ಇಂಡಿಯನ್ ವೆಲ್ಸ್: ಕ್ವಾರ್ಟರ್ ನಲ್ಲಿ ಮುಗ್ಗರಿಸಿದ ಸಾನಿಯಾ ಜೋಡಿ

Posted By:
Subscribe to Oneindia Kannada

ಇಂಡಿಯನ್ ವೆಲ್ಸ್ (ಕ್ಯಾಲಿಫೊರ್ನಿಯ) ಮಾರ್ಚ್. 15 : ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರೇಕೋವಾ ಜೋಡಿ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ.

ಇಲ್ಲಿನ ಟೆನಿಸ್ ಕೋರ್ಟ್‌ನಲ್ಲಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸಾನಿಯಾ ಮತ್ತು ಸ್ಟ್ರೇಕೋವಾ ಜೋಡಿ 4-6, 4-6ಸೆಟ್ ಗಳಿಂದ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಮತ್ತು ತೈವಾನ್‌ ನ ಯಂಗ್ ಜನ್ ಚನ್ ಜೋಡಿ ಎದುರು ಸೋಲುಂಡಿತು.[ತೆರಿಗೆ ವಂಚನೆ ವಿಚಾರಣೆಗೆ ಹಾಜರಾದ ಸಾನಿಯಾ ಮಿರ್ಜಾ]

Indian Wells: Sania Mirza-Barbara Strycova Lose in Quarters

ಸ್ವಿಸ್ ಮತ್ತು ತೈವಾನ್ ಜೋಡಿ ಪಂದ್ಯದ ಆರಂಭದಿಂದಲೂ ಇಂಡೋ-ಜೆಕ್ ಆಟಗಾರ್ತಿಯರ ಎದುರು ಪ್ರಭಾವಿ ಆಟವಾಡುವ ಮೂಲಕ ಎರಡು ಸೆಟ್‌'ಗಳ ಆಟದಲ್ಲಿ ತಲಾ 2 ಪಾಯಿಂಟ್ಸ್ ಮುನ್ನಡೆ ಪಡೆದು ಪಂದ್ಯ ಜಯಿಸಿತು.

ಇದರೊಂದಿಗೆ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಈ ಮೊದಲು ಪೇಸ್-ಪೋಟ್ರೋ ಜೋಡಿ ಟೂರ್ನಿಯಿಂದ ಹೊರಬಿದ್ದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Sania Mirza and her doubles partner Barbara Strycova lost in the quarter-finals of the Indian Wells tennis tournament on Tuesday.
Please Wait while comments are loading...