ಅಭಿಮಾನಿಗಳ ಒತ್ತಾಯಕ್ಕೆ ಮಣಿದು ನಿವೃತ್ತಿ ವಾಪಸ್ :ಮೆಸ್ಸಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 13: ಕೋಪಾ ಅಮೆರಿಕಾದಲ್ಲಿ ಪೆನಾಲ್ಟಿ ಕಿಕ್ ಮಿಸ್ ಮಾಡಿಕೊಂಡಿದ್ದಕ್ಕೆ ಕೋಪ ಮಾಡಿಕೊಂಡು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಲಿಯೊನೆಲ್ ಮೆಸ್ಸಿ ನಿವೃತ್ತಿ ಘೋಷಿಸಿದ್ದು ತಿಳಿದಿರಬಹುದು.

ಜಗತ್ತಿನ ಶ್ರೀಮಂತ ಆಟಗಾರ ಮೆಸ್ಸಿ ಈಗ ತಮ್ಮ ಅಭಿಮಾನಿಗಳು ಹಾಗೂ ಅರ್ಜೆಂಟೀನಾದ ಪ್ರಧಾನಿಯ ಕರೆಗೆ ಓಗೊಟ್ಟು ತಮ್ಮ ನಿವೃತ್ತಿಯನ್ನು ಹಿಂಪಡೆದುಕೊಂಡಿದ್ದಾರೆ. [ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಶತಕ ಫೈನಲ್ ಸಂಭ್ರಮ]

ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಸೇರಿದಂತೆ ಅನೇಕ ಮಂದಿ ಮೆಸ್ಸಿ ಅವರನ್ನು ಮತ್ತೆ ಅರ್ಜೆಂಟೀನಾದ ನೀಲಿ ಜರ್ಸಿ ತೊಟ್ಟು ಮೈದಾನಕ್ಕೆ ಇಳಿಯುವಂತೆ ಒತ್ತಾಯ ಮಾಡಿದ್ದರು. ಕೊನೆಗೂ ಮೆಸ್ಸಿ ತಮ್ಮ ಮನಸ್ಸು ಬದಲಾಯಿಸಿದ್ದು ಮತ್ತೊಮ್ಮೆ ಅರ್ಜೆಂಟೀನಾ ಪರ ಆಡಲಿದ್ದಾರೆ. [ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳಿದ ಮೆಸ್ಸಿ]

Lionel Messi revokes retirement decision, to continue playing for Argentina

ಅರ್ಜೆಂಟೀನಾ ನನಗೆ ಎಲ್ಲವನ್ನು ಕೊಟ್ಟಿದೆ. ಈಗ ನಾನು ವಾಪಸ್ ನೀಡಬೇಕು. ಅರ್ಜೆಂಟೀನಾ ತಂಡದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಯಿದೆ. ನನ್ನಿಂದ ಇನ್ನಷ್ಟು ಸಮಸ್ಯೆ ಹೆಚ್ಚಾಗುವುದು ಬೇಡ ಎಂದು ಮೆಸ್ಸಿ ಹೇಳಿದ್ದಾರೆ.[ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ]

2014ರ ವಿಶ್ವಕಪ್, 2015 ಹಾಗೂ 2016ರ ಕೋಪಾ ಅಮೆರಿಕಾ ಹೀಗೆ ಸತತ ಸೋಲು ಕಂಡ ಬಳಿಕ ನಿರಾಶೆಗೊಂಡು ಮೆಸ್ಸಿ ಅವರು ನಿವೃತ್ತಿ ಘೋಷಿಸಿದ್ದರು. ಅದರಲ್ಲೂ ಚಿಲಿ ವಿರುದ್ಧ ಪೆನಾಲ್ಟಿ ಮಿಸ್ ಆಗಿದ್ದು ಅವರನ್ನು ಕಾಡತೊಡಗಿತ್ತು.

ಬಾರ್ಸಿಲೋನಾದ ಸೂಪರ್ ಸ್ಟಾರ್ ಮೆಸ್ಸಿ ಅವರು ತಮ್ಮ ಮುಂದಿನ ಪಂದ್ಯವನ್ನು ಉರುಗ್ವೆ ಹಾಗೂ ವೆನೆಜುವೆಲಾ ವಿರುದ್ಧ ಆಡಲಿದ್ದಾರೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Football fans the world over got a huge reason to cheer about after Argentina icon Lionel Messi announced that he has decided to come out of international retirement.
Please Wait while comments are loading...