ರಿಯೋದಲ್ಲಿ ದುರಂತ, ಸ್ಪರ್ಧೆ ವೇಳೆ ಅಪಘಾತ, ಕ್ರೀಡಾಳು ಸಾವು

Posted By:
Subscribe to Oneindia Kannada

ರಿಯೋ ಡಿ ಜನೈರೋ, ಸೆ. 18: ರಿಯೊದಲ್ಲಿ ನಡೆದಿರುವ ಪ್ಯಾರಾ ಒಲಿಂಪಿಕ್ಸ್‌ 2016ರಲ್ಲಿ ದಾರುಣ ಘಟನೆ ಸಂಭವಿಸಿದೆ. ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಕ್ರೀಡಾಳುವೊಬ್ಬರು ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ಇರಾನ್ ದೇಶದ 48 ವರ್ಷದ ಸರ್ಫರಾಜ್‌ ಬಹ್ಮಾನ್‌ ಗೊಲ್ಬರ್ನಾಜ್‌ ಮೃತಪಟ್ಟ ಕ್ರೀಡಾಪಟುವಾಗಿದ್ದಾರೆ. ಶನಿವಾರ ನಡೆದ ಸಿಎ6 ಸ್ಪರ್ಧೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದನ್ನು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್‌ ಸಮಿತಿ (ಐಪಿಸಿ) ದೃಢಪಡಿಸಿದೆ.

Iranian cyclist dies after accident in Rio 2016 Paralympics

ಸ್ಪರ್ಧೆ ವೇಳೆಯಲ್ಲಿ ಅಪಘಾತವಾದ ಕೂಡಲೇ ಕ್ರೀಡಾಪಟುವಿಗೆ ತಕ್ಷಣವೇ ತುರ್ತುಚಿಕಿತ್ಸೆ ನೀಡಲಾಯಿತು. ನಂತರ ಕ್ರೀಡಾಪಟುಗಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಹೃದಯಾಘಾತದಿಂದ ಆತ ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್‌ ಸಮಿತಿ (ಐಪಿಸಿ) ತಿಳಿಸಿದೆ.

ಸುಮಾರು 56 ವರ್ಷಗಳ ಪ್ಯಾರಾ ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಕ್ರೀಡಾಕೂಟದ ವೇಳೆ ಇದೇ ಮೊದಲ ಬಾರಿಗೆ ಈ ರೀತಿ ಘಟನೆ ಸಂಭವಿಸಿದೆ. ಈ ಬಗ್ಗೆ ತನಿಖೆಗೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An Iranian cyclist died after an accident while competing at the Rio Paralympics, officials said on Saturday (Sep 17).
Please Wait while comments are loading...