ಕರ್ನಾಟಕ ಕ್ರೀಡಾರತ್ನ ಮತ್ತು ಏಕಲವ್ಯ ಪ್ರಶಸ್ತಿ ಪ್ರಕಟ

Posted By: Prithviraj
Subscribe to Oneindia Kannada

ಮೈಸೂರು, ಅಕ್ಟೋಬರ್ 7 : 2015ನೇ ಸಾಲಿನ 'ಕ್ರೀಡಾ ರತ್ನ' ಪ್ರಶಸ್ತಿಗೆ ಭಾಜನರಾಗಿರುವ ಕ್ರಿಡಾಪಟುಗಳ ಹೆಸರನ್ನು ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿದೆ.

ಈ ಬಾರಿ ರಾಜ್ಯದ 16 ಕ್ರೀಡಾ ಪಟುಗಳಿಗೆ 2015ನೇ ಸಾಲಿನ 'ಏಕಲವ್ಯ' ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಗ್ರಾಮೀಣ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 2014-15ರಲ್ಲಿ ಹೊಸ ಯೋಜನೆಯಾಗಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಸ್ಥಾಪಿಸಲಾಗಿದೆ. ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು 1992ರಿಂದ ರಾಜ್ಯದ ಕ್ರೀಡಾಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ 2 ಲಕ್ಷ ರು. ನಗದು ಹಾಗೂ ಏಕಲವ್ಯನ ಕಂಚಿನ ಮೂರ್ತಿಯನ್ನು ಒಳಗೊಂಡಿದೆ.

Karnataka Kreeda Ratna and Ekalavya sports awards announced

ಬೆಂಗಳೂರಿನ ಈಜು ತರಬೇತುದಾರ ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್ ಮತ್ತು ದಾವಣಗೆರೆಯ ಕುಸ್ತಿ ತರಬೇತುದಾರ ಶಿವಾನಂದ ಆರ್ ಅವರು ಜೀವಮಾನದ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು 1.50 ಲಕ್ಷ ರು. ನಗದು ಹೊಂದಿದೆ. ಮೈಸೂರಿನ ಜೆ.ಕೆ. ಮೈದಾನದ ವೈದ್ಯಕೀಯ ಕಾಲೇಜಿನ ಅಮೃತಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ.

ಏಕಲವ್ಯ ಪುರಸ್ಕೃತರು

* ದಾಮಿನಿ ಕೆ.ಗೌಡ (ಈಜು) - ಬೆಂಗಳೂರು
* ವಿದ್ಯಾ ಪಿಳ್ಳೈ(ಬಿಲಿಯರ್ಡ್ಸ್) - ಬೆಂಗಳೂರು
* ಪವನ್ ಶೆಟ್ಟಿ (ಬಾಡಿಬಿಲ್ಡಿಂಗ್) - ಬೆಂಗಳೂರು
* ನಿತಿನ್ ತಿಮ್ಮಯ್ಯ (ಹಾಕಿ)- ಬೆಂಗಳೂರು
* ರಾಜಗುರು ಎಸ್.(ಕಬಡ್ಡಿ- ಬೆಂಗಳೂರು
* ಕೃಷ್ಣ ಎ.ನಾಯ್ಕೋಡಿ( ಸೈಕ್ಲಿಂಗ್)- ವಿಜಯಪುರ
* ಅರವಿಂದ ಎ.(ಬಾಸ್ಕೆಟ್​ಬಾಲ್​)- ಬೆಂಗಳೂರು
* ಅರ್ಪಿತಾ ಎಂ.(ಅಥ್ಲೆಟಿಕ್ಸ್​- ಶಿವಮೊಗ್ಗ
* ಮಹಮದ್ ರಫಿಕ್ ಹೋಳಿ (ಕುಸ್ತಿ)- ಧಾರವಾಡ
* ಮೇಘನಾ ಎಂ. ಸಜ್ಜನರ್(ಶೂಟಿಂಗ್)- ಬೆಂಗಳೂರು
* ಧೃತಿ ತಾತಾಚಾರ್ ವೇಣುಗೋಪಾಲ್ (ಟೆನಿಸ್​) - ಮೈಸೂರು
* ಅನುಪ್ ಡಿಕೋಸ್ಟಾ (ವಾಲಿಬಾಲ್)- ಉಡುಪಿ
* ಜಿ.ಎಂ. ನಿಶ್ಚಿತ(ಬ್ಯಾಡ್ಮಿಂಟನ್)- ಬೆಂಗಳೂರು
* ಶಾವದ್ ಜೆ.ಎಂ.(ಪ್ಯಾರಾಥ್ಲೆಟಿಕ್ಸ್)- ಬೆಂಗಳೂರು
* ಉಮೇಶ್ ಆರ್.ಕಾಡೆ (ಪ್ಯಾರಾ ಈಜು)- ಬೆಳಗಾವಿ
* ಕಂಚನ್ ಮುನ್ನೂರಕರ್(ವೇಟ್​ಲಿಫ್ಟಿಂಗ್)- ಬೆಳಗಾವಿ

ಕ್ರೀಡಾರತ್ನ ಪುರಸ್ಕೃತರು

* ಡಿ.ಎನ್. ರುದ್ರಸ್ವಾಮಿ(ಯೋಗ)- ಬೆಂಗಳೂರು
* ಪೂರ್ಣಿಮಾ ಪಿ.(ಥ್ರೋಬಾಲ್​)- ದ.ಕ.
* ಅಮೋಘ್ ಯು. ಚಚಡಿ(ಆಟ್ಯಾ-ಪಾಟ್ಯಾ)- ಬೆಳಗಾವಿ
* ರಂಜಿತ ಎಂ.ಪಿ.(ಬಾಲ್​ಬಾಡ್ಮಿಂಟನ್)- ಹಾಸನ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka state government has announced Karnataka Kreeda Ratna awards for the year 2015. 16 sports persons have been selected for Ekalavya award. This was announced by Pramod Madhwaraj, Sports and Youth Empowerment minister, on Friday.
Please Wait while comments are loading...