ಅಜರುದ್ದೀನ್ ಗೊತ್ತಾ ಎಂದಿದ್ದಕ್ಕೆ ಗುರ್ ಎಂದ ಜ್ವಾಲಾ!

Posted By:
Subscribe to Oneindia Kannada

ಸೂರತ್, ಮೇ 10: ಭಾರತದ ಹೆಮ್ಮೆಯ ಬಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರು ಯಾಕೋ ಗರಂ ಆಗಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಜತೆ ನಿಮ್ಮ ಸಂಬಂಧವೇನು? ಎಂಬ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಘಟನೆ ನಡೆದಿದೆ.

2010ರ ಕಾಮನ್ ವೆಲ್ತ್ ಡಬಲ್ಸ್ ಚಾಂಪಿಯನ್ ಜ್ವಾಲಾ ಗುಟ್ಟಾ ಅವರು ಸೂರತ್ ನಲ್ಲಿ ಕ್ರೀಡಾ ಕಾಂಪ್ಲೆಕ್ಸ್ ಉದ್ಘಾಟನೆಗೆ ಬಂದಿದ್ದಾಗ ಸಹಜವಾಗಿ ಅವರ ಮುಂದೆ ಅಜರುದ್ದೀನ್ ಬಗ್ಗೆ ಪ್ರಶ್ನೆ ಬಂದಿದೆ. ಇದಕ್ಕೆ ಉತ್ತರಿಸಿದ ಜ್ವಾಲಾ,

Jwala Gutta loses her temper when asked about rumoured affair with Azharuddin

'ಅದೆಲ್ಲಾ ಸುಳ್ಳು ಸುದ್ದಿ ಎಂದು ನಿಮಗೆ ತಿಳಿದಿಲ್ಲವೇ? ಒಂದೇ ಪ್ರಶ್ನೆಯನ್ನು ಮತ್ತೆ ಮತ್ತೆ ಏಕೆ ಕೇಳುತ್ತೀರಿ? ಈ ಪ್ರಶ್ನೆಗೆ ನಾನು ಈ ಮೊದಲೇ ಉತ್ತರಿಸಿದ್ದೇನೆ, ಗಾಳಿ ಸುದ್ದಿಯ ಬಗ್ಗೆ ಹೆಚ್ಚು ಮಾತನಾಡಲು ಇಷ್ಟವಿಲ್ಲ. ಬೇರೆ ಕೆಲಸ ನೋಡಿಕೊಳ್ಳಿ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮೇ13ರಂದು ಮೊಹಮ್ಮದ್ ಅಜರುದ್ದೀನ್ ಜೀವನ ಆಧಾರಿಸಿದ 'ಅಜರ್' ಚಿತ್ರ ತೆರೆಗೆ ಬರುತ್ತಿದೆ. ಹೀಗಾಗಿ ಅಜರುದ್ದೀನ್ ಬಗ್ಗೆ ಜ್ವಾಲಾ ಅವರನ್ನು ಪ್ರಶ್ನಿಸಲಾಗಿದೆ. ಹೈದರಾಬಾದ್ ಮೂಲದ ಈ ಇಬ್ಬರು ಕ್ರೀಡಾಪಟುಗಳ ನಡುವೆ ಏನೋ ಕುಚ್ ಕುಚ್ ನಡೆಯುತ್ತಿದೆ ಎಂದು ಗಾಳಿ ಸುದ್ದಿ ಹಬ್ಬಿತ್ತು.

ಜ್ವಾಲಾ ಗುಟ್ಟಾ ಹಾಗೂ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೋಡಿ ಬಾಡ್ಮಿಂಟನ್ ವಿಶ್ವ ಫೆಡರೇಷನ್ (ಬಿಡಬ್ಲ್ಯೂಎಫ್) ಶ್ರೇಯಾಂಕದಲ್ಲಿ ಇತ್ತೀಚೆಗೆ ನಂ.14ಕ್ಕೇರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's shuttler Jwala Gutta lost her temper after she was asked about her rumoured affair with former Team India skipper Mohammad Azharuddin in the past.
Please Wait while comments are loading...