ವಿಶ್ವದಾಖಲೆ ಬರೆದ ಭಾರತೀಯ ಮಹಿಳಾ ಕ್ರಿಕೆಟರ್ಸ್!

Posted By:
Subscribe to Oneindia Kannada

ನವದೆಹಲಿ, ಮೇ 15: ಭಾರತದ ದೀಪ್ತಿ ಶರ್ಮ ಹಾಗೂ ಪೂನಂ ರಾವತ್ ಅವರು ಐರ್ಲೆಂಡ್ ವಿರುದ್ಧ ಮೊದಲ ವಿಕೆಟ್ಟಿಗೆ 300ಪ್ಲಸ್ ರನ್ ಜೊತೆಯಾಟ ಸಾಧಿಸಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ದೀಪ್ತಿ ಶರ್ಮ ಅವರು ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿ 188ರನ್ ಚೆಚ್ಚಿ ದಾಖಲೆ ಪುಸ್ತಕ ಸೇರಿದರು.

ದೀಪ್ತಿ ಹಾಗೂ ಪೂನಂ ಅವರ ಶತಕಗಳ ನೆರವಿನಿಂದ ಐರ್ಲೆಂಡ್ ವಿರುದ್ಧದ ಸರಣಿಯ ಏಕದಿನ ಪಂದ್ಯದಲ್ಲಿ ಭಾರತ 3 ವಿಕೆಟ್‌ಗಳ ನಷ್ಟಕ್ಕೆ 358 ರನ್ ಗಳಿಸಿತು. ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ರನ್ ಗಳಿಕೆ, ಹಾಗೂ 300 ಪ್ಲಸ್ ಜೊತೆಯಾಟ ದಾಖಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಸೋಮವಾರ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದಕೆ ಆರಂಭಿಕ ಆಟಗಾರ್ತಿಯರಾದ ದೀಪ್ತಿ ಅಜೇಯ 188 ರನ್ ಹಾಗೂ ಪೂನಂ ರಾವುತ್ 109 ರನ್ ಗಳಿಸಿದ್ದಾರೆ. ಈ ಜೋಡಿ ಮೊದಲ ವಿಕೆಟ್‌ಗೆ 320 ರನ್ ಜೊತೆಯಾಟ ನಡೆಸಿ ವಿಶ್ವದಾಖಲೆ ನಿರ್ಮಿಸಿದೆ.

ಅಟಗಾರ್ತಿ ದೇಶ ಸ್ಕೋರ್ ಯಾವ ತಂಡದ ವಿರುದ್ಧ ಯಾವ ವರ್ಷ
ಬಿಲಿಂಡಾ ಕ್ಲಾರ್ಕ್
ಆಸ್ಟ್ರೇಲಿಯಾ
229* ಡೆನ್ಮಾರ್ಕ್ 1997
ದೀಪ್ತಿ ಶರ್ಮ
ಭಾರತ 188 ಐರ್ಲೆಂಡ್ 2017
ಶೆವರ್ಲೆ ಎಡ್ವರ್ಡ್ಸ್ ಇಂಗ್ಲೆಂಡ್ 173* ಐರ್ಲೆಂಡ್ 1997
ಸ್ಟೆಫನಿ ಟೇಲರ್ ವೆಸ್ಟ್ ಇಂಡೀಸ್ 171 ಶ್ರೀಲಂಕಾ 2013
ತಾಮಿ ಬ್ಯುಮೊಂಟ್ ಇಂಗ್ಲೆಂಡ್ 168 ಪಾಕಿಸ್ತಾನ 2016
ವಿಶ್ವದಾಖಲೆಯ ಜೊತೆಯಾಟ

ವಿಶ್ವದಾಖಲೆಯ ಜೊತೆಯಾಟ

ದೀಪ್ತಿ ಶರ್ಮ ಹಾಗೂ ಪೂನಂ ರಾವುತ್ 45.3 ಓವರ್‌ಗಳಲ್ಲಿ ವಿಶ್ವದಾಖಲೆಯ ಜೊತೆಯಾಟ (320 ರನ್) ಸಾಧಿಸಿದರು. ಜತೆಗೆ ಶಿಖಾ ಪಾಂಡೆ 27 ರನ್(14 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್(358) ದಾಖಲಿಸಿತು. ಇದಕ್ಕೂ ಮುನ್ನ 2004ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 2 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದ್ದು ಅತ್ಯಧಿಕ ಮೊತ್ತವಾಗಿತ್ತು.

ದಾಖಲೆ ಜೊತೆಯಾಟ

ದೀಪ್ತಿ ಶರ್ಮ 188 ರನ್, ಪೂನಂ 109 ರನ್ ಗಳಿಸಿ 320 ಜೊತೆಯಾಟ ಸಾಧಿಸಿದ್ದು, ಯಾವುದೇ ವಿಕೆಟ್ ಗೂ ಅತ್ಯಧಿಕ ಮೊತ್ತದ ಜೊತೆಯಾಟ ಎನಿಸಿಕೊಂಡಿದೆ ಎಂದು ಅಂಕಿ ಅಂಶ ನೀಡಿದ ಮೋಹನ್ ದಾಸ್ ಮೆನನ್

ಅತ್ಯಧಿಕ ವೈಯಕ್ತಿಕ ಮೊತ್ತ

ದೀಪ್ತಿ ಶರ್ಮ 160 ಎಸೆತಗಳಲ್ಲಿ 27 ಬೌಂಡರಿ ಹಾಗೂ 2 ಸಿಕ್ಸರ್ ಗಳ ಬೆಂಬಲದಿಂದ 188 ರನ್ ಗಳಿಸಿದರು. ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೆ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಚತುಷ್ಕೋನ ಸರಣಿ

ಚತುಷ್ಕೋನ ಸರಣಿ

ಚತುಷ್ಕೋನ ಸರಣಿಯಲ್ಲಿ ಭಾರತ, ದಕ್ಷಿಣ ಆಪ್ರಿಕಾ, ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಕಣದಲ್ಲಿವೆ. ಭಾರತ ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಕಳೆದ ಪಂದ್ಯದಲ್ಲಿ ಭಾರತದ ಜೂಲಾನ್ ಗೋಸ್ವಾಮಿ ಅವರು 153ನೆ ಪಂದ್ಯದಲ್ಲಿ 181 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian woman opener Deepti Sharma stormed herself into record books after slamming 188 against Ireland in an ODI match against Ireland on Monday (May 15).
Please Wait while comments are loading...