ಏಷ್ಯಾ ಕಪ್ ಗೆದ್ದ ಭಾರತೀಯ ವನಿತೆಯರ ಬಾಸ್ಕೆಟ್ ಬಾಲ್ ತಂಡ

Posted By:
Subscribe to Oneindia Kannada

ಬೆಂಗಳೂರು, ಜುಲೈ 30: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಮುಕ್ತಾಯಗೊಂಡ ಫಿಬಾ ಮಹಿಳೆಯರ ಏಷ್ಯಾ ಕಪ್ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಶನಿವಾರ ರಾತ್ರಿ ನಡೆದ ಪಂದ್ಯಾವಳಿಯ 'ಬಿ' ಡಿವಿಜನ್ ಫೈನಲ್ ಪಂದ್ಯದಲ್ಲಿ ಭಾರತ, ಕಜಕಿಸ್ತಾನ ಪಡೆಯನ್ನು 75-73 ಅಂಕಗಳ ಅಂತರದಲ್ಲಿ ಸೋಲಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡಿದ ಜೀನಾ ಸ್ಕಾರಿಯಾ (20 ಅಂಕ), ಶಿರೀನ್ ಲಿಮಯೆ (17 ಅಂಕ), ಗ್ರೀಮಾ ಮರ್ಲಿನ್ ವರ್ಗೀಸ್ (14 ಅಂಕ), ತಮ್ಮ ತಂಡಕ್ಕೆ ಗೆಲುವು ತರುವಲ್ಲಿ ಸಫಲರಾದರು.

India Wins FIBA Women’s Basket Ball Asia Cup 2017 title

ಜಪಾನ್ ಗೆ ಹ್ಯಾಟ್ರಿಕ್ ಪ್ರಶಸ್ತಿ: ಇದೇ ಪಂದ್ಯಾವಳಿಯ ಎ ಡಿವಿಷನ್ ಫೈನಲ್ ಪಂದ್ಯದಲ್ಲಿ ಜಪಾನ್ ತಂಡ, ಆಸ್ಟ್ರೇಲಿಯಾ ವಿರುದ್ಧ ಕೇವಲ ಒಂದು ಅಂಕದ ಅಂತರದಲ್ಲಿ (74-73) ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Who Will Win If ώάŕ Starts Between India And China | Oneindia Kannada

(ಚಿತ್ರ ಕೃಪೆ: ಎಐಆರ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's Basket ball women's team wins Asian Basket Ball Championship 'B' division Cup. In the finals, India beat Kazakhstan by 75-73 points to lift the cup.
Please Wait while comments are loading...