ಚೀನಾ ಮಾಸ್ಟರ್ಸ್ ಗ್ರ್ಯಾನ್ ಪ್ರಿ ಗೋಲ್ಡ್‌: ಪ್ರೀ ಕ್ವಾರ್ಟರ್ ನಲ್ಲಿ ಮುಗ್ಗರಿಸಿದ ಕಶ್ಯಪ್

Posted By:
Subscribe to Oneindia Kannada

ಚಾಂಗ್ಜು, (ಚೀನಾ) ಏಪ್ರಿಲ್ 21 : ಕಾಮನ್‌ ವೆಲ್ತ್ ನಲ್ಲಿ ಪ್ರಶಸ್ತಿ ವಿಜೇತ ಭಾರತದ ಪರುಪಳ್ಳಿ ಕಶ್ಯಪ್ ಗುರುವಾರ ಇಲ್ಲಿ ನಡೆದ ಚೀನಾ ಮಾಸ್ಟರ್ಸ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.

150,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತದ ಪುರುಷರ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ ಕಶ್ಯಪ್ ಅವರು ವಿಶ್ವ ಮೂರನೇ ಶ್ರೇಯಾಂಕದ ಚೀನಾದ ಕಿಯಾವೊ ಬಿನ್ ವಿರುದ್ಧದ ಮೂರು ಸೆಟ್ ಗಳಲ್ಲಿ 10-21, 22-20, 13-21ರಿಂದ ಸೋಲೊಪ್ಪಿಕೊಂಡರು.

Indian shuttler Parupalli Kashyap crashes out in prequarters of China Masters

ಸುಮಾರು 1 ಗಂಟೆ 16 ನಿಮಿಷ ನಡೆದ ಪಂದ್ಯದಲ್ಲಿ ಕಶ್ಯಪ್ ಪ್ರಬಲ ಪೈಪೋಟಿ ನೀಡಿ ಒಂದು ಸೆಟ್ ನಲ್ಲಿ ಜಯ ಸಾಧಿಸಿದರಾದರೂ ಎರಡು ಗೇಮ್ ನಲ್ಲಿ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ.

ಜನವರಿಯಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಕಶ್ಯಪ್, ಅದಾದ ಬಳಿಕ ಇದೇ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shuttler Parupalli Kashyap bowed out of the $150,000 China Masters Grand Prix Gold, losing to third seed Qiao Bin of China in the pre-quarterfinals on Thursday.
Please Wait while comments are loading...