ಪುರುಷರ ಹಾಕಿ: ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಭಾರತ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೊ, ಆಗಸ್ಟ್ 15: ರಿಯೋ ಒಲಿಂಪಿಕ್ಸ್​ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಸೋಲು ಕಂಡಿದೆ. ಬೆಲ್ಜಿಯಂ ವಿರುದ್ಧ ಆರಂಭದಲ್ಲಿ ಮುನ್ನಡೆ ಪಡೆದರೂ ನಂತರ ರಕ್ಷಣಾತ್ಮಕ ಆಟದಿಂದ ಹಿನ್ನಡೆ ಅನುಭವಿಸಿತು. ಇದರಿಂದ 1980ರ ಬಳಿಕ ಮೊದಲ ಬಾರಿ ಸೆಮೀಸ್ ಮತ್ತು ಪದಕ ಗೆಲ್ಲುವ ಆಸೆ ನುಚ್ಚುನೂರಾಯಿತು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಭಾನುವಾರ ನಡೆದ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಭಾರತ 1-3 ಗೋಲುಗಳಿಂದ ಬೆಲ್ಜಿಯಂ ಎದುರು ಶರಣಾಯಿತು. ಭಾರತದ ಪರ ಆಕಾಶ್​ದೀಪ್ ಸಿಂಗ್ ಏಕೈಕ ಗೋಲು ದಾಖಲಿಸಿ ಭಾರತ ಆರಂಭಿಕ ಮುನ್ನಡೆ ಕಾಯ್ದುಕೊಂಡಿತು. ಸೆಮೀಸ್ ಪ್ರವೇಶಿಸುವ ಕನಸಿನೊಂದಿಗೆ ಅಖಾಡಕ್ಕಿಳಿದ ಭಾರತ ತಂಡ ಆರಂಭಿಕ ನಿಮಿಷಗಳಿಂದಲೇ ಎದುರಾಳಿ ತಂಡದೆದುರು ಮೇಲುಗೈ ಸಾಧಿಸಿತು. [ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲದಿದ್ದರೂ, ಭಾರತ ಗೆದ್ದ ದೀಪಾ!]

India lose to Belgium 1-3 in Hockey quarters, Olympic journey ends.

15ನೇ ನಿಮಿಷದಲ್ಲಿ ಸಿಕ್ಕ ಪಾಸ್​ಅನ್ನು ಗೋಲಾಗಿ ಪರಿವರ್ತಿಸಿದ ಆಕಾಶ್​ದೀಪ್ ಸಿಂಗ್ ಆರಂಭಿಕ ಮುನ್ನಡೆ ತಂದುಕೊಟ್ಟರು. ಜತೆಗೆ 2ನೇ ಕ್ವಾರ್ಟರ್​ನಲ್ಲಿ ಸಮಬಲ ಹೋರಾಟ ನೀಡಿದ ಭಾರತ ಮೊದಲಾರ್ಧದಲ್ಲಿ 1-0ಯಿಂದ ಮುನ್ನಡೆ ಉಳಿಸಿಕೊಂಡಿತ್ತು. ದ್ವಿತೀಯಾರ್ಧದಲ್ಲಿ ಬೆಲ್ಜಿಯಂ ಭಾರತದಕ್ಕೆ ಫೀಲ್ಡ್ ​ಗೋಲಿನ ಮೂಲಕ ಶಾಕ್ ನೀಡಿತು.

ಇದರಿಂದ ಭಾರತ ಹಿನ್ನಡೆಯ ಒತ್ತಡ ಎದುರಿಸಿದರೆ, ಬೆಲ್ಜಿಯಂ ನಾಲ್ಕನೇ ಕ್ವಾರ್ಟರ್​ನಲ್ಲೂ ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಕಾಯ್ದುಕೊಳ್ಳಲು ವಿಫಲವಾದ ಭಾರತ ಸೋಲಿನೊಂದಿಗೆ ರಿಯೋ ಒಲಿಂಪಿಕ್ಸ್ ದಿಂದ ಹೊರ ನಡೆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's men's hockey team lost to Belgium 1-3 in the quarter-finals of the Olympic Games here on Sunday (Aug 14).
Please Wait while comments are loading...