ಪಿವಿ ಸಿಂಧು ಬೆಳ್ಳಿ ಹೆಜ್ಜೆಯ ಹಿಂದೆ ಗುರು ಗೋಪಿಚಂದ್

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋದಲ್ಲಿ ಭಾರತಕ್ಕೆ ಪದಕ ಬಂದೇ ಬರುತ್ತದೆ ಎಂದು ಗರ್ವದಿಂದ ತಲೆಯೆತ್ತಿ ಮೆರೆಯುತ್ತಿದ್ದರೆ, ನಾವೆಲ್ಲರೂ ಬ್ಯಾಡ್ಮಿಂಟನ್ ಲೋಕದ ದ್ರೋಣಾಚಾರ್ಯ ಪುಲ್ಲೆಲ್ಲಾ ಗೋಪಿಚಂದ್ ಅವರನ್ನು ನೆನೆಯಲೇ ಬೇಕು. ಇವರ ದೂರದೃಷ್ಟಿ ಇಲ್ಲದೇ ಹೋದರೆ ನಾವು ಇಂದು ರಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ಕ್ರೀಡೆ ನೋಡುತ್ತಿರಲಿಲ್ಲವೇನೋ.[ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ 'ಬೆಳ್ಳಿ' ಸಿಂಧೂರ]

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ದೇಶಕ್ಕೆ ದೇಶವೇ ಆಟಗಾರರನ್ನು ನಿರ್ಲಕ್ಷಿಸುತ್ತಿದ್ದ ಕಾಲದಲ್ಲಿ ಸೈನಾ ನೆಹ್ವಾಲ್, ಪಿವಿ ಸಿಂಧು, ಶ್ರೀಕಾಂತ್ ಕಿಡಂಬಿಯಲ್ಲಿದ್ದ ಪ್ರತಿಭೆ, ಶಕ್ತಿಯನ್ನು ಗುರುತಿಸಿ ಅವರನ್ನು ತಮ್ಮ ಶಿಷ್ಯರಾಗಿ ಸ್ವೀಕರಿಸಿ ಪಳಗಿಸಿ ಅಪ್ಪಟ ಆಟಗಾರರನ್ನಾಗಿ ರೂಪಿಸಿದ್ದು 2001ರ ಆಲ್ ಇಂಗ್ಲೆಂಡ್ ಚಾಂಪಿಯನ್ ಗೋಪಿಚಂದ್.[ಪಿವಿ ಸಿಂಧು, ಬಾಡ್ಮಿಂಟನ್ ತಾರೆಯ ಬಗ್ಗೆ ತಿಳಿದುಕೊಳ್ಳಿ]

2012ರಲ್ಲಿ ಗೋಪಿ ಶಿಷ್ಯೆಯಾಗಿದ್ದ ಸೈನಾ ನೆಹ್ವಾಲ್ ಭಾರತಕ್ಕೆ ಒಲಿಂಪಿಕ್ ಕಂಚು ತಂದುಕೊಟ್ಟರು. ಆದರೆ 2014ರಲ್ಲಿ ಸೈನಾ ಗೋಪಿಚಂದ್ ಅವರಿಂದ ದೂರವಾಗಿ ಬೆಂಗಳೂರಿನ ವಿಮಲ್ ಕುಮಾರ್ ಬಳಿ ಅಭ್ಯಾಸ ಆರಂಭಿಸಿದರು.[ಪಿವಿ ಸಿಂಧುಗೆ ಬಿಎಂಡಬ್ಲೂ ಕಾರ್ ಗಿಫ್ಟ್]

ಗೋಪಿಚಂದ್ ಹೆಸರಿನ ಅಕಾಡೆಮಿ

ಗೋಪಿಚಂದ್ ಹೆಸರಿನ ಅಕಾಡೆಮಿ

ಹೈದ್ರಾಬಾದ್ ನ ಗಚಿಬೌಲಿಯಲ್ಲಿರುವ ತಮ್ಮದೇ ಹೆಸರಿನ ಅಕಾಡೆಮಿ ಮೂಲಕ ಬ್ಯಾಡ್ಮಿಂಟನ್ ನಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿರುವ ಗೋಪಿ ಅದಕ್ಕಾಗಿ ತಮ್ಮ ಸರ್ವಸ್ವವನ್ನೇ ಮುಡಿಪಾಗಿಟ್ಟಿದ್ದಾರೆ. ಅವರಿಗೆ ಬ್ಯಾಡ್ಮಿಂಟನ್ ವೊಂದೇ ಬದುಕು.

ತಮ್ಮ ಶಿಷ್ಯರನ್ನು ಅಣಿಗೊಳಿಸಿದ್ದರು

ತಮ್ಮ ಶಿಷ್ಯರನ್ನು ಅಣಿಗೊಳಿಸಿದ್ದರು

ಪ್ರತಿದಿನ ಮುಂಜಾನೆ ನಾಲ್ಕು ಗಂಟೆಗೆ ಅಕಾಡೆಮಿಗೆ ಬರುವ ಗೋಪಿಚಂದ್ ಅವರು ಸಿಂಧು, ಕಿಂಡಬಿರೊಂದಿಗೆ ಅಭ್ಯಾಸ ನಡೆಸುತ್ತಾರೆ. ಒಂದು ಗಂಟೆ ಆಟ ಒಲಿಂಪಿಕ್ ನಲ್ಲಿ ಪದಕ ಜಯಿಸಲೇಬೇಕೆಂಬ ಏಕಮಾತ್ರ ಧ್ಯೇಯದೊಂದಿಗೆ ಒಂದು ವರ್ಷದ ಹಿಂದೆಯೇ ತಮ್ಮ ಶಿಷ್ಯರನ್ನು ಅಣಿಗೊಳಿಸಿದ್ದರು.

