WWE ರಿಂಗ್ ಗೆ ಜಿಗಿಯಲು ಒಲಿಂಪಿಯನ್ ಸುಶೀಲ್ ಸಿದ್ಧ?

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 16: ಒಲಿಂಪಿಕ್ಸ್ ಪದಕ ವಿಜೇತ ಭಾರತದ ಹೆಮ್ಮೆಯ ಕುಸ್ತಿಪಟು ಸುಶೀಲ್ ಕುಮಾರ್ ಅವರು ಅಮೆರಿಕದ ಮನರಂಜನಾ ಕುಸ್ತಿ ರಿಂಗ್ ಗೆ ಜಿಗಿಯಲು ಸಿದ್ಧರಾಗುತ್ತಿದ್ದಾರೆ. ವರ್ಲ್ಡ್ ರೆಸ್ಲಿಂಗ್ ಎಂಟರ್​ಟೈನ್​ವೆುಂಟ್​ (ಡಬ್ಲ್ಯುಡಬ್ಲ್ಯುಇ) ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಭಾರತ ಮೂಲದ ದಿ ಗ್ರೇಟ್ ಖಲಿ ನಂತರ ಡಬ್ಲ್ಯುಡಬ್ಲ್ಯುಇಗೆ ಎಂಟ್ರಿ ಕೋಡಲು 33 ವರ್ಷದ ಸುಶೀಲ್ ಕುಮಾರ್ ಸಜ್ಜಾಗಿರುವ ಸುದ್ದಿ ಬಂದಿದೆ. ವೃತ್ತಿಪರ ರೆಸ್ಲಿಂಗ್ ಅಖಾಡಕ್ಕೆ ಇಳಿದರೂ, ಪ್ರಮುಖ ಕುಸ್ತಿ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಸದಾ ಸಿದ್ಧ ಎಂದು ಸುಶೀಲ್ ಹೇಳಿದ್ದಾರೆ. ಡಬ್ಲ್ಯುಡಬ್ಲ್ಯುಇ ಅಧಿಕಾರಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ನಾನು ಎಲ್ಲಾ ರೀತಿಯ ಸಾಧ್ಯತೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

India's Olympic medallist Sushil Kumar to join WWE?

ರಿಯೋ ಒಲಿಂಪಿಕ್ಸ್ ಗೆ ಸುಶೀಲ್ ಕುಮಾರ್ ಆಯ್ಕೆಯಾಗಿರಲಿಲ್ಲ. ಭಾರತೀಯ ರೆಸ್ಲಿಂಗ್ ಒಕ್ಕೂಟದಿಂದ ನಿರ್ಲಕ್ಷ್ಯಕ್ಕೊಳಗಾದ ಸುಶೀಲ್ ಅವರು ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಈಗ ಡಬ್ಲ್ಯುಡಬ್ಲ್ಯುಇ ಟ್ಯಾಲೆಂಟ್ ಡೆವಲಪ್ ಮೆಂಟ್ ಮುಖ್ಯಸ್ಥ ಕೆನ್ಯೊನ್ ಸಿಮನ್ ಅವರರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ದಿಲೀಪ್ ಸಿಂಗ್ ರಾಣಾ ಅಲಿಯಾಸ್ ದಿ ಗ್ರೇಟ್ ಖಲಿ ಅವರು 2006ರಲ್ಲಿ ಡಬ್ಲ್ಯುಡಬ್ಲ್ಯುಇ ಸೇರಿದ ಭಾರತ ಮೂಲದ ರೆಸ್ಲರ್ ಎನಿಸಿದ್ದಾರೆ. 2014ರಲ್ಲಿ ನಿವೃತ್ತಿ ಘೋಷಿಸಿದರು. ಈಗ ಲವ್ ಪ್ರೀತ್ ಸಂಘಾ, ಸಂತೇದರ್ ವೇದ್ ಪಾಲ್ ರಂಥ ರೆಸ್ಲರ್ ಗಳು ಇದ್ದರೂ ಅಷ್ಟು ಜನಪ್ರಿಯತೆ ಗಳಿಸಿಲ್ಲ.

ಒಲಿಂಪಿಯನ್ ಗಳು ರೆಸ್ಲಿಂಗ್ ಅಖಾಡಕ್ಕೆ ಇಳಿಯುವುದು ಕೂಡಾ ಹೊಸ ವಿಷಯವಲ್ಲ ಈ ಹಿಂದೆ ಅಮೆರಿಕದ ಒಲಿಂಪಿಕ್ಸ್ ಪದಕ ವಿಜೇತ ಕರ್ಟ್ ಆಂಗಲ್, ಮಾರ್ಕ್ ಹೆನ್ರಿ ಅವರು ಡಬ್ಲ್ಯುಡಬ್ಲ್ಯುಇಯಲ್ಲಿ ಒಳ್ಳೆ ಹೆಸರು ಮಾಡಿದರು. ಸುಶೀಲ್ ಅವರು 2017ರಲ್ಲಿ ಕಣಕ್ಕಿಳಿಯಲಿದ್ದು, ತಮ್ಮ ಮೊದಲ ಪಂದ್ಯದಲ್ಲಿ ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಜಾನ್ ಸಿನಾ ಮತ್ತು ರೋಮನ್ ರೈನ್ಸ್​ರನ್ನು ಎದುರಿಸುವ ಸಾಧ್ಯತೆ ಇದೆ.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
WWE has a nag to sign the Olympic representatives under their wings to spread their brand more to the mainstream audience. They are continuing with it now in India as reports surfaced that talks are going on with Indian Olympic medallist, Sushil Kumar.
Please Wait while comments are loading...