ಡಿಸ್ಕಸ್ ಥ್ರೋ ಪಟು ಸೀಮಾ ಒಲಿಂಪಿಕ್ಸ್ ಗೆ ಆಯ್ಕೆ

Posted By:
Subscribe to Oneindia Kannada

ಕ್ಯಾಲಿಫೋರ್ನಿಯಾ, ಮೇ 29: ಭಾರತದ ಡಿಸ್ಕಸ್ ಥ್ರೋ ಪಟು,ಹರ್ಯಾಣ ಮೂಲದ ಸೀಮಾ ಪುನಿಯಾ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾದ ಸ್ಯಾನಿನಾಸ್​ನಲ್ಲಿ ನಡೆದ ಪ್ಯಾಟ್ ಯಂಗ್ ಥ್ರೋವರ್ ಕ್ಲಾಸಿಕ್ ಸ್ಪರ್ಧೆಯಲ್ಲಿ 62.62 ಮೀಟರ್ ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಈ ಮೂಲಕ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಬೇಕಾದ ಅರ್ಹತೆ, ಅವಕಾಶ ಗಳಿಸಿದ್ದಾರೆ. ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುವ 61.00 ಮೀಟರ್ ಮಾನದಂಡ ನಿಗದಿ ಪಡಿಸಲಾಗಿತ್ತು. ಈ ದೂರವನ್ನು ಎಸೆಯುವಲ್ಲಿ ಯಶಸ್ವಿಯಾದರು.

Seema Punia

2008ರ ಒಲಿಂಪಿಕ್ ಪದಕ ವಿಜೇತೆ ಸ್ಟೇಫಿನ್ ಬ್ರೌನ್ ಟ್ರಾಫ್ಟಾನ್​ಗಿಂತ ಮುಂದಕ್ಕೆ ಎಸೆದು ಈ ಸ್ಪರ್ಧೆಯಲ್ಲಿ ಚಿನ್ನ ಪಡೆದರು.

ಸೀಮಾ ಪುನಿಯಾ ಅವರು 2006ರ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಬೆಳ್ಳಿ, 2010ರ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಕಂಚು, ಗ್ಲಾಸ್​ಗೋ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಅಲ್ಲದೆ ಚೀನಾದ ಇಂಚಿಯಾನ್ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.

ಆದರೆ, 2004 ಹಾಗೂ 2012 ರಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದ ಸೀಮಾ ಅವರು ಉತ್ತಮ ಸಾಧನೆ ತೋರಿಸುವುದರಲ್ಲಿ ವಿಫಲರಾಗಿದ್ದರು. ಟ್ರ್ಯಾಕ್ ಹಾಗೂ ಫೀಲ್ಡ್ ಸ್ಪರ್ಧೆಗಳಿಗೆ ಆಯ್ಕೆಯಾದ ಭಾರತೀಯ ಅಥ್ಲೀಟ್ ಗಳ ಪೈಕಿ ಸೀಮಾ 19ನೇ ಕ್ರೀಡಾಪಟುವಾಗಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Asian Games discus throw gold medal winner Seema Punia today qualified for the Rio Olympics with a 62.62m effort at the Pat Young's Throwers Classic 2016 at Salinas (California) in the United States.
Please Wait while comments are loading...