ಅಭಿಮಾನಿಗೆ ಸ್ಕರ್ಟ್ ತೊಡಿಸಿದ ಸ್ಟಾರ್ ಆಟಗಾರ್ತಿ ಕಿಮ್

Posted By:
Subscribe to Oneindia Kannada

ವಿಂಬಲ್ಡನ್, ಜುಲೈ 15: ವಿಂಬಲ್ಡನ್ ನಲ್ಲಿ ಬಿಳಿ ಉಡುಪು ವಸ್ತ್ರಸಂಹಿತೆ ಕಡ್ಡಾಯವಾಗಿರುವುದು ಗೊತ್ತಿರುವ ವಿಷಯ. ಬೆಲ್ಜಿಯಂನ ಟೆನಿಸ್ ಆಟಗಾರ್ತಿ ಕಿಮ್ ಕ್ಲೈಸ್ಟರ್ಸ್, ಅಭಿಮಾನಿಯೊಬ್ಬನಿಗೆ ಬಿಳಿ ಸ್ಕರ್ಟ್ ತೊಡಿಸಿದ ಪ್ರಸಂಗ ನಡೆದಿದೆ.

ಮಹಿಳೆಯರ ಡಬಲ್ಸ್ ಪ್ರದರ್ಶನ ಪಂದ್ಯದ ವೇಳೆ ಕಿಮ್ ಕ್ಲೈಸ್ಟರ್ಸ್ ಮ್ಯಾಚ್ ಪಾಯಿಂಟ್ ಗಾಗಿ ಸರ್ವ್ ಮಾಡಬೇಕಿತ್ತು. ಈ ವೇಳೆ ಅಭಿಮಾನಿಗಳಿಗೆ ಒಂದಷ್ಟು ಮನರಂಜನೆ ನೀಡುವ ನಿಟ್ಟಿನಲ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ತಿರುಗಿ ಮ್ಯಾಚ್ ಪಾಯಿಂಟ್ ಗೆ ಯಾವ ಕಡೆ ಸರ್ವ್ ಮಾಡಲಿ ಅಂತಾ ಕೇಳುತ್ತಾರೆ.

Kim Clijsters Makes Male Fan Put On White Skirt

ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಪುರುಷನೊಬ್ಬ 'ಬಾಡಿ' ಅಂತಾ ಕೂಗಿದ್ದ. ಕೂಡಲೇ ಅವನನ್ನು ಅಂಗಳದೊಳಗೆ ಕಿಮ್ ಕರೆದರು.
ಪಂದ್ಯ ಆಡಲು ಯೂನಿಫಾರ್ಮ್ ಕಡ್ಡಾಯವಾಗಿತ್ತು. ಆದ್ರೆ ಆತ ಹಸಿರು ಶರ್ಟ್ ಹಾಗೂ ನೀಲಿ ಶಾರ್ಟ್ಸ್ ಧರಿಸಿದ್ದ. ಕೂಡಲೇ ಕಿಮ್ ತಮ್ಮ ಬ್ಯಾಗ್ ನಲ್ಲಿದ್ದ ಬಿಳಿ ಸ್ಕರ್ಟ್ ಒಂದನ್ನು ತಂದಿದ್ದಾರೆ.

ಅದನ್ನು ಅಭಿಮಾನಿಗೆ ತೊಡಿಸಿದ್ದಾರೆ. ಆತ ದಪ್ಪಗಿದ್ದಿದ್ರಿಂದ ಸ್ಕರ್ಟ್ ಸುಲಭವಾಗಿ ಮೇಲಕ್ಕೆ ಏರಲಿಲ್ಲ. ಆದ್ರೂ ಕಷ್ಟಪಟ್ಟು ಹಾಕಿಕೊಂಡ. ಇದನ್ನೆಲ್ಲ ನೋಡಿ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗಿದ್ರು. ಕಿಮ್ ಕ್ಲೈಸ್ಟರ್ಸ್ ಕೂಡ ಈ ಕ್ಷಣವನ್ನು ಎಂಜಾಯ್ ಮಾಡಿದ್ರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belgian tennis star Kim Clijsters took that to heart as she sparked an amazing scene after inviting a male fan to play a point. During a ladies' invitational doubles tennis match on Friday, an exhibition for fans to come see older or retired players, Clijsters decided to have some fun away from the intensity
Please Wait while comments are loading...