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ಲಂಡನ್ ಒಲಿಂಪಿಕ್ಸ್ 2012.

ಮೇರಿ ಕೋಮ್ (ಬಾಕ್ಸಿಂಗ್)

ಮೇರಿ ಕೋಮ್ (ಬಾಕ್ಸಿಂಗ್)

2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೇರಿ ಕೋಮ್ ಅವರು ಮಹಿಳೆಯ ಫ್ಲೈ ವೈಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.

ಸೈನಾ ನೆಹ್ವಾಲ್ (ಬಾಡ್ಮಿಂಟನ್)

ಸೈನಾ ನೆಹ್ವಾಲ್ (ಬಾಡ್ಮಿಂಟನ್)

2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಅವರು ಸಿಂಗಲ್ಸ್ ನಲ್ಲಿ ಕಂಚಿನ ಪದಕ ಗೆದ್ದರು. ಪದಕ ಗೆದ್ದ ಮೊದಲ ಬಾಡ್ಮಿಂಟನ್ ತಾರೆ.

ರಿಯೋ ಒಲಿಂಪಿಕ್ಸ್ 2016ರಲ್ಲಿ ಸಾಕ್ಷಿ ಮಲಿಕ್

ರಿಯೋ ಒಲಿಂಪಿಕ್ಸ್ 2016ರಲ್ಲಿ ಸಾಕ್ಷಿ ಮಲಿಕ್

ರಿಯೋ ಒಲಿಂಪಿಕ್ಸ್ 2016ರಲ್ಲಿ ಮಹಿಳೆಯರ ಫ್ರೀ ಸ್ಟೈಲ್ 58 ಕೆಜಿ ವಿಭಾಗದ ಸ್ಪರ್ಧೆಯ ರೆಪೆಚೇಜ್ ಬೌಟ್ ಮಾದರಿಯ ಪಂದ್ಯದಲ್ಲಿ ಕರ್ಜಿಸ್ತಾನ್(Kyrgyztan)ನ ಐಸುಲು ತಿನಿಬೆಕೊವಾ ಅವರನ್ನು 8-5 ಅಂತರದಿಂದ ಸೋಲಿಸಿ ಕಂಚು ಗೆದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
As far as individual medals are concerned, Norman Pritchard represented Indian in 1900 Paris Olympics and won silver medals in the 200m and the 200m hurdles.Later in 1952, Khashaba Dadasaheb Jadhav won a bronze in men's wrestling freestyle bantamweight category. Leander Paes ended this drought in 1996 when he won a bronze in Atlanta Olympics.Here are India's Olympic medal winners since 1996 Olympics
Please Wait while comments are loading...