ವಿಶೇಷ ಫಿಸಿಕಲ್ ಫಿಟ್ನೆಸ್ ಟ್ರೇನರ್

ವಿಶೇಷ ಫಿಸಿಕಲ್ ಫಿಟ್ನೆಸ್ ಟ್ರೇನರ್

ಅದರ ಭಾಗವಾಗಿ ವೇಯ್ಟ್ ಟ್ರೇನರ್ ಮತ್ತು ಫಿಸಿಕಲ್ ಫಿಟ್ನೆಸ್ ಟ್ರೇನರ್ ಗಳನ್ನು ನೇಮಿಸಿ ಅವರಿಗೆ ವಿಶೇಷ ಹೊಣೆಗಾರಿಕೆ ನೀಡಲಾಯಿತು. ಅಂಗಳದಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ದಣಿವರಿಯದೇ ಆಡುವಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಅದು ಈಗ ಫಲಕೊಟ್ಟಿದೆ.

ಅಕಾಡೆಮಿ ನಿರ್ಮಾಣಕ್ಕೆ 13 ಕೋಟಿ ರೂಪಾಯಿ

ಅಕಾಡೆಮಿ ನಿರ್ಮಾಣಕ್ಕೆ 13 ಕೋಟಿ ರೂಪಾಯಿ

ಪ್ರತಿಯೊಂದು ಸಾಧನೆಯ ಹಿಂದೆ ನೋವು, ಅವಮಾನ ಸೋಲಿನ ಕಥೆ ಇರುತ್ತೆ. ಗೋಪಿಚಂದ್ 2001ರಲ್ಲಿ ಆಲ್ ಇಂಡಿಯಾ ಬ್ಯಾಡ್ಮಿಂಟನ್ ಟ್ರೋಫಿ ಜಯಿಸಿದ ಬಳಿಕ ಅಕಾಡೆಮಿ ಸ್ಥಾಪನೆಗೆ ಆಂಧ್ರ ಸರ್ಕಾರ 5 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ಅಕಾಡೆಮಿ ನಿರ್ಮಾಣಕ್ಕೆ 13 ಕೋಟಿ ರೂಪಾಯಿ ಬೇಕಿತ್ತು.

ಮನೆಯನ್ನು ಅಡವಿಟ್ಟಿದ್ದ ಗೋಪಿಚಂದ್

ಮನೆಯನ್ನು ಅಡವಿಟ್ಟಿದ್ದ ಗೋಪಿಚಂದ್

ಹಣಕಾಸು ನೆರವು ಸಿಗದೇ ತಮ್ಮ ಮನೆಯನ್ನು 3 ಕೋಟಿ ರೂಪಾಯಿಗೆ ಅಡವಿಡಬೇಕಾಗಿತ್ತು. ಈ ವೇಳೆ ಉದ್ಯಮಿಯೊಬ್ಬರು 5 ಕೋಟಿ ನೀಡಿದರು. ಹೀಗೆ ತಲೆಯೆತ್ತಿದ್ದ ಅಕಾಡೆಮಿ ಈ ದಿನ ಅತೀ ದೊಡ್ಡ ಕ್ರೀಡಾಕೂಟದಲ್ಲಿ ಭಾರತದ ಹೆಸರು ಅಚ್ಚಳಿಯದಂತೆ ಮಾಡಿದೆ. ನೀವು ನೋಡುತ್ತಿರುವುದು ಸೆಪ್ಟೆಂಬರ್ 2014ರ ಚಿತ್ರ

ದೇಶದ ಏಕೈಕ ಬ್ಯಾಡ್ಮಿಂಟನ್ ಅಕಾಡೆಮಿ

ದೇಶದ ಏಕೈಕ ಬ್ಯಾಡ್ಮಿಂಟನ್ ಅಕಾಡೆಮಿ

ದೇಶದ ಏಕೈಕ ಬ್ಯಾಡ್ಮಿಂಟನ್ ಅಕಾಡೆಮಿ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ 150ಕ್ಕೂ ಹೆಚ್ಚು ಆಟಗಾರರಿಗೆ ವೃತಿಪರ ತರಬೇತಿ ನೀಡುತ್ತಿದೆ. ಈ ಆಕಾಡೆಮೆಯಲ್ಲಿ ತರಬೇತಿ ಪಡೆದ ಸೈನಾ, ಸಿಂಧು, ಶ್ರೀಕಾಂತ್ ಇಂದು ವಿಶ್ವವೇ ಇವರನ್ನು ಗುರುತಿಸುತ್ತಿರುವುದೇ ಗೋಪಿಚಂದ್ ಅಕಾಡೆಮಿಯ ಹೆಗ್ಗಳಿಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As India basks in the success story of PV Sindhu, one man is quietly doing his job in the background, preparing the Hyderabad girl for her biggest test of her career today (August 19)
Please Wait while comments are loading...