ಫ್ರೆಂಚ್ ಓಪನ್ ವಿಜೇತ ಕನ್ನಡಿಗ ರೋಹನ್ ರನ್ನು ಸನ್ಮಾನಿಸಿದ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಜೂನ್ 13: ಪ್ಯಾರೀಸ್ ನಲ್ಲಿ ಇತ್ತೀಚೆಗೆ ಜರುಗಿದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ಫೈನಲ್ಸ್ ಪ್ರಶಸ್ತಿಯನ್ನು ಗೆದ್ದ ಕೊಡಗಿನ ಕುವರ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ(ಜೂನ್ 13) ಅಭಿನಂದಿಸಿ, ಸನ್ಮಾನಿಸಿದರು.

ಮುಖ್ಯಮಂತ್ರಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ರೋಹನ್ ಬೋಪಣ್ಣ ಅವರನ್ನು ಅಭಿನಂದಿಸಿದ್ದಲ್ಲದೆ, 10ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದರು.

ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್ ನಲ್ಲಿ ಭಾರತದ ರೋಹನ್ ಬೋಪಣ್ಣ ಅವರು ಕೆನಡಾದ ಗೇಬ್ರಿಯೆಲಾ ದಬ್ರೋವ್ ಸ್ಕಿ ಅವರ ಜತೆಗೂಡಿ ಫ್ರೆಂಚ್ ಓಪನ್ ಮಿಶ್ರಡಬಲ್ಸ್ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ನಂತರ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗಳಿಸಿದ ಸಾಧನೆಯನ್ನು ರೋಹನ್ ಬೋಪಣ್ಣ ಮಾಡಿದ್ದಾರೆ.

ರೋಹನ್ ಬೋಪಣ್ಣ ಹಾಗೂ ಗೇಬ್ರಿಯೆಲಾ

ರೋಹನ್ ಬೋಪಣ್ಣ ಹಾಗೂ ಗೇಬ್ರಿಯೆಲಾ

ರೋಹನ್ ಬೋಪಣ್ಣ ಹಾಗೂ ಗೇಬ್ರಿಯೆಲಾ ದಬ್ರೋವಸ್ಕಿ ಜೋಡಿ ಎದುರು ಜರ್ಮನಿಯ ಅನ್ನಾ ಲೆನಾ ಗ್ರೊಯಿನೆಫೆಲ್ಡ್ ಹಾಗು ಕೊಲಂಬಿಯಾದ ರಾಬರ್ಟ್ ಫರಾ ಅವರು 2-6, 6-2, 12-10 ರಲ್ಲಿ ಸೋಲು ಕಂಡಿದ್ದಾರೆ. ಇಲ್ಲಿ ತನಕ2011, 2014 ಹಾಗೂ 2016ರ ಕ್ವಾರ್ಟರ್ ಫೈನಲ್ ತಲುಪಿದ್ದು ಇಲ್ಲಿತನಕದ ಶ್ರೇಷ್ಠ ಸಾಧನೆಯಾಗಿತ್ತು.

ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್

ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್

2010ರಲ್ಲಿ ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್ ತಲುಪಿದ್ದ ರೋಹಣ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಮ್ ಅಲ್ ಹಕ್ ಖುರೇಷಿ ಜೋಡಿಯನ್ನು ಬಾಬ್ ಹಾಗೂ ಮೈಕ್ ಬ್ರಿಯಾನ್ ಸೋದರರು ಸೋಲಿಸಿದ್ದರು.

ಕ್ರೀಡಾ ಸಾಧಕರಿಗೆ ಸನ್ಮಾನ

ಕ್ರೀಡಾ ಸಾಧಕರಿಗೆ ಸನ್ಮಾನ

ಒಲಿಂಪಿಕ್ಸ್, ಕಾಮನ್ ವೆಲ್ತ್ ಗೇಮ್ಸ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಅಂತಾರಾಷ್ಟ್ರ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಬೆಂಗಳೂರಿಗರು, ಕನ್ನಡಿಗರನ್ನು ಕರ್ನಾಟಕ ಸರ್ಕಾರ ಸನ್ಮಾನಿಸಿ, ಬಹುಮಾನ ನೀಡುತ್ತಾ ಬಂದಿದೆ. ಈ ಹಿಂದೆ ವಿಂಬಲ್ಡನ್ ನಲ್ಲಿ ರೋಹನ್ ಅವರ ಸಾಧನೆಯನ್ನು ಮನ್ನಿಸಿ ಅಂದಿನ ಯಡಿಯೂರಪ್ಪ ಸರ್ಕಾರ ಕೂಡಾ ಸನ್ಮಾನಿಸಿತ್ತು.

ಚೆಕ್ ನೀಡಿದ ಸಿದ್ದರಾಮಯ್ಯ

ಚೆಕ್ ನೀಡಿದ ಸಿದ್ದರಾಮಯ್ಯ

ಎಲ್ಲಾ ಬಗೆಯ ಕ್ರೀಡೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ನಮ್ಮ ಸರ್ಕರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಹೇಳಿದರು. 10 ಲಕ್ಷ ರು ಬೆಲೆಯ ಚೆಕ್ಕನ್ನು ರೋಹನ್ ಬೋಪಣ್ಣ ಅವರಿಗೆ ನೀಡಿದರು.

ಜರ್ಮನಿಯ ಅನ್ನಾ ಲೆನಾ ಗ್ರೊಯಿನೆಫೆಲ್ಡ್ ಹಾಗು ಕೊಲಂಬಿಯಾದ ರಾಬರ್ಟ್ ಫರಾ ವಿರುದ್ಧ 2-6, 6-2, 12-10 ರಲ್ಲಿ ರೋಹನ್ ಬೋಪಣ್ಣ ಹಾಗೂ ಗೇಬ್ರಿಯೆಲಾ ದಬ್ರೋವಸ್ಕಿ ಜೋಡಿ ಗೆಲುವು ದಾಖಲಿಸಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
13) felicitated by Siddaramaiah led Karnataka government for his outstanding performance at the just concluded French Open Tennis Tournament in which Rohan Bopanna along with Gabriela Dabrowski clinched mixed double title.
Please Wait while comments are loading...