ರಾಷ್ಟ್ರೀಯ ಕಬಡ್ಡಿ ಆಟಗಾರ ರೋಹಿತ್ ಕುಮಾರ್ ಚಿಲ್ಲಾರ್ ಅರೆಸ್ಟ್!

Written By: Ramesh
Subscribe to Oneindia Kannada

ನವದೆಹಲಿ, ಅಕ್ಟೋಬರ್. 21 : ಲಲಿತಾ ಅವರ ಆತ್ಮಹತ್ಯೆ ಕೇಸ್ ಅಡಿಯಲ್ಲಿ ಪತಿ ರಾಷ್ಟ್ರೀಯ ಕಬಡ್ಡಿ ಆಟಗಾರ ರೋಹಿತ್ ಕುಮಾರ್ ಚಿಲ್ಲಾರ್ ಅವರನ್ನು ಶುಕ್ರವಾರ ಮುಂಬೈನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಭಾರತೀಯ ನೌಕಪಡೆಯಲ್ಲಿ ಕೆಲಸ ಮಾಡುತ್ತಿರುವ ರೋಹಿತ್ ರನ್ನು ಶಕ್ರವಾರ ಬೆಳಿಗ್ಗೆ ಮುಂಬೈನ ಕೊಲಬದ ಕ್ವಾಟರ್ಸ್ ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಅವರನ್ನು ಮುಂಬೈ ಕೋರ್ಟ್ ಗೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಅಲ್ಲಿಂದ ದೆಹಲಿಗೆ ಕರೆದುಕೊಂಡು ಹೋಗಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. [ರೋಹಿತ್ ವಿಡಿಯೋ : ನಾನೂ ಅವಳ ಬಳಿಗೆ ಹೋಗ್ತೇನೆ]

Rohith Kumar

ಲಲಿತಾಳ ತಂದೆ ಕರಣ್ ಸಿಂಗ್ ಅವರು ರೋಹಿತ್ ಹಾಗೂ ಅವರ ಪೋಷಕರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ರೋಹಿತ್ ಕುಟುಂಬಕ್ಕೆ ಗುರುವಾರ ನಾಗೋಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.

ನೋಟಿಸ್ ಗೆ ರೋಹಿತ್ ಕಟುಂಬ ಯಾವುದೇ ಪ್ತತಿಕ್ರಿಯೇ ನೀಡದೆ ಮನೆ ಬಿಟ್ಟು ತಲೆ ಮರೆಸಿಕೊಡಿದ್ದರು. ಕಳೆದ ವರ್ಷ ಮಾರ್ಚ್ ನಲ್ಲಿ ರೋಹಿತ್ ಲಲಿತಾಳನ್ನು ವಿವಾಹವಾಗಿದ್ದರು. ಲಲಿತಾ ಅವರು ದೆಹಲಿಯಲ್ಲಿ ವಾಸವಾಗಿದ್ದರು.

ಅಕ್ಟೋಬರ್ 18ರಂದು ದೆಹಲಿಯ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ನನ್ನ ಪತಿ ನನಗೆ ಹಿಂಸೆ ನೀಡುತ್ತಿದ್ದರು ಎಂದು ವಿವರವಾಗಿ ತಿಳಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
National level Kabbadi player Rohit Kumar Chillar was arrested from Mumbai on Friday, three days after his wife Lalita committed suicide, Delhi Police said.
Please Wait while comments are loading...