ಕಣ್ಣೀರಿಟ್ಟು ವಿದಾಯ ಹೇಳಿದ ಜಗದೇಕ ಓಟಗಾರ ಬೋಲ್ಟ್

Posted By:
Subscribe to Oneindia Kannada

ಲಂಡನ್, ಆಗಸ್ಟ್ 13: ಜಗದೇಕ ಓಟಗಾರ ವಿಶ್ವ ದಾಖಲೆ ವೀರ ಜಮೈಕಾದ ಉಸೇನ್ ಬೋಲ್ಟ್ ಅವರು ಸೋಲಿನೊಂದಿಗೆ ಕಣ್ಣೀರಿಟ್ಟುಕೊಂಡು ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ ನಲ್ಲಿ ಕಟ್ಟಕಡೆಯ ಇವೆಂಟ್ 4x100 ಮೀಟರ್ಸ್ ರಿಲೇ ಫೈನಲ್‌ ನಲ್ಲಿ ಚಿನ್ನ ಗೆಲ್ಲು ನಿರೀಕ್ಷೆ ಹೊತ್ತು ಓಟ ಆರಂಭಿಸಿದ ಬೋಲ್ಟ್ ಅವರು ಫಿನಿಶಿಂಗ್ ರೇಖೆ ಮುಟ್ಟಲಿಲ್ಲ. ಸ್ನಾಯುಸೆಳೆತಕ್ಕೊಳಗಾಗಿ ಓಟವನ್ನು ಮಧ್ಯದಲ್ಲೇ ಅಂತ್ಯಗೊಳಿಸಿದರು.

Thank You my peeps. Infinite love for my fans 🙌🏽🙌🏽

A post shared by Usain St.Leo Bolt (@usainbolt) on Aug 12, 2017 at 4:28pm PDT

4×100 ಮೀಟರ್ ರಿಲೇಯಲ್ಲಿ ಬ್ರಿಟನ್ ಚಿನ್ನ, ಅಮೆರಿಕ ಬೆಳ್ಳಿ ಮತ್ತು ಜಪಾನ್ ಕಂಚು ಪದಕ ಗೆದ್ದುಕೊಂಡವು. ಕಳೆದ ವಾರ 100 ಮೀಟರ್ ಓಟ ಸ್ಪರ್ಧೆಯಲ್ಲಿ ಬೋಲ್ಟ್ ಕಂಚು ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್‌ಷಿಪ್ ಓಟದಲ್ಲಿ ಕಾಲಿನ ಗಾಯದಿಂದಾಗಿ ಟ್ರ್ಯಾಕ್‌ನಲ್ಲೇ ಉಳಿದ ಬೋಲ್ಟ್‌ ನೋವು, ಕಣ್ಣೀರಿನೊಂದಿಗೆ ವಿದಾಯ ಹೇಳಿದರು.

ಬೋಲ್ಟ್ ಗೆ ನಿರಾಶೆ

ಬೋಲ್ಟ್ ಗೆ ನಿರಾಶೆ

12ನೇ ವಿಶ್ವ ಚಾಂಪಿಯನ್ ಶಿಪ್ ಚಿನ್ನ ಗೆಲ್ಲುವ ಕನಸು ಹೊತ್ತಿದ್ದ ಬೋಲ್ಟ್ ಅವರು ತಮ್ಮ 30 ವರ್ಷಗಳ ವೃತ್ತಿ ಬದುಕನ್ನು ಸೋಲಿನೊಂದಿಗೆ ಅಂತ್ಯಗಾಣಿಸಿದ್ದಾರೆ. ವಿಶ್ವದೆಲ್ಲೆಡೆಯಿಂದ ಬೋಲ್ಟ್ ಅವರ ಅಂತಿಮ ಓಟದ ಬಗ್ಗೆ ಟ್ವೀಟ್ಸ್ ಬಂದಿವೆ.

ಧನ್ಯವಾದ ಅರ್ಪಿಸಿದ ದಿಗ್ಗಜ

ಧನ್ಯವಾದ ಅರ್ಪಿಸಿದ ದಿಗ್ಗಜ

"Thank you my peeps. Infinite love for my fans." ಎಂದು ತನ್ನ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಧನ್ಯವಾದ ಅರ್ಪಿಸಿದ ದಿಗ್ಗಜ ಬೋಲ್ಟ್.

100 ಮೀಟರ್ ನಲ್ಲೂ ನಿರಾಶೆ

100 ಮೀಟರ್ ನಲ್ಲೂ ನಿರಾಶೆ

ಕಳೆದ ವಾರ 100 ಮೀಟರ್ ಓಟ ಸ್ಪರ್ಧೆಯಲ್ಲಿ ಬೋಲ್ಟ್ ಕಂಚು ಪದಕಕ್ಕೆ ತೃಪ್ತಿಪಟ್ಟಿದ್ದರು. ಗ್ಯಾಟ್ಲಿನ್ ಅವರು ಚಿನ್ನ ಗೆದ್ದಿದ್ದರು. 8 ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದಿರುವ ಬೋಲ್ಟ್ ಅವರು ಲಂಡನ್ನಿನಲ್ಲಿ ನಡೆದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್ ನಂತರ ಓಟ ನಿಲ್ಲಿಸುವುದಾಗಿ ಘೋಷಿಸಿದ್ದಾರೆ.

.

ಜಯವರ್ದನೆರಿಂದ ಶುಭಹಾರೈಕೆ

ನಿಮ್ಮ ಸಾಧನೆ ಬಗ್ಗೆ ಎಲ್ಲರೂ ನೆನಪಿನಲ್ಲಿಟ್ಟುಕೊಂಡು ನಿಮ್ಮ ಸ್ಮರಿಸುತ್ತಾರೆ. ಕೊನೆಯ ಓಟ ಮರೆತುಬಿಡಿ- ಎಂದು ಮಾಜಿ ಕ್ರಿಕೆಟರ್ ಮಹೇಲ ಜಯವರ್ದನೆ ಪ್ರತಿಕ್ರಿಯಿಸಿದ್ದಾರೆ.

Jamaican legend Usain Bolt finishes third in last individual race

ಹರ್ಷ ಭೋಗ್ಲೆರಿಂದ ಟ್ವೀಟ್

ಕ್ರಿಕೆಟ್ ಕಾಮೆಂಟೆಟರ್ ಹರ್ಷ ಭೋಗ್ಲೆ ಟ್ವೀಟ್ ಮಾಡಿ, ಕ್ರೀಡೆ ಎಂಬುದು ಹೇಗೆ ಏರಿಳಿತವನ್ನು ತರಬಲ್ಲುದು, ದಿಗ್ಗಜರ ವೃತ್ತಿ ಬದುಕು ಹೇಗೆ ಎಲ್ಲರಿಗೂ ಮಾದರಿಯಾಗಬಹುದು ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jamaican icon Usain Bolt expressed his love for his fans after bowing out of athletics in unfortunate circumstances at the IAAF World Championships.
Please Wait while comments are loading...