ತಬ್ಬಿಕೊಂಡ ಪೊಲ್ಲಾರ್ಡ್ ದಂಪತಿ ಮಧ್ಯೆ ಪಾಂಡ್ಯಗೇನು ಕೆಲಸ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಮೇ 24 : ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಕಿರಾನ್ ಪೊಲ್ಲಾರ್ಡ್ ಅವರು ತಮ್ಮ ಪತ್ನಿ ಜೊತೆ 11 ವರ್ಷದ ಸಾಂಗತ್ಯವನ್ನು ಖುಷಿಯಿಂದ ಆಚರಿಸುವಾಗ ಮಧ್ಯದಲ್ಲಿ ಹಾರ್ದಿಕ್ ಪಾಂಡ್ಯ 'ಕಬಾಬ್ ನಲ್ಲಿ ಮೂಳೆ' ಯಂತೆ ಕಾಣಿಸಿಕೊಂಡಿದ್ದಾರೆ. ಹಾಗಂತ, ಗಂಡ ಹೆಂಡತಿ ಸಂತಸದ ಫೋಟೊದಲ್ಲಿ ನುಸುಳಿದ ಪಾಂಡ್ಯಗೇನೂ ಗೂಸಾ ಬಿದ್ದಿಲ್ಲ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಕಿರಾನ್ ಪೋಲಾರ್ಡ್ ಹಾಗೂ ಪತ್ನಿ ಜೆನ್ನಾ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 11ನೇ ವರ್ಷದ ಸಂಭ್ರಮದಲ್ಲಿ ಒಬ್ಬರಿಗೊಬ್ಬರು ಅಪ್ಪಿಕೊಂಡು ಫೋಟೋವೊಂದಕ್ಕೆ ಫೋಸ್ ನೀಡುತ್ತಿದ್ದರು. ಆದರೆ, ಪಾಂಡ್ಯಾಅವರು ಹಿಂದಿನಿಂದ ಬಂದು ಕಿರಾನ್ ಪೋಲಾರ್ಡ್ ಅವರನ್ನು ಅಪ್ಪಿಕೊಂಡು ಅಚ್ಚರಿ ಮೂಡಿಸಿದ್ದಾರೆ.

Mumbai Indians Instagram Picture Pollard hugs Jenna, Pandya hugs Pollard

ಇದರಿಂದ ತಬ್ಬಿಬ್ಬಾದ ಜೆನ್ನಾ ಪೋಲಾರ್ಡ್ ರನ್ನು ಬಿಗಿದಪ್ಪಿ ಹಿಡಿದಿದ್ದನ್ನು ಕೊಂಚ ಸಡಿಲಿಸಿ ಬೇಕೋ ಬೇಡ ಎನ್ನುವಂತೆ ಫೋಟೋಗೆ ಸಿಂಪಲ್ ಆಗಿ ಸ್ಮೈಲ್ ಕೊಟ್ಟಿದ್ದಾರೆ.

ಮಡದಿಯೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಪಾಂಡ್ಯಾ ಸೇರಿಕೊಂಡಿರುವ ಫೋಟೋವನ್ನು ಇನ್ಸ್ ಟಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪೋಲಾರ್ಡ್ ಫೋಟೋಗಳಲ್ಲಿ ಕಾಣಿಸಿಕೊಳ್ಳುವ ಅವಕಾಶಗಳನ್ನು ಪಾಂಡ್ಯಾ ಯಾವತ್ತು ಮಿಸ್ ಮಾಡಿಕೊಳುವುದಿಲ್ಲವೆಂದು ತಮಾಷೆಯಾಗಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಹಳೆ ಚಿತ್ರ ಈಗ ಮತ್ತೊಮ್ಮೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

He NEVR misses opportunity to be in a pic .. #inlovewithhimself that fellow 😂😂

A photo posted by Kieron Pollard (@pollardkieron) on May 7, 2016 at 5:03pm PDT

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians players Instagram Picture Kieron Pollard hugs his wife Jenna, Pandya hugs Pollard. Pollard gave funnier caption that reads: "He NEVR misses opportunity to be in a pic. #inlovewithhimself that fellow".
Please Wait while comments are loading...