ಇಂಡೋನೇಷ್ಯಾ ಓಪನ್ : ಪ್ರಣಯ್ ಹೋರಾಟ ಅಂತ್ಯ

Posted By:
Subscribe to Oneindia Kannada

ಜಕಾರ್ತ, ಜೂನ್ 17: ಈ ಬಾರಿಯ ಇಂಡೋನೇಷ್ಯಾ ಟೂರ್ನಿಯಲ್ಲಿ ವೀರೋಚಿತ ಹೋರಾಟ ಅಂತ್ಯಗೊಂಡಿದೆ. ಶನಿವಾರ ಮಧ್ಯಾಹ್ನ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅವರು ಜಪಾನ್ ನ ಆಟಗಾರ ಕಝುಮಸಾ ಸಕಾಯ್ ವಿರುದ್ಧ 21-17, 26-28, 18-21 ಗೇಮ್ ಗಳ ಅಂತರದಲ್ಲಿ ಸೋಲು ಕಂಡರು.

ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇದೇ ಟೂರ್ನಿಯ ಹಾಲಿ ಚಾಂಪಿಯನ್ ಮಲೇಷ್ಯಾದ ಲೀ ಚಾಂಗ್ ವೆಯ್ ವಿರುದ್ಧ ಜಯ ಸಾಧಿಸಿದ್ದ ಪ್ರಣಯ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್ ವಿರುದ್ಧ ಗೆಲುವು ಪಡೆದಿದ್ದರು.

Indian shuttler HS Pranoy

ಈ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಕಣಕ್ಕಿಳಿದಿದ್ದ ಭಾರತದ ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಅವರು ತಮ್ಮ ಆರಂಭಿಕ ಸುತ್ತುಗಳ ಪಂದ್ಯಗಳಲ್ಲಿ ಸೋತು ನಿರ್ಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಣಯ್ ಮೇಲೆ ಭಾರತದ ನಿರೀಕ್ಷೆ ಹೆಚ್ಚಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian shuttler HS Pranoy who had shocked Olympic silver-medallist Lee Chong Wei and gold-medallist Chen Long in the last two days, got to the match point five times but he could not convert to eventually go down 21-17, 26-28, 18-21 in a 77-minute men's singles match.
Please Wait while comments are loading...