ಇಂಡೋನೇಷ್ಯಾ ಬ್ಯಾಡ್ಮಿಂಟನ್: ಸೆಮಿಫೈನಲ್ ಗೆ ಕಾಲಿಟ್ಟ ಪ್ರಣಯ್

Posted By:
Subscribe to Oneindia Kannada

ಜಕಾರ್ತ, ಜೂನ್ 16: ಭಾರತದ ಆಟಗಾರ ಎಚ್ ಎಸ್ ಪ್ರಣಯ್ ಅವರು, ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಗೆ ಕಾಲಿಟ್ಟಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಹಾಲಿ ಒಲಿಂಪಿಕ್ಸ್ ಚಾಂಪಿಯನ್, ಚೀನಾದ ಚೆನ್ ಲಾಂಗ್ ವಿರುದ್ಧ 21-18, 16-21, 21-19 ಗೇಮ್ ಗಳ ಅಂತರದಲ್ಲಿ ಜಯ ಗಳಿಸಿ, ಉಪಾಂತ್ಯಕ್ಕೆ ಲಗ್ಗೆಯಿಟ್ಟರು.

ಗುರುವಾರ ನಡೆದಿದ್ದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಲೀ ಅವರನ್ನು 21-10, 21-18 ನೇರ ಗೇಮ್ ಗಳ ಅಂತರದಲ್ಲಿ ಮಣಿಸಿ ಗೆಲುವು ಪಡೆದಿದ್ದರು.

Pranoy happy for beating Lee chong wei in Indonesia Open Pre-Quarters

ಪ್ರಣಯ್ ಅವರ ಈ ಆಟದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

ಈ ಟೂರ್ನಿಯಲ್ಲಿ, ಪಾಲ್ಗೊಂಡಿದ್ದ ಭಾರತದ ಮಹಿಳಾ ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಅವರು, ಮಹಿಳೆಯ ಸಿಂಗಲ್ಸ್ ವಿಭಾಗದ ತಮ್ಮ ಆರಂಭಿಕ ಪಂದ್ಯಗಳಿಂದಲೇ ಸೋತು ನಿರ್ಗಮಿಸಿದ್ದಾರೆ. ಹಾಗಾಗಿ, ಈಗ ಎಲ್ಲಾ ಭಾರತೀಯ ಬ್ಯಾಡ್ಮಿಂಟನ್ ಅಭಿಮಾನಿಗಳ ಗಮನ ಪ್ರಣಯ್ ಮೇಲೆ ನೆಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian shuttler H.S.Pranoy express happiness for beating Malaysia's player and defending champion Lee Chong Wie in Pre-quarter final match of Indonesia Open 2017.
Please Wait while comments are loading...