ಡೇವಿಸ್ ಕಪ್ ಟೂರ್ನಿಯಲ್ಲಿ ಒಂದಾದ ಪ್ರಣಯ ಪಕ್ಷಿಗಳು!

Written By: Ramesh
Subscribe to Oneindia Kannada

ನವದೆಹಲಿ, ಸೆ.15 : ರಿಯೋ ಒಲಿಂಪಿಕ್ಸ್​ ಗೇಮ್ಸ್ ಒಂದು ವಿಶಿಷ್ಟ ಹಾಗೂ ಪ್ರಥಮ ಬಾರಿಗೆ ಒಂದು ಮದುವೆ ಪ್ರಪೋಸ್, ಕಿಸ್ ಗೆ ಸಾಕ್ಷಿಯಾಗಿತ್ತು. ಅದರಂತೆ ಭಾರತದಲ್ಲಿ ನಡೆಯುತ್ತಿರುವ ಡೇವಿಸ್ ಕಪ್ ಟೂರ್ನಿ ಸಾಕ್ಷಿಯಾಗಿದೆ.

ಭಾರತದ ಯುವ ಟೆನಿಸ್ ಆಟಗಾರ ಸಾಂಕೇತ್ ಮೈನೇನಿ ತಮ್ಮ ಗೆಳತಿ ಶ್ರೀಲಕ್ಷ್ಮೀ ಅನುಮೋಲ್ ಗೆ ಗುಲಾಬಿ ಹೂವು ನೀಡಿ ಮದುವೆ ಪ್ರಸ್ತಾಪವಿಟ್ಟ ಅಪರೂಪದ ಘಟನೆ ಡೇವಿಸ್‍ ಕಪ್ ಔತಣಕೂಟದಲ್ಲಿ ನಡೆದಿದೆ. [ರಗ್ಬಿ ಆಟಗಾರ್ತಿ ಮದ್ವೆಗೆ ಗೆಳತಿಯ ಚುಂಬನ ಮುದ್ರೆ]

Saketh Myneni

ಶುಕ್ರವಾರದ ಮ್ಯಾಚ್ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಡೆವಿಸ್ ಕಪ್‌ ಟೀಂ ಇಂಡಿಯಾ ಸದಸ್ಯರಿಗೆ ಔತಣ ಏರ್ಪಡಿಸಲಾಗಿತ್ತು. ಇದರಲ್ಲಿ ಲಿಯಾಂಡರ್‌ ಪೇಸ್‌ ಮತ್ತಿತರ ಆಟಗಾರರು ಪಾಲ್ಗೊಂಡಿದ್ದರು. [ರಿಯೋ ದಲ್ಲಿ ಮತ್ತೊಂದು ಸಲಿಂಗಿಗಳ ನಿಶ್ಚಿತಾರ್ಥ]

ಅವರೆಲ್ಲರ ಸಮಕ್ಷಮದಲ್ಲಿ ಸಾಕೇತ್ ಮೊಣಕಾಲೂರಿ ಶ್ರೀಲಕ್ಷ್ಮಿಗೆ ಪುಷ್ಪಗುಚ್ಛ ನೀಡಿ ಮದುವೆ ಬಗ್ಗೆ ಪ್ರಪೋಸ್ ಮಾಡಿದ್ದಾರೆ. ಈ ಪ್ರಸ್ತಾಪಕ್ಕೆ ಪ್ರಿಯತಮೆ ಅನುಮೊಲ್ ಒಪ್ಪಿಗೆ ಸೂಚಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಈ ಪ್ರಣಯ ಪಕ್ಷಿಗಳು ಹಸಮಣೆ ಏರಲಿದ್ದಾರೆ. ಇಂತಹ ಅಪರೂಪ ಸನ್ನಿವೇಶಕ್ಕೆ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ಔತಣಕೂಟದಲ್ಲೇ ನಿಶ್ಚಿತಾರ್ಥ ಕೇಕ್ ಕತ್ತರಿಸಿ ನವಜೋಡಿಗೆ ಶುಭಾಶಯ ಕೋರಿದೆ.

ಈ ನಡುವೆ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಸೇರಿದಂತೆ ಅನೇಕ ಆಟಗಾರರು ನವಜೋಡಿಗೆ ಶುಭಾಶಯ ಕೋರಿದ್ದಾರೆ. ಇಂತಹ ಅಪರೂಪದ ಮದುವೆ ಪ್ರಸ್ತಾಪ ಮಾಡಿರುವ ಪ್ರಸಂಗಕ್ಕೆ ಇದೇ ಮೊದಲು ನಾನು ಸಾಕ್ಷಿಯಾಗಿದ್ದೇನೆ ಎಂದು ಖ್ಯಾತ ಟೆನಿಸ್ ಆಟಗಾರ ಪೇಸ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India’s Saketh Myneni proposed to his girlfriend Sri Lakshmi Anumolu during the official Davis Cup dinner on Wednesday,which the UPSC aspirant agreed to with an “okay”.
Please Wait while comments are loading...