ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : ಇಸ್ರೇಲ್ ಅಂಪೈರ್ ದುರಂತ ಸಾವು

By Mahesh

ಬೆಂಗಳೂರು, ನ.30: ಅಕಾಲಿಕ ಮರಣಕ್ಕೆ ತುತ್ತಾದ ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ದುರಂತ ಸಾವಿನ ಕಹಿ ಇನ್ನೂ ಮಾಸುವ ಮುನ್ನವೇ ಮತ್ತೊಂದು ಇದೇ ರೀತಿ ದುರಂತದ ಸುದ್ದಿ ಬಂದಿದೆ. ಇಸ್ರೇಲಿನ ಮಾಜಿ ನಾಯಕ ಹಾಲಿ ಅಂಪೈರ್ ಹಿಲೇಲ್ ಆಸ್ಕರ್ ಎಂಬುವರು ಪಂದ್ಯವೊಂದರಲ್ಲಿ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದ್ದಾರೆ.

ಅಂಪೈರ್ ಹಿಲೇಲ್ ಅವರ ಸಾವಿನ ಸುದ್ದಿಯನ್ನು ದೃಢಪಡಿಸಿರುವ ಇಸ್ರೇಲ್ ನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಯೋರ್ ಗುಡ್ಕರ್, ಶನಿವಾರ ರಾಷ್ಟ್ರೀಯ ಕ್ರಿಕೆಟ್ ಲೀಗ್ ನ ಕೊನೆ ಪಂದ್ಯ ನಡೆಯುವ ವೇಳೆ ಈ ದುರಂತ ಸಂಭವಿಸಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹ್ಯೂಸ್ ಅವರ ದುರಂತದ ಬಗ್ಗೆ ಕೇಳಿದ್ದೆವು, ಈಗ ನಮ್ಮ ನಡುವಿನ ಒಬ್ಬರು ಈ ರೀತಿ ದುರಂತ ಸಾವಿಗೆ ಈಡಾಗಿರುವುದು ಕಂಡು ಅಘಾತವಾಗಿದೆ ಎಂದಿದ್ದಾರೆ. [ಹ್ಯೂಸ್ ಸಾವಿಗೆ ಕಂಬಿನಿ ಮಿಡಿದ ಟ್ವೀಟ್ ಲೋಕ]

Hillel Oscar

ಇಸ್ರೇಲ್ ನಲ್ಲಿ ಕ್ರಿಕೆಟ್ ಇನ್ನೂ ಶೈಶವಾವಸ್ಥೆಯಲ್ಲಿದೆ. ಆದರೆ, ಹಿಲೇಲ್ ಅವರು ಅಂಪೈರ್ ಆಗಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದುಕೊಂಡಿದ್ದರು. ಯುರೋಪಿಯನ್ ಚಾಂಪಿಯನ್ ಶಿಪ್ ಗಳಲ್ಲೂ ಕಾರ್ಯನಿರ್ವಹಿಸಿದ್ದರು. ನಮ್ಮ ಇಸ್ರೇಲಿ ತಂಡದ ನಾಯಕರಾಗಿ, ಮಾರ್ಗದರ್ಶಕರಾಗಿ ಕ್ರಿಕೆಟ್ ಬೆಳವಣಿಗೆಗೆ ಶ್ರಮಿಸಿದ್ದರು ಎಂದು ಗುಡ್ಕರ್ ಹೇಳಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಮೈದಾನದಲ್ಲಿ ಚೆಂಡು ಬಡಿದಿದ್ದು, ಅಂಪೈರ್ ಹಿಲೇಲ್ ತಪ್ಪಿಸಿಕೊಳ್ಳಲು ಯತ್ನಿಸಿದ್ದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಹ್ಯೂಸ್ ಸಾವಿನ ಸೂತಕದಲ್ಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಇದೇ ರೀತಿ ಮೈದಾನದಲ್ಲಿ ಮೃತಪಟ್ಟ ಘಟನೆ ಸುದ್ದಿ ನೋವು ತಂದಿದೆ ಎಂದು ಎಎಫ್ ಪಿ ವರದಿ ಮಾಡಿದೆ.

ಈ ಹಿಂದೆ ಇಂಗ್ಲೀಷ್ ಅಂಪೈರ್ ಜೆನ್ ಕಿನ್ಸ್ ಅವರು ಲೀಗ್ ಪಂದ್ಯವೊಂದರಲ್ಲಿ ಅಂಪೈರಿಂಗ್ ಮಾಡುವಾಗ ತಲೆಗೆ ಚೆಂಡಿನಿಂದ ಪೆಟ್ಟು ತಿಂದು ದುರಂತ ಸಾವನ್ನಪ್ಪಿದ್ದರು.[ದುರಂತ ಸಾವನ್ನಪ್ಪಿದ ಕ್ರಿಕೆಟರ್ಸ್ ಪಟ್ಟಿ]

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X