ವಿಶ್ವಕಪ್ ಕಬಡ್ಡಿ ವೇಳಾಪಟ್ಟಿ : ಕೊರಿಯಾ ವಿರುದ್ಧ ಭಾರತದ ಮೊದಲ ಪಂದ್ಯ

Posted By:
Subscribe to Oneindia Kannada

ಬೆಂಗಳೂರು, ಸೆ.15: ಎಂಟನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚಾಂಪಿಯನ್ ಭಾರತ ತಂಡವನ್ನು ದಕ್ಷಿಣ ಕೊರಿಯಾ ಎದುರಿಸಿದೆ. ಅಕ್ಟೋಬರ್ 7ರಿಂದ 22ವರೆಗೆ ಟೂರ್ನಿ ನಡೆಯಲಿದೆ.

ಭಾರತದಲ್ಲಿ ಪ್ರೊ ಕಬಡ್ಡಿ ಲೀಗ್ ಯಶಸ್ಚಿಯಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಕಪ್ ಕೂಡಾ ಯಶಸ್ವಿಯಾಗುವ ನಿರೀಕ್ಷೆಗಳಿವೆ.

India plays Korea in Kabaddi WC opener

ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ರಿಂದ 22ವರೆಗೆ ಟೂರ್ನಿ ನಡೆಯಲಿದ್ದು, ಒಟ್ಟು 12 ತಂಡಗಳು ಕಣದಲ್ಲಿವೆ.

2 ಗುಂಪುಗಳಲ್ಲಿ ತಲಾ 6 ತಂಡಗಳನ್ನು ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಅ. 21 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಅದರ ಮರುದಿನವೇ ಫೈನಲ್ ನಿಗದಿಯಾಗಿದೆ.ವಿಶ್ವಕಪ್‌ಗೆ ವಿಶೇಷ ಲಾಂಛನವನ್ನು ತಯಾರಿಸಲಾಗಿದ್ದು, ಸಿಂಹ ಗರ್ಜನೆಯ ಮುಖ ಹೊಂದಿದೆ.

ಗುಂಪು ಎ : ಭಾರತ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ
ಗುಂಪು ಬಿ: ಇರಾನ್, ಥಾಯ್ಲೆಂಡ್, ಜಪಾನ್, ಯುಎಸ್ಎ, ಪೋಲೆಂಡ್ ಹಾಗೂ ಕೀನ್ಯಾ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Seven-time champions and favourites India will face South Korea in the opening match of the 2016 Kabaddi World Cup, to be held in Ahmedabad from October 7 to 22.
Please Wait while comments are loading...