ವಿಶ್ವಕಪ್ ಕಬಡ್ಡಿ: ಅ.22 ರಂದು ಫೈನಲ್‌ನಲ್ಲಿ ಭಾರತ-ಇರಾನ್‌ ಮುಖಾಮುಖಿ

Written By: Ramesh
Subscribe to Oneindia Kannada

ಅಹಮದಾಬಾದ್, ಅಕ್ಟೋಬರ್. 22: ವಿಶ್ವಕಪ್‌ ಕಬಡ್ಡಿಯಲ್ಲಿ ಸತತ ಮೂರನೇ ಬಾರಿಗೆ ಫೈನಲ್‌ನಲ್ಲಿ ಭಾರತ ಮತ್ತು ಇರಾನ್‌ ಮುಖಾಮುಖಿಯಾಗಲಿವೆ. ಶುಕ್ರವಾರ ನಡೆದ ಸೆಮೀಸ್ ನಲ್ಲಿ ಥಾಯ್ಲೆಂಡ್ ವಿರುದ್ಧ ಭಾರತ 73-20 ಅಂಕಗಳಿಂದ ಸುಲಭ ಗೆಲವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.

[ವಿಶ್ವಕಪ್ ಕಬಡ್ಡಿ ವೇಳಾಪಟ್ಟಿ : ಕೊರಿಯಾ ವಿರುದ್ಧ ಭಾರತದ ಮೊದಲ ಪಂದ್ಯ]

ಲೀಗ್‌ ಹಂತದಲ್ಲಿ ಜಪಾನ್‌, ಪೋಲೆಂಡ್‌, ಕೀನ್ಯಾಗಳ ವಿರುದ್ಧ ಅತ್ಯುತ್ತಮವಾಗಿ ಆಡಿದ್ದ ಥಾಯ್ಲೆಂಡ್ 4 ಪಂದ್ಯಗಳಲ್ಲಿ ಗೆದ್ದು ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತ್ತು. ಆ ಎಲ್ಲಾ ಪಂದ್ಯಗಳಲ್ಲಿಯೂ ಪರಿಣಾಮಕಾರಿಯಾಗಿ ಆಡಿದ್ದ ಥಾಯ್ಲೆಂಡ್ ನಾಲ್ಕರ ಘಟ್ಟದಲ್ಲಿ ಭಾರತದ ಎದುರು ಮಂಕಾಗಿತ್ತು. ದುರ್ಬಲ ಥಾಯ್ಲೆಂಡ್ ತಂಡ 20-73 ಭಾರೀ ಅಂತರದಲ್ಲಿ ಭಾರತಕ್ಕೆ ಶರಣಾಯಿತು.

India

ಭಾರತದ ರೈಡರ್ ಗಳು ಪಂದ್ಯದ ಆರಂಭದಿಂದಲೇ ಎದುರಾಳಿ ತಂಡದ ಮೇಲೆ ಸವಾರಿ ಮಾಡಿದರು. ಪ್ರದೀಪ್‌ ನರ್ವಾಲ್ (14 ಪಾಯಿಂಟ್ಸ್), ಅಜಯ್ ಠಾಕೂರ್‌ (11), ಅನೂಪ್‌ ಕುಮಾರ್‌ (5), ಸುರೇಂದ್ರ ನಡ (5) ಮತ್ತು ಮಂಜಿತ್ ಚಿಲಾರ್ (4) ಗಮನ ಸೆಳೆದರೆ, ಥಾಯ್ಲೆಂಡ್ ನ ಚಾನ್ ವಿತ್ ಗಳಿಸಿದ 6 ಪಾಯಿಂಟ್‌ಗಳೇ ಆ ತಂಡದಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ಪಾಯಿಂಟ್ಸ್ ಆಗಿತ್ತು.

ಸ್ಕೋರ್ ವಿವರ:

ಭಾರತ ತಂಡ ರೈಡಿಂಗ್ ನಲ್ಲಿ ಒಟ್ಟು 42 ಮತ್ತು ಟ್ಯಾಕ್ಲಿಂಗ್ ನಲ್ಲಿ 18 ಪಾಯಿಂಟ್ಸ್ ಗಳಿಸಿದರೆ, ಥಾಯ್ಲೆಂಡ್ ಟ್ಯಾಕ್ಲಿಂಗ್ ನಲ್ಲಿ ಕೇವಲ 4 ಪಾಯಿಂಟ್ಸ್ ಗಳಿಸಲಷ್ಟೇ ಶಕ್ತವಾಯಿತು.

Iran

ಇರಾನ್‌ ಮತ್ತು ಉತ್ತರ ಕೊರಿಯಾ ಪಂದ್ಯ: ಶುಕ್ರವಾರ ಇರಾನ್‌ ಹಾಗೂ ಕೊರಿಯಾ ನಡುವೆ ಮೊದಲ ಸೆಮೀಸ್ ನಲ್ಲಿ ಇರಾನ್ 28-22ರಿಂದ ಕೊರಿಯಾದ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯ : ಭಾರತ ಮತ್ತು ಇರಾನ್ ತಂಡಗಳು ಕಪ್ ಗಾಗಿ ಶನಿವಾರ ಕಾದಾಟ ನಡೆಸಲಿವೆ.
ಸಮಯ: ಭಾರತೀಯ ಕಾಲಾಮಾನ 7.45 PM.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಗೂ ಸ್ಟಾರ್ ಹೆಚ್ ಡಿ, ಕನ್ನಡಕ್ಕಾಗಿ- ಸುವರ್ಣ ಪ್ಲಸ್ ನಲ್ಲಿ ನೇರ ಪ್ರಸಾರವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Kabaddi World Cup 2016 has entered its final stage after India defeated Thailand by a whopping margin of 73-20 while Iran registered a thrilling win over Republic of Korea 28-22 in the semi-finals on Friday (Oct 21).
Please Wait while comments are loading...