ಫುಟ್ಬಾಲ್ ಸೂಪರ್ ಸ್ಟಾರ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

Posted By:
Subscribe to Oneindia Kannada

ಬಾರ್ಸಿಲೋನಾ, ಜುಲೈ 06: ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ಬುಧವಾರ(ಜುಲೈ 06) ದಂದು 21 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ.

ತೆರಿಗೆ ವಂಚನೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಅರ್ಜೆಂಟೀನಾದ ಸೂಪರ್ ಸ್ಟಾರ್ ಮೆಸ್ಸಿ ಹಾಗೂ ಮೆಸ್ಸಿ ಅವರ ಅಪ್ಪ ಜೊರ್ಜ್ ಅವರಿಗೆ 21 ತಿಂಗಳ ಸೆರೆಮನೆ ವಾಸ ಘೋಷಿಸಲಾಗಿದೆ ಎಂದು ಸ್ಪಾನೀಷ್ ಮಾಧ್ಯಮ ವರದಿ ಮಾಡಿದೆ. [ಟ್ವಿಟ್ಟರ್ ನಲ್ಲಿ ಲಿಯೊನೆಲ್ ಮೆಸ್ಸಿಯದ್ದೇ ಸುದ್ದಿ, ಸದ್ದು]

Lionel Messi handed '21 months in prison' for tax fraud: Spanish media

ಆದರೆ, ಇಬ್ಬರು ಕೂಡಾ ದಂಡ ಪಾವತಿಸುವ ಮೂಲಕ ಜೈಲುಶಿಕ್ಷೆಯನ್ನು ತಪ್ಪಿಸಿಕೊಳ್ಳುವ ಅವಕಾಶವನ್ನು ಸ್ಪಾನೀಷ್ ಕಾನೂನು ನೀಡಿದೆ. 2 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಆದೇಶಕ್ಕೆ ಮಾತ್ರ ಈ ರೀತಿ ಸೌಲಭ್ಯ ಲಭ್ಯವಿದೆ. [ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳಿದ ಲಿಯೊನೆಲ್ ಮೆಸ್ಸಿ]


ಕೋರ್ಟ್ ಆದೇಶದಂತೆ ಮೆಸ್ಸಿ ಅವರು 2 ಮಿಲಿಯನ್ ಯುರೋ (2.21 ಮಿಲಿಯನ್ ಡಾಲರ್) ಹಾಗೂ ಅವರ ತಂದೆ 1.5 ಮಿಲಿಯನ್ ಯುರೋ ಪಾವತಿಸಿ ಜೈಲುವಾಸವನ್ನು ತಪ್ಪಿಸಿಕೊಳ್ಳಬಹುದು. [ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಶತಕ ಫೈನಲ್ ಸಂಭ್ರಮ]

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕೋಪಾ ಅಮೆರಿಕಾ ಟೂರ್ನಿಯಲ್ಲಿ ಚಿಲಿ ವಿರುದ್ಧ ಅರ್ಜೆಂಟೀನಾ ಫೈನಲ್ ನಲ್ಲಿ ಸೋಲು ಕಂಡಿದ್ದರಿಂದ 29 ವರ್ಷ ವಯಸ್ಸಿನ ಮೆಸ್ಸಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಘೋಷಿಸಿದ್ದರು. ಉಳಿದಂತೆ ಸ್ಪೇನಿನ ಬಾರ್ಸಿಲೋನಾ ಕ್ಲಬ್ ಪರ ಆಡುವುದಾಗಿ ಹೇಳಿದ್ದರು.

Lionel Messi

2016ರ ಮೇ ತಿಂಗಳಿನಲ್ಲಿ ಮೆಸ್ಸಿ ವಿರುದ್ಧ ಬಹುದೊಡ್ಡ ತೆರಿಗೆ ವಂಚನೆ ಆರೋಪ ಕೇಳಿ ಬಂದಿತ್ತು. 4.1 ಮಿಲಿಯನ್ ಯುರೋಗಳಿಗೂ ಅಧಿಕ ಮೊತ್ತದ ತೆರಿಗೆಯನ್ನು ಸ್ಪೇನಿನಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಇಷ್ಟು ಮೊತ್ತವನ್ನು 2007 ರಿಂದ 2009ರ ಅವಧಿಯಲ್ಲಿ ಮೆಸ್ಸಿ ಹಾಗೂ ಅವರ ತಂದೆಯವರು ಬೆಲಿಜ್, ಉರುಗ್ವೆಯಲ್ಲಿ ಅಡಗಿಸಿಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮೆಸ್ಸಿ, 'ನನಗೆ ಆರ್ಥಿಕ ವ್ಯವಹಾರಗಳು ತಿಳಿದಿಲ್ಲ, ಫುಟ್ಬಾಲ್ ಆಟ ಅಷ್ಟೆ ಗೊತ್ತು' ಎಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Argentine superstar footballer Lionel Messi was today (July 6) handed a 21-month prison sentence for 3 tax frauds, according to reports in the Spanish media.
Please Wait while comments are loading...