ಬ್ಯಾಡ್ಮಿಂಟನ್ : ಫ್ರೆಂಚ್ ಓಪನ್ ಗೆದ್ದು, ಹೊಸ ದಾಖಲೆ ಬರೆದ ಶ್ರೀಕಾಂತ್

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 29: ಭಾರತದ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರೀಕಾಂತ್‌ ಫ್ರೆಂಚ್‌ ಓಪನ್ ಸೂಪರ್ ಸೀರಿಸ್‌ ಗೆದ್ದು ಹೊಸ ದಾಖಲೆ ಬರೆದಿದ್ದಾರೆ.

ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಗೆದ್ದ ಭಾರತದ ಶ್ರೀಕಾಂತ್

ಏಕಪಕ್ಷೀಯವಾಗಿ ನಡೆದ ಬ್ಯಾಡ್ಮಿಂಟನ್ ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ಶ್ರೀಕಾಂತ್ ಅವರು, ಜಪಾನಿನ ವಿಶ್ವದ ನಂ. 40 ನೇ ಶ್ರೇಯಾಂಕದ ಕೆಂಟಾ ನಿಶಿಮೊಟೊ ಅವರನ್ನು ಕೇವಲ 35 ನಿಮಿಷಗಳಲ್ಲಿ ಸುಲಭವಾಗಿ ಸೋಲಿಸಿದರು.

ಕೆಂಟಾ ನಿಶಿಮೊಟೊರನ್ನು 21-14, 21-13 ಅಂತರದಿಂದ ಸೋಲಿಸಿದ ಶ್ರೀಕಾಂತ್ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು.

Kidambi Srikanth Wins French Open to Clinch 4th Super Series Title of 2017

ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಭಾರತದ ಆಟಗಾರ ಎಚ್ ಎಸ್ ಪ್ರನೋಯ್ ಅವರನ್ನು 14-21, 21-19, 21-18 ಸೆಟ್ ಗಳಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದ್ದರು.

ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಲೀ ಹ್ಯೂನ್ ಅವರ ವಿರುದ್ಧ 21-10, 21-5ರ ನೇರ ಸೆಟ್ ಗಳಲ್ಲಿ 25 ವರ್ಷ ವಯಸ್ಸಿನ ಶ್ರೀಕಾಂತ್ ಅವರು ಗೆಲುವಿನ ನಗೆ ಬೀರಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೊಸ ದಾಖಲೆ: ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದ ಕಿದಂಬಿ ಶ್ರೀಕಾಂತ್. ಇಂಡೋನೇಷಿಯಾ ಓಪನ್, ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಗೆದ್ದುಕೊಂಡಿದ್ದ ಶ್ರೀಕಾಂತ್, ಸಿಂಗಪುರ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದರು. ನಂತರ ಡೆನ್ಮಾರ್ಕ್ ಓಪನ್ ಗೆದ್ದರು. ಈಗ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಗೆಲ್ಲುವ ಮೂಲಕ ಕಿದಂಬಿ ಶ್ರೀಕಾಂತ್ ಹೊಸ ಭಾರತೀಯ ದಾಖಲೆ ಬರೆದಿದ್ದಾರೆ.

ವಿಶ್ವದಲ್ಲಿ ನಾಲ್ವರು ಆಟಗಾರರು ಮಾತ್ರ ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸೀರಿಸ್ ಗೆದ್ದುಕೊಂಡಿದ್ದಾರೆ. ಲೀ ಚಾಂಗ್ ವೈ, ಲಿನ್ ಡಾನ್ ಹಾಗೂ ಚೆನ್ ಲಾಂಗ್ ಅವರ ಸಾಲಿಗೆ ಶ್ರೀಕಾಂತ್ ಸೇರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kidambi Srikanth Wins French Open Super Series 2017.He completely outclassed Japanese Kenta Nishimoto 21-14, 21-13 to clinch the French Open Super Series Premier title on Sunday.
Please Wait while comments are loading...