ಇರಾನ್ ತಂಡವನ್ನು ಸದೆಬಡಿದ ಭಾರತ ಕಬಡ್ಡಿ ಚಾಂಪಿಯನ್

Posted By:
Subscribe to Oneindia Kannada

ಅಹ್ಮದಾಬಾದ್, ಅಕ್ಟೋಬರ್ 22 : ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ಹ್ಯಾಟ್ರಿಕ್ ಸಾಧಿಸಿದೆ. ಬಲಿಷ್ಠ ತಂಡವಾದ ಇರಾನ್ ಅನ್ನು ಸದೆಬಡಿದು ಕಬಡ್ಡಿ ವಿಶ್ವಕಪ್ಪನ್ನು ಮೂರನೇ ಬಾರಿ ಭಾರತ ಎತ್ತಿಹಿಡಿದಿದೆ.

ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿರುವ ಭಾರತ, ಮಧ್ಯದಲ್ಲಿ ಹಿನ್ನಡೆ ಕಂಡರೂ ಅದ್ಭುತವಾಗಿ ಚೇತರಿಸಿಕೊಂಡು 38-29 ಅಂಕಗಳಿಂದ ಇರಾನ್ ತಂಡದ ವಿರುದ್ಧ ಜಯಭೇರಿ ಬಾರಿಸಿದೆ.

ಭಾರತಕ್ಕೆ 12 ಅಂಕಗಳನ್ನು ಗಳಿಸಿಕೊಟ್ಟು ಅಜಯ್ ಠಾಕೂರ್ ಅವರು ಈ ಫೈನಲ್ ಪಂದ್ಯದ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ. ಮಧ್ಯಾಂತರದಲ್ಲಿ ಇರಾನ್ 18-13 ಅಂಕಗಳ ಅಂತರದಿಂದ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿತ್ತು.

India win Kabaddi World Cup 2016 defeating Iran

ಆದರೆ, ಅಷ್ಟೇ ಅದ್ಭುತವಾಗಿ ಮಧ್ಯಾಂತರದ ನಂತರ ಆಡಿದ ಅಜಯ್ ಠಾಕೂರ್ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದರಲ್ಲದೆ, ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

"ಕಬಡ್ಡಿಯಲ್ಲಿ ಭಾರತ ಯಾವತ್ತಿದ್ದರೂ ನಂಬರ್ 1. ಈ ಗೆಲುವು ನನಗೆ ವೈಯಕ್ತಿಕವಾದಿ ಭಾರೀ ಸಂತಸ ತಂದುಕೊಟ್ಟಿದೆ" ಎಂದು ಅಜಯ್ ಠಾಕೂರ್ ವಿಶ್ವಕಪ್ ಎತ್ತಿಹಿಡಿದ ನಂತರ ಅನಿಸಿಕೆಗಳನ್ನು ಹಂಚಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India tonight (October 22) triumphed in the 2016 Kabaddi World Cup for a 3rd straight time as they staged a remarkable fightback to overcome a tough Iran 38-29 in the title clash, maintaining their dominance in the sport.
Please Wait while comments are loading...