ರಿಯೋನಲ್ಲಿ ಪದಕಗಳಿಸಿದರೆ ಭಾರತ ಕ್ರೀಡಾಳುಗಳಿಗೆ ಸಿಗಲಿದೆ ಭರ್ಜರಿ ಗಿಫ್ಟ್

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೊ ಡಿ ಜನೈರೊ, ಆಗಸ್ಟ್ 16: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಆಟಗಾರರು ಪದಕಗಳಿಸಿದರೆ ಭರ್ಜರಿ ಗಿಫ್ಟ್ ನೀಡಲು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ (IOA) ನಿರ್ದರಿಸಿದೆ. ಕೇವಲ ಪದಕಗಳಿಸಿದ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ಕೋಚ್ ಗಳಿಗೂ ಸಹ ನಗದು ಬಹುಮಾನವನ್ನು ನೀಡಲು IOA ಬೋರ್ಡ್ ತೀರ್ಮಾನಿಸಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಎನ್ ರಾಮಚಂದ್ರನ್, ಕಾರ್ಯದರ್ಶಿ ರಾಜೀವ್ ಮೆಹ್ತಾ, ರಾಕೇಶ್ ಗುಪ್ತಾ, ಆನಂದೇಶ್ವರ್ ಪಾಂಡೆ ಅವರು ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ತಿಳಿಸಿದೆ.

ರಿಯೋ ಒಲಿಂಪಿಕ್ಸ್ ಭಾಗವಹಿಸಿದ ಯಾವುದೇ ಕ್ರೀಡೆಯ ಆಟಗಾರರು ಚಿನ್ನ, ಬೆಳ್ಳಿ, ಕಂಚು ಪದಕಗಳಿಸಿದ ಆಟಗಾರರಿಗೆ ಈ ರೀತಿ ಗಿಫ್ಟ್ ನ್ನು ಇದೇ ಮೊದಲ ಬಾರಿಗೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ನೀಡುತ್ತಿದೆ. ಆದರೆ, ರಿಯೋ ಪ್ರಾರಂಭವಾಗಿ 6 ದಿನವಾದರೂ ಭಾರತದ ಯಾವೊಬ್ಬ ಕ್ರೀಡಾಪಟು ಪದಕಗಳನ್ನು ಗಳಿಸಿಲ್ಲದಿರುವುದು ಬೇಸರ ಸಂಗತಿಯಾಗಿದೆ.

IOA announces awards for Rio Olympics medal winners, coaches

1. ಚಿನ್ನದ ಪದಕ ಗೆದ್ದರೇನು?
ರಿಯೋನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಆಟಗಾರರಿಗೆ 50 ಲಕ್ಷ ರುಗಳನ್ನು ನೀಡಿ ಗೌರವಿಸಲಾಗುತ್ತದೆ.

2. ಬೆಳ್ಳಿ ವಿಜೇತರಿಗೇನು?
ಯಾವುದೇ ಕ್ರೀಡೆಯಲ್ಲಿ ಬೆಳ್ಳಿ ಪದಕ ಪಡೆದ ಆ ಕ್ರೀಡಾಪಟುಗೆ 30 ಲಕ್ಷ ರುಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.

3. ಕಂಚು ಪಡೆದವರಿಗೆ..
ಕ್ರೀಡೆಯಲ್ಲಿ ಮೂರನೇ ಸ್ಥಾನ ಅಂದರೆ ಕಂಚು ಪದಕ ಪ್ರಶಸ್ತಿ ಪಡೆದರೆ ಅಂತಃ ಆಟಗಾರನಿಗೆ 20 ಲಕ್ಷ ರು
ನೀಡಲಾಗುತ್ತದೆ.

4. ಕೋಚ್ ಗಳಿಗೂ ಬಹುಮಾನ.
ರಿಯೋನಲ್ಲಿ ಯಾವುದೇ ಕ್ರೀಡೆಯಲ್ಲಿ ಯಾರೇ ಭಾರತೀಯ ಕ್ರೀಡಾಪಟು ಮೂರು ಪದಕಗಳಲ್ಲಿ ಒಂದು ಪದಕ ಜಯಿಸಿದ
ಆಟಗಾರನಿಗೆ ನೀಡುವ ಬಹುಮಾನದಲ್ಲಿ ಅದರ ಅರ್ಧರಷ್ಟು ಆತನ ಕೋಚ್ ಗೆ ನೀಡಲಾಗುತ್ತದೆ. ಎಂದು ಭಾರತೀಯ
ಒಲಿಂಪಿಕ್ ಬೋರ್ಡ್ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian Olympic Association (IOA) has announced a prize of Rs 50 lakh for every gold medal winner, Rs 30 lakh for silver and Rs 20 lakh for bronze among the Indian participants at the 31st Olympic Games.
Please Wait while comments are loading...