ಕೆಂಪು ಜರ್ಸಿ ತೊಟ್ಟ ಫುಟ್ಬಾಲ್ ನ ಬಹುಬೇಡಿಕೆಯ ಕೋಚ್

Posted By:
Subscribe to Oneindia Kannada

ಲಂಡನ್, ಮೇ 27: ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ನ ಅತ್ಯಂತ ಜನಪ್ರಿಯ, ಪ್ರತಿಷ್ಠಿತ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ (ಎಂಯು) ಶುಕ್ರವಾರದಂದು ಜೋಸೆಫ್ ಮೌರಿನೋ ಅವರನ್ನು ಮುಂದಿನ ಸೀಸನ್ ಗೆ ಹೊಸ ಮ್ಯಾನೇಜರ್ ಆಗಿ ಆಯ್ಕೆ ಮಾಡಿಕೊಂಡಿದೆ.

2016-17ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬಿಗೆ ಜೋಸ್ ಮೌರಿನೋ ಮ್ಯಾನೇಜರ್ ಆಗಿದ್ದು, ಲೂಯಿಸ್ ವಾನ್ ಗಾಲ್ ಅವರ ಸ್ಥಾನವನ್ನು ತುಂಬಲಿದ್ದಾರೆ. 53 ವರ್ಷ ವಯಸ್ಸಿನ ಮಾರಿನೋ ಅವರು ಮುಂದಿನ 3 ವರ್ಷಗಳ ಅವಧಿಗೆ ಕೋಚ್ ಕಮ್ ಮ್ಯಾನೇಜರ್ ಆಗಿರುತ್ತಾರೆ.

Jose Mourinho appointed as new manager of Manchester United

ಈ ಸುದ್ದಿ ಬಗ್ಗೆ ಮ್ಯಾಂಚೇಸ್ಟರ್ ಯುನೈಟೆಡ್ (@ManUtd) ಟ್ವೀಟ್ ಮಾಡುತ್ತಿದ್ದಂತೆ #WelcomJose ಎಂಬ ಹ್ಯಾಸ್ ಟ್ಯಾಗ್ ನೊಂದಿಗೆ 14,536 ಬಾರಿ ರೀಟ್ವೀಟ್ ಆಗಿದೆ 8,821 ಮಂದಿ ಲೈಕ್ ಒತ್ತಿದ್ದಾರೆ.

ಪೋರ್ಚುಗಲ್ ಅಟಗಾರ, ಕೋಚ್ ಆಗಿ ಜೋಸ್ ಮೌರಿನೋ ಅವರು ಅತ್ಯಂತ ಯಶಸ್ವಿಯಾದವರು.


ಪೋರ್ಚುಗಲ್, ಇಂಗ್ಲೆಂಡ್, ಇಟಲಿ ಹಾಗೂ ಸ್ಪೇನ್ ನಲ್ಲಿ ಲೀಗ್ ಪ್ರಶಸ್ತಿ ಎತ್ತಿದವರು, ಯುಇಎಫ್ ಎ ಚಾಂಪಿಯನ್ಸ್ ಲೀಗ್ ಎರಡು ಬಾರಿ ಗೆದ್ದ ಮಾರಿನೋ ಅವರು ಅನೇಕ ಫುಟ್ಬಾಲರ್ ಗಳಿಗೆ ಸ್ಪೂರ್ತಿ.ಮೌರಿನೋ ಅತಿ ಹೆಚ್ಚು ಸಂಭಾವನೆ ಪಡೆಯುವ ಮ್ಯಾನೇಜರ್ ಕೂಡಾ ಹೌದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
English Premier League (EPL) club Manchester United (MU) today (May 27) announced Jose Mourinho as their new manager for the next football season 2016-17. He replaces Louis van Gaal.
Please Wait while comments are loading...