ಸಚಿನ್ ಜೊತೆ ಚಿರಂಜೀವಿ, ನಾಗಾರ್ಜುನ ಸೆಲ್ಫಿ ಯಾಕೆ?

Posted By:
Subscribe to Oneindia Kannada

ತಿರುವನಂತಪುರಂ, ಜೂನ್ 1: ಕ್ರಿಕೆಟ್ ಲೋಕದ ತಾರೆ ಸಚಿನ್ ತೆಂಡೂಲ್ಕರ್ ಜೊತೆ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಗಳಾದ ಚಿರಂಜೀವಿ ಹಾಗೂ ನಾಗಾರ್ಜುನ ಅವರು ಸೆಲ್ಫಿ ಫೋಟೊ ತೆಗೆಸಿಕೊಂಡಿದ್ದಾರೆ. ಇಬ್ಬರು ಸಿನಿಮಾ ಸ್ಟಾರ್ ಗಳು ಸಚಿನ್ ಅವರ ಅಭಿಮಾನಿಗಳೇನೋ ನಿಜ. ಆದರೆ, ಈ ಸೆಲ್ಫಿ ಫೋಟೋ ಇದೆ ಹೊಸ ಡೀಲ್ ಇದೆ.

ಕ್ರಿಕೆಟ್ ಜೊತೆಗೆ ಇತರೆ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಸಚಿನ್ ತೆಂಡೂಲ್ಕರ್ ಅವರು ಫುಟ್ಬಾಲ್ ಲೀಗ್ ತಂಡವೊಂದರ ಮಾಲೀಕತ್ವ ಹೊಂದಿರುವುದು ಕ್ರೀಡಾಭಿಮಾನಿಗಳಿಗೆ ಗೊತ್ತೇ ಇದೆ. [ಕೊಹ್ಲಿ ತಂಡವನ್ನು ಮಣಿಸಿ ಕಪ್ ಗೆದ್ದ ಧೋನಿ ಟೀಂ!]

ISL: Chiranjeevi, Nagarjuna join Sachin Tendulkar as Kerala Blasters co-owners

ಈಗ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನಲ್ಲಿ ಆಡುತ್ತಿರುವ ಸಚಿನ್ ಒಡೆತನದ ಕೇರಳ ಬ್ಲಾಸ್ಟರ್ಸ್ ತಂಡದ ಜೊತೆಗೆ ಚಿರಂಜೀವಿ ಹಾಗೂ ನಾಗಾರ್ಜುನ ಕೈಜೋಡಿಸಿದ್ದಾರೆ. [ಐಪಿಎಲ್ ನಂತರ ಸಚಿನ್ ರಿಂದ 'ಐಎಸ್ಎಲ್' ಕಿಕ್]

ಮೆಗಾಸ್ಟಾರ್ ಚಿರಂಜೀವಿ ಹಾಗೂ ಅಕ್ಕಿನೇನಿ ನಾಗಾರ್ಜುನ ಅವರಲ್ಲದೆ ನಿರ್ಮಾಪಕ ಅಲ್ಲು ಅರವಿಂದ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಅವರು ಸಚಿನ್ ಮಾಲೀಕತ್ವದ ಬ್ಲಾಸ್ಟರ್ಸ್ ಸ್ಫೋರ್ಟ್ಸ್ ಪ್ರೈ ಲಿಮಿಟೆಡ್ ಸಂಸ್ಥೆಯಲ್ಲಿ ಸಹ ಮಾಲೀಕರಾಗಿ ಜೂನ್ 1ರಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಖುಷಿಯಲ್ಲಿ ಎಲ್ಲರೂ ಸೆಲ್ಫಿ ಫೋಟೊ ತೆಗೆದುಕೊಂಡು ಸಂತಸವನ್ನು ಹಂಚಿಕೊಂಡಿದ್ದಾರೆ.


ಕೇರಳದಲ್ಲಿ ಪುಟ್​ಬಾಲ್ ಅಕಾಡೆಮಿ ನಿರ್ಮಾಣಕ್ಕೆ ಸಂಬಂಧಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬುಧವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಅಕಾಡೆಮಿಯ ರೂಪುರೇಷೆ ಸಿದ್ಧವಾಗಿದೆ. ಚಿರಂಜೀವಿ, ನಾಗಾರ್ಜುನರಂಥವರ ಸಹಕಾರ ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡುವಂಥ 100ಕ್ಕೂ ಹೆಚ್ಚು ಫುಟ್​ಬಾಲ್ ಆಟಗಾರರನ್ನು ತಯಾರು ಮಾಡುವುದು ಅಕಾಡೆಮಿ ಪ್ರಮುಖ ಉದ್ದೇಶವಾಗಿದೆ ಎಂದು ಸಚಿನ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricket legend Sachin Tendulkar was today (June 1) joined by some of the biggest names in the Indian film industry, including Chiranjeevi and Nagarjuna, as co-owners of Indian Super League (ISL) football side Kerala Blasters
Please Wait while comments are loading...