ಪಿವಿ ಸಿಂಧು, ಬಾಡ್ಮಿಂಟನ್ ತಾರೆಯ ಬಗ್ಗೆ ತಿಳಿದುಕೊಳ್ಳಿ

Posted By:
Subscribe to Oneindia Kannada

ಲಂಡನ್ 2012 ಒಲಿಂಪಿಕ್ಸ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದು ಬಾಡ್ಮಿಂಟನ್ ತಾರೆ ಎನಿಸಿಕೊಂಡಿದ್ದನ್ನು ಕಂಡಿದ್ದ 17ರ ಹರೆಯ ಯುವತಿ ಸಿಂಧುಗೆ ತಾನು ಕೂಡಾ ಭಾರತಕ್ಕಾಗಿ ಪದಕ ಗೆಲ್ಲಬೇಕು ಎಂಬ ಆಸೆ ಸಹಜವಾಗಿ ಹುಟ್ಟಿಕೊಂಡಿತ್ತು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಸೈನಾ ತರಬೇತಿ ಪಡೆದ ಪುಲ್ಲೆಲ್ಲಾ ಅಕಾಡೆಮಿಯಲ್ಲೇ ಸಿಂಧು ಕೂಡಾ ತರಬೇತಿ ಪಡೆದು ಈಗ ಭಾರತದ ತಾರೆಯಾಗಿ ರಿಯೋ ಒಲಿಂಪಿಕ್ಸ್ ನಲ್ಲಿ ಮಿಂಚುತ್ತಿದ್ದಾರೆ. ಪುಸರ್ಲಾ ವೆಂಕಟ ಸಿಂಧು ಪರಿಚಯಾತ್ಮಕ ಲೇಖನ ಇಲ್ಲಿದೆ. [ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸಾಕ್ಷಿ ತನಕ]

ಸೈನಾ ಕಂಚಿನ ಪದಕ ಗೆದ್ದಾಗ ವಿಶ್ವದ ನಂ. 25ನೇ ಸ್ಥಾನದಲ್ಲಿದ್ದ ಸಿಂಧು ಈಗ 10ನೇ ಸ್ಥಾನಕ್ಕೆ ಬಂದಿದ್ದಾರೆ. ವಿಶ್ವದ ನಂ.2 ಆಟಗಾರ್ತಿ ವಾಂಗ್ ಯಿಹಾನ್ ರನ್ನು ಸೋಲಿಸಿದ್ದಾರೆ. [ಮಲೇಷಿಯಾ ಮಾಸ್ಟರ್ಸ್ ಚಿನ್ನದ ಪದಕ ಗೆದ್ದ ಸಿಂಧು]

ರಿಯೋ ಒಲಿಂಪಿಕ್ಸ್ ನ ಸೆಮಿಫೈನಲ್ ನಲ್ಲಿ ವಿಶ್ವದ ನಂ.6ನೇ ಆಟಗಾರ್ತಿ ಜಪಾನ್ ನ ನೊಜೊಮಿ ಒಕುಹರಾ ಸೋಲಿಸಿ ಫೈನಲ್ ಗೇರಿದ್ದಾರೆ. ವಿಶ್ವದ ನಂ. 1 ಆಟಗಾರ್ತಿ ಸ್ಪೇನಿನ ಕ್ಯಾರಲಿನ್ ಮರೀನ್ ವಿರುದ್ಧ ಆಗಸ್ಟ್ 19ರಂದು ಸೆಣಸಲಿದ್ದಾರೆ.[ಸಿಂಧು ಸಾಧನೆ ಹಿಂದಿನ ಪ್ರೇರಕ ಶಕ್ತಿ ಆಕೆ ತಂದೆ ರಮಣ]

2013ರಲ್ಲಿ ಬಾಡ್ಮಿಂಟನ್ ಅಂಗಳಕ್ಕೆ ಕಾಲಿಟ್ಟ ಸಿಂಧು ಅವರು ಮಲೇಶಿಯಾದಲ್ಲಿ ಮೊದಲ ಗ್ರ್ಯಾನ್ ಪೀ ಗೆದ್ದರು. ನಂತರ ಮಕಾವ್ ಓಪನ್ ನಲ್ಲಿ ಹ್ಯಾಟ್ರಿಕ್ ಸಾಧಿಸಿ, ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿಗೆ ಭಾಜನರಾದರು.

ಪೋಷಕರೇ ಪ್ರೇರಕ ಶಕ್ತಿ

ಪೋಷಕರೇ ಪ್ರೇರಕ ಶಕ್ತಿ

ಮಾಜಿ ವಾಲಿಬಾಲ್ ಆಟಗಾರ, ಅರ್ಜುನ ಪ್ರಶಸ್ತಿ ವಿಜೇತ ಪಿ ರಮಣ ಅವರು ಮಗಳ ಆಸೆಯನ್ನು ಹೆಮ್ಮೆರವಾಗಿ ಬೆಳೆಯಲು ಸಹಕರಿಸಿದ್ದಾರೆ. ಬಾಡ್ಮಿಂಟನ್ ಆಟಗಾರ, ಕೋಚ್ ಪುಲ್ಲೆಲ್ಲಾ ಗೋಪಿಚಂದ್ ಅವರ ಪ್ರಭಾವದಿಂದ ಸಿಂಧು ವಾಲಿಬಾಲ್ ಬದಲು ಬಾಡ್ಮಿಂಟನ್ ರಾಕೆಟ್ ಹಿಡಿದಾಗ ಇನ್ನೂ 8 ವರ್ಷ ವಯಸ್ಸು. ರಮಣ ಅವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ಓದಿ

ಸಿಂಧು ಸಾಧನೆಯ ಹಾದಿಯ ಹಿನ್ನೋಟ

ಸಿಂಧು ಸಾಧನೆಯ ಹಾದಿಯ ಹಿನ್ನೋಟ

* ಸಿಂಧು ಅವರು 2 ಬಾರಿ ಮಲೇಷಿಯಾ ಮಾಸ್ಟರ್ಸ್ ಗ್ರಾನ್ ಪ್ರೀ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ 2013, 2015ರಲ್ಲಿ ಚಿನ್ನವನ್ನು ಕೊರಳಿಗೇರಿಸಿಕೊಂಡಿದ್ದರು.
* 2011ರಲ್ಲಿ ಇಂಡೋನೇಷಿಯನ್ ಇಂಟರ್ ನ್ಯಾಷನಲ್
* ಮಕಾವ್ ಓಪನ್ ಗ್ರಾನ್ ಪ್ರೀನಲ್ಲಿ (2013, 2014 ಹಾಗೂ 2015) ಚಿನ್ನ ಗೆಲ್ಲುವ ಮೂಲಕ ಹ್ಯಾಟ್ರಿಕ್ ದಾಖಲಿಸಿದ್ದಾರೆ.
* ಒಟ್ಟಾರೆ ಸಿಂಧು ಅವರು 6 ಗ್ರ್ಯಾನ್ ಪ್ರೀ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಪ್ರಶಸ್ತಿ, ಪುರಸ್ಕಾರ

ಪ್ರಶಸ್ತಿ, ಪುರಸ್ಕಾರ

* ಅತ್ಯಂತ ಕಿರಿಯ ವಯಸ್ಸಿನಲ್ಲೇ ಪದ್ಮಶ್ರೀ ಪ್ರಶಸ್ತಿ ಪಡೆದ ಕ್ರೀಡಾಪಟು.
* 2014ರಲ್ಲಿ ಎನ್ ಡಿಟಿವಿ ಇಂಡಿಯನ್ ಆಫ್ ದಿ ಇಯರ್
* 2014ರಲ್ಲಿ ಫಿಕ್ಕಿ ವರ್ಷದ ಕ್ರೀಡಾಪಟು ಪ್ರಶಸ್ತಿ.
* ಒಲಿಂಪಿಕ್ಸ್ ಸಾಧನೆ ಪರಿಗಣಿಸಿ ಹೈದರಾಬಾದಿನ ಜಿಲ್ಲಾ ಬಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ್ ಬಿಎಂಡಬ್ಲ್ಯೂ ಕಾರು ಗಿಫ್ಟ್ ನೀಡಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ವಿ ಚಾಮುಂಡೇಶ್ವರನಾಥ್ ಘೋಷಿಸಿದ್ದಾರೆ.

ವೈಯಕ್ತಿಕ ವಿವರ

ವೈಯಕ್ತಿಕ ವಿವರ

* 5 ಜುಲೈ 1995ರಲ್ಲಿ ಹೈದರಾಬಾದಿನಲ್ಲಿ ಪುಸರ್ಲಾ ವೆಂಕಟ ಸಿಂಧು ಜನನ
* 5 ಅಡಿ 9 ಇಂಚು ಎತ್ತರ, ಬಲಗೈ ಆಟಗಾರ್ತಿ
* ತೆಲುಗು, ಹಿಂದಿ, ಇಂಗ್ಲೀಷ್ ಬಲ್ಲರು.
* 13 ವರ್ಷಗಳ ಕಾಲ ವೃತ್ತಿ ಜೀವನ ಕಂಡಿದ್ದಾರೆ.
* ಮೊದಲ ಕೋಚ್: ಮೆಹಬೂಬ್ ಅಲಿ
* ಒಲಿಂಪಿಕ್ಸ್ ಕೋಚ್ : ಪುಲ್ಲೆಲ್ಲಾ ಗೋಪಿಚಂದ್
* ಶ್ರೇಯಾಂಕ : ವಿಶ್ವದ ನಂ.10

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Who is PV Sindhu: It was a historic moment for India on Thursday (August 18) when PV Sindhu entered the final of women's singles badminton event at Rio Olympics 2016.
Please Wait while comments are loading...