ಶ್ರೀಕಾಂತ್ ಸೋಲಿಸಿ ಸಿಂಗಪುರ ಓಪನ್ ಗೆದ್ದ ಪ್ರಣೀತ್

Posted By:
Subscribe to Oneindia Kannada

ಸಿಂಗಪುರ,ಏಪ್ರಿಲ್ 16: ಸಿಂಗಪುರ ಓಪನ್ ಸೂಪರ್ ಸೀರೀಸ್ ಸಿಂಗಲ್ಸ್ ಫೈನಲ್ ನಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಹಾಗೂ ಸಾಯಿ ಪ್ರಣೀತ್ ಉತ್ತಮ ಆಟ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಭಾನುವಾರದಂದು(ಏಪ್ರಿಲ್ 16) ನಡೆದ ಅಂತಿಮ ಹಣಾಹಣಿಯಲ್ಲಿ ಬಿ ಸಾಯಿ ಪ್ರಣೀತ್ ಅವರು ಶ್ರೀಕಾಂತ್ ರನ್ನು ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಇದು ಬಿ ಸಾಯಿ ಪ್ರಣೀತ್ ಅವರ ಚೊಚ್ಚಲ ಸೂಪರ್ ಸೀರಿಸ್ ಪ್ರಶಸ್ತಿ ಕೂಡಾ ಹೌದು, 24 ವರ್ಷ ವಯಸ್ಸಿನ ಹೈದರಾಬಾದ್ ಮೂಲದ ಸಾಯಿ ಪ್ರಣೀತ್ ಚೊಚ್ಚಲ ಟೂರ್ನಿಯಲ್ಲೇ ಪ್ರಶಸ್ತಿ ಬಾಚಿಕೊಂಡಿದ್ದಾರೆ.

India's Sai Praneeth wins Singapore Open badminton title

ಸಾಯಿ ಪ್ರಣೀತ್ ಅವರು ವಿಶ್ವ ಬಾಡ್ಮಿಂಟನ್ ಶ್ರೇಯಾಂಕ ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದ್ದರೆ, ಕಿಡಾಂಬಿ ಶ್ರೀಕಾಂತ್ ಅವರು 29ನೇ ಸ್ಥಾನದಲ್ಲಿದ್ದಾರೆ.

ಪ್ರಣೀತ್ ಅವರು, ದಕ್ಷಿಣ ಕೊರಿಯಾದ ಲೀ ಡಾಂಗ್ ಕಿಯೊನ್ ವಿರುದ್ಧ 21-6, 21-8 ಗೇಮ್ ಗಳ ಅಂತರದಲ್ಲಿ ಗೆಲುವು ಪಡೆದು ಫೈನಲ್ ಗೆ ಕಾಲಿಟ್ಟರು.

ಕಿಡಾಂಬಿ ಅವರು ಸೆಮಿಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಆ್ಯಂತೋನಿ ಸಿನಿಸುಕ ಗಿಂಟಿಂಗ್ ವಿರುದ್ಧ 21-13, 21-14 ಗೇಮ್ ಗಳ ಅಂತರದಲ್ಲಿ ಜಯ ಸಾಧಿಸಿದ್ದರು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's B Sai Praneeth defeated compatriot Kidambi Srikanth 17-21, 21-17, 21-12 in a hard-fought men's singles final to clinch the Singapore Open Super Series badminton title here today (April 16).
Please Wait while comments are loading...