ಟ್ವಿಟ್ಟರ್ ನಲ್ಲಿ ಲಿಯೊನೆಲ್ ಮೆಸ್ಸಿಯದ್ದೇ ಸುದ್ದಿ, ಸದ್ದು

Posted By:
Subscribe to Oneindia Kannada

ಬೆಂಗಳೂರು, ಜೂನ್ 27: 'ಅರ್ಜೆಂಟೀನಾ ಪರ ನಾನು ಇನ್ಮುಂದೆ ಆಡುವುದಿಲ್ಲ' ಎಂದು ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಸೋಮವಾರ ಘೋಷಿಸುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ. 29 ವರ್ಷ ವಯಸ್ಸಿಗೆ ನಿವೃತ್ತಿಯೇ ಎಂದು ಪ್ರಶ್ನಿಸಿದವರಿದ್ದಾರೆ. ಸತತ ಸೋಲು ಕಂಡ ಮೇಲೆ ನೈತಿಕ ಹೊಣೆ ಹೊತ್ತು ವಿದಾಯ ಹೇಳಿರುವುದು ಸರಿ ಎಂದು ಇನ್ನು ಕೆಲವರು ಹೇಳಿದ್ದಾರೆ. ಸದ್ಯಕ್ಕೆ ಟ್ವಿಟ್ಟರ್ ನಲ್ಲಿ ಮೆಸ್ಸಿ ಟ್ರೆಂಡಿಂಗ್.

ಕೋಪಾ ಅಮೆರಿಕಾ 2016 ಫೈನಲ್ ನಲ್ಲಿ ಸೋಲುಂಡ ನೋವಿನಲ್ಲಿ ಮೆಸ್ಸಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳಿದ್ದಾರೆ. [ಮೆಸ್ಸಿ ಧೂಳಿಪಟ ಮಾಡಿದ ದಾಖಲೆಗಳು]

ಭಾರತೀಯ ಕಾಲಮಾನ ಪ್ರಕಾರ ಸೋಮವಾರ ಬೆಳಗ್ಗೆ ನಡೆದ ಕೋಪಾ ಅಮೆರಿಕಾ 2016 ಅಂತಿಮ ಹಣಾಹಣಿಯಲ್ಲಿ ಚಿಲಿ ವಿರುದ್ಧ ಅರ್ಜೆಂಟೀನಾ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ 4-2 ಅಂತರದಿಂದ ಸೋಲು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು. [ಪಂದ್ಯದ ವರದಿ ಓದಿ]

' ನಾನು ನಾಲ್ಕು ಫೈನಲ್ ತಲುಪಿ ಕೂಡಾ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಚಾಂಪಿಯನ್ ಆಗದೆ ಉಳಿಯುವುದು ಕಷ್ಟವಾಗುತ್ತಿದೆ. ಅರ್ಜೆಂಟೀನಾ ತಂಡದ ಜತೆ ನನ್ನ ಋಣ ಇಲ್ಲಿಗೆ ತೀರಿತು' ಎಂದು ಮೆಸ್ಸಿ ಹೇಳಿದ್ದಾರೆ. ಮೆಸ್ಸಿ ಅವರ ನಿವೃತ್ತಿ ಘೋಷಣೆ ಬಗ್ಗೆ ಕ್ರಿಕೆಟ್ ಕಾಮೆಂಟೆಟರ್ ಹರ್ಷ ಭೋಗ್ಲೆ ಸೇರಿದಂತೆ ಅನೇಕ ಮಂದಿ ಟ್ವೀಟ್ ಮಾಡಿದ್ದಾರೆ.[ಮೆಸ್ಸಿ, ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ]

Lionel Messi retires from international football: Twitterati shocked; stuck in grief

ಹರ್ಷ ಬೋಗ್ಲೆ ಟ್ವೀಟ್

ಫುಟ್ಬಾಲ್ ಗೊತ್ತಿಲ್ಲ, ಆದ್ರೆ ಮೆಸ್ಸಿ ಗೊತ್ತು

29ವರ್ಷ ವಯಸ್ಸಿಗೆ ನಿವೃತ್ತಿ!

ಮೆಸ್ಸಿ ಕಣ್ಣೀರಿಡುವ ದೃಶ್ಯಗಳು

29ನೇ ವಯಸ್ಸಿಗೆ ನಿವೃತ್ತಿ, ಇದು ಸರಿಯಾದ ನಡೆಯಲ್ಲ

ಈ ಹುಡುಗನ ಪಾಡೇನು?[ಆಫ್ಘಾನಿಸ್ತಾನದಲ್ಲಿರುವ ಮೆಸ್ಸಿಯ ಬಹುದೊಡ್ಡ ಫ್ಯಾನ್, ಮೆಸ್ಸಿಯಿಂದ ಜರ್ಸಿ ಪಡೆದ ಅಭಿಮಾನಿ]

ಮೆಸ್ಸಿ ಫುಟ್ಬಾಲ್ ಕ್ಷೇತ್ರ ನಿಜವಾದ ದಿಗ್ಗಜ

ಮೆಸ್ಸಿ ಮತ್ತೆ ಆಡಬೇಕು ಅಷ್ಟೆ

ಇದು ಅಫ್ರಿದಿ ರೀತಿ ರಿಟೈರ್ ಮೆಂಟ್ ಅಂದುಕೊಂಡಿದ್ದೀನಿ

ನೋವಾಗಿದೆ ನಿಜ, ನಿವೃತ್ತಿಯಾದರೆ ಅದು ಸ್ವಾರ್ಥದ ನಡೆ

ಕೋಪಾ ಅಮೆರಿಕಾ 2016ರ ಫೈನಲ್ ನಲ್ಲಿ ಚಿಲಿ ವಿರುದ್ಧ ಪೆನಾಲ್ಟಿ ಮಿಸ್ ಮಾಡಿದ ಮೆಸ್ಸಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In what came as a shock to millions of football fans across the globe, Lionel Messi announced his sensational retirement from international football after Argentina crashed to an upset defeat against Chile in the Copa America final.
Please Wait while comments are loading...