ಸ್ಯಾಫ್ ಗೆದ್ದ ಭಾರತ. ಫೀಫಾ ಶ್ರೇಯಾಂಕದಲ್ಲಿ ಮೇಲಕ್ಕೆ

Posted By:
Subscribe to Oneindia Kannada

ಜ್ಯೂರಿಚ್, ಜ. 08: ಭಾರತ ತಂಡ ಇತ್ತೀಚೆಗೆ ನಡೆದ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಅಫ್ಘಾನಿಸ್ತಾನ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಏಳನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ 163ನೇ ಶ್ರೇಯಾಂಕಕ್ಕೇರಿದೆ ಎಂದು ಫೀಫಾ ಗುರುವಾರ ಪ್ರಕಟಿಸಿದೆ.

ಜನವರಿ ೦3 ರಂದು ತಿರುವನಂತಪುರದಲ್ಲಿ ನಡೆದ ಸ್ಯಾಫ್ ಕಪ್ ಫೈನಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಛೆಟ್ರಿ ಹಾಗೂ ಲಲ್ಪೆಖುಯಾ ಅವರ ಗೋಲಿನ ನೆರವಿನಿಂದ ಜಯ ದಾಖಲಿಸಿತು. [ಫುಟ್ಬಾಲ್ ನಿಂದ ಫೀಫಾ, ಯುಇಎಫ್ಎ ಅಧ್ಯಕ್ಷರಿಗೆ ನಿಷೇಧ]

India move up to 163rd in FIFA football rankings after SAFF win

ಇದಕ್ಕೂ ಮುನ್ನ ಮಾಲ್ಡೀವ್ಸ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಲು ಕೂಡಾ ಇದೇ ಇಬ್ಬರು ಆಟಗಾರರ ಪ್ರದರ್ಶನ ಕಾರಣವಾಗಿತ್ತು. ಶ್ರೀಲಂಕಾ (2-0), ನೇಪಾಳ(4-1) ವಿರುದ್ಧ ಗ್ರೂಪ್ ಹಂತದಲ್ಲೂ ಭರ್ಜರಿ ಪ್ರದರ್ಶನ ಕಂಡು ಬಂದಿತ್ತು.[ಕೊಹ್ಲಿ ತಂಡವನ್ನು ಮಣಿಸಿ ಕಪ್ ಗೆದ್ದ ಧೋನಿ ಟೀಂ!]

ಸ್ಯಾಫ್ ಟೂರ್ನಿಯಲ್ಲಿ ಉತ್ತಮ ಆಟ ಪ್ರದರ್ಶಿಸುವ ಮೂಲಕ 139 ಅಂಕ ಗಳಿಸಿರುವ ಭಾರತ ಏಷ್ಯಾ ದೇಶಗಳಲ್ಲಿ 31ನೇ ಸ್ಥಾನ ಹಾಗೂ ಒಟ್ಟಾರೆ 163ನೇ ಸ್ಥಾನಕ್ಕೇರಿದೆ. ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ ಬೆಲ್ಜಿಯಂ ನಂ.1 ಸ್ಥಾನದಲ್ಲಿದೆ. ಅರ್ಜೆಂಟೀನಾ, ಸ್ಪೇನ್, ಜರ್ಮನಿ, ಚಿಲಿ ಹಾಗೂ ಬ್ರೆಝಿಲ್ ಅಗ್ರ ಐದರಲ್ಲಿ ಸ್ಥಾನ ಪಡೆದಿವೆ. ಏಷ್ಯಾ ತಂಡಗಳ ಪೈಕಿ ಇರಾನ್ 43ನೇ ಸ್ಥಾನದಲ್ಲಿದೆ, ದಕ್ಷಿಣ ಕೊರಿಯಾ 51ನೇ ಸ್ಥಾನ ಪಡೆದುಕೊಂಡಿದೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India moved up three places to the 163rd spot in the FIFA football rankings, released on Thursday, after its SAFF Cup triumph this month.
Please Wait while comments are loading...