ವಿಶ್ವಕಪ್ ಕಬಡ್ಡಿ: ಅರ್ಜೆಂಟೀನಾ ವಿರುದ್ದ ಭಾರತಕ್ಕೆ ಭರ್ಜರಿ ಜಯ

Posted By:
Subscribe to Oneindia Kannada

ಅಹಮದಾಬಾದ್, ಅಕ್ಟೋಬರ್ 16: ಕಬಡ್ಡಿ ವಿಶ್ವಕಪ್ ನ ಲೀಗ್ ಹಂತದಲ್ಲಿ ಮೊದಲ ಪಂದ್ಯವನ್ನು ಸೋತ ಭಾರತ ನಂತರ ಗೆಲುವಿನ ಹಾದಿ ಹಿಡಿದಿದ್ದು ಎಲ್ಲರಿಗೂ ತಿಳಿದಿದೆ. ದುರ್ಬಲ ಅರ್ಜೆಂಟೀನಾ ವಿರುದ್ಧ ತನ್ನ ನಾಲ್ಕನೇ ಲೀಗ್ ಪಂದ್ಯದಲ್ಲಿ ಭರ್ಜರಿಯಾಗಿ ಜಯ ದಾಖಲಿಸಿದ ಅನೂಪ್ ಪಡೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ,

ಬಲಿಷ್ಠ ಭಾರತ ತಂಡದೆದುರು ಅರ್ಜೆಂಟೀನಾ ತಂಡ ದಾಖಲೆಯ 54 ಅಂಕಗಳ ಅಂತರದಿಂದ ಸೋಲು ಕಂಡಿದೆ. ಅಹಮದಾಬಾದಿನ ಟ್ರಾನ್ಸ್​ಸ್ಟೇಡಿಯಾದ ದಿ ಅರೆನಾ ಸ್ಟೇಡಿಯಂನಲ್ಲಿ ಶನಿವಾರದಂದು ನಡೆದ ಪಂದ್ಯದಲ್ಲಿ ಆರಂಭದಿಂದಲೇ ಭಾರತ ಪ್ರಾಬಲ್ಯ ಮೆರೆಯಿತು. ಎದುರಾಳಿ ತಂಡವನ್ನು 6 ಬಾರಿ ಆಲೌಟ್ ಮಾಡಿ ಬೋನಸ್ ನೊಂದಿಗೆ 74-20 ಅಂಕಗಳಿಂದ ಗೆಲುವು ದಾಖಲಿಸಿತು.

Kabaddi World Cup: India beat Argentina to keep semi-final hopes alive

ನಾಕೌಟ್ ಹಂತ: ಎ ಗುಂಪಿನಲ್ಲಿ 16 ಅಂಕಗಳಿಸಿರುವ ಭಾರತ ತನ್ನ ಮಂದಿನ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಮಂಗಳವಾರ ಆಡಲಿದೆ. ಇನ್ನೊಂದು ಗೆಲುವು ಸಾಧಿಸಿದರೆ ಸೆಮಿಫೈನಲ್ ಹಂತ ಖಚಿತಗೊಳ್ಳಲಿದೆ.

ಭಾರತದ ರೈಡರ್ ​ಗಳಾದ ಅಜಯ್ ಠಾಕೂರ್ (14), ರಾಹುಲ್ ಚೌಧರಿ (11) ಅಂಕಗಳನ್ನು ಲೂಟಿ ಮಾಡಿದರು. ಭಾರತದ ಅಂಕ ಗಳಿಕೆ ಈ ಟೂರ್ನಿಯ 2ನೇ ಗರಿಷ್ಠ ಅಂಕಗಳ ಜಯವಾಗಿದೆ. ಪೋಲೆಂಡ್ ತಂಡ ಅಮೆರಿಕ ವಿರುದ್ಧ 75 ಅಂಕ ಕಲೆಹಾಕಿದ್ದು ದಾಖಲೆ.
ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಅಚ್ಚರಿಯ ಸೋಲು ಕಂಡ ಭಾರತ ನಂತರ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India cruised to a comfortable 74-20 win over Argentina as the home raiders flexed their muscles to notch a Kabaddi World Cup record 54-point margin win at the TransStadia on Saturday.
Please Wait while comments are loading